May 7, 2026

ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌!

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ ಮೇ 6ರಿಂದ 12ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಉತ್ತರ ತೆಲಂಗಾಣದಿಂದ ಮನ್ನಾರ್ ಕೊಲ್ಲಿವರೆಗೆ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ವಾತಾವರಣ ನಿರ್ಮಾಣವಾಗಿದೆ. ಮೇ 7 ಮತ್ತು 8ರಂದು ಹಾಸನ, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಸಾಧಾರಣದಿಂದ […]

ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌! Read More »

ಆಪರೇಷನ್‌ ಸಿಂಧೂರ್‌ಗೆ ವರ್ಷದ ಸಂಭ್ರಮ : ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದ್ದು ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರ ವಿರುದ್ಧ ನಡೆದಿದ್ದ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಒಂದು ವರ್ಷದ ಹಿಂದೆ, ಭಾರತದ ಭದ್ರತೆಗೆ ಸವಾಲಾಗಿದ್ದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ಬೆಂಬಲ ನೀಡುವ ಶಕ್ತಿಗಳನ್ನು ಭಾರತೀಯ ಸೇನೆ ಹುಡುಕಿ ಶಿಕ್ಷಿಸುತ್ತದೆ ಎಂಬಸಂದೇಶವನ್ನು ಈ ವೀಡಿಯೊ ನೀಡಿದೆ.

ಆಪರೇಷನ್‌ ಸಿಂಧೂರ್‌ಗೆ ವರ್ಷದ ಸಂಭ್ರಮ : ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ Read More »

ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ

ಚೆಂಬು ಗ್ರಾಮದ ಶ್ರೀ ಮಾಡ ದೇವಸ್ಥಾನ ಉಳ್ಳಾ ಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ 6 ರಂದು ನಡೆಯಿತು.ಉಳ್ಳಾಕುಲು ದೈವದ ಕುದುರೆ ಬಂಡಿ ಉತ್ಸವ, ಬಳಿಕ ಉಳ್ಳಾಕುಲು ದೈವದ ಪಗ್ಗು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ದೈವಸ್ಥಾನದ ಸಮಿತಿಯವರು ಊರ – ಪರವೂರ ಭಕ್ತಾಧಿಗಳು ಆಗಮಿಸಿ ದೈವದ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು..

ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ Read More »

error: Content is protected !!
Scroll to Top