June 10, 2026

ಉದ್ಯಮಿ ಆನಂದ ಕಲ್ಲುಗದ್ದೆ ರವರಿಂದ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಕೊಡುಗೆ

ಬೆಂಗಳೂರಿನಲ್ಲಿ ನೆಲೆಸಿರುವ ಸಾಫ್ಟ್ ವೇರ್ ಉಧ್ಯಮಿ ಅರಂತೋಡಿನ ಆನಂದ ಕಲ್ಲುಗದ್ದೆಯವರು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧಾರ್ಥಿಗಳಿಗೆ ಪ್ರತೀ ವರ್ಷ ಉಚಿತವಾಗಿ ನೀಡುವ ನೋಟ್ ಪುಸ್ತಕಗಳನ್ನು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 190 ವಿದ್ಯಾರ್ಥಿಗಳಿಗೆ ಜೂ.9 ರಂದು ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಉಳುವಾರು ರವರು ವಹಿಸಿದರು.ನೋಟ್ ಪುಸ್ತಕಗಳನ್ನು ಅರಂತೋಡು ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕಿ ಮಮತಾ ವಿಧಾರ್ಥಿಗಳಿಗೆ ವಿತರಿಸಿದರು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ […]

ಉದ್ಯಮಿ ಆನಂದ ಕಲ್ಲುಗದ್ದೆ ರವರಿಂದ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಕೊಡುಗೆ Read More »

ಕು. ಅಭಿಜ್ಞಾ ಭಟ್ ನಿಧನ

ಸುಳ್ಯದ ಇಎನ್ ಟಿ ವೈದ್ಯ ಡಾ. ರವಿಶಂಕರ್ ರವರ ಹಿರಿಯ ಪುತ್ರಿ ಕು. ಅಭಿಜ್ಞಾ ಭಟ್ (ವರ್ಷ)ಅಲ್ಪಕಾಲದ ಅಸೌಖ್ಯದಿಂದ ಜೂ.10 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅಭಿಜ್ಞಾ ಭಟ್ ಇತ್ತೀಚಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 ಅಂಕಗಳೊಂದಿಗೆ ರಾಜ್ಯದಲ್ಲಿ 4 ನೇ ರ್ಯಾಂಕ್ ಪಡೆದಿದ್ದರು.

ಕು. ಅಭಿಜ್ಞಾ ಭಟ್ ನಿಧನ Read More »

ಅರಂತೋಡು ಅನ್ವಾರುಲ್ ಹುಧಾ ಅಸೋಸಿಯೇಶನ್ 50 ನೇ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ

1976 ರಲ್ಲಿ ಸ್ಥಾಪನೆಗೊಂಡ ಅರಂತೋಡು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ನ 50 ನೇ ವಾರ್ಷಿಕ ಸುವರ್ಣ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮಕ್ಕೆ ಸಮಸ್ತ ಜಂಇತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೊಯ ತಂಙಳ್ ರವರು ಜೂ. 9 ರಂದು ಅರಂತೋಡಿನಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಖತೀಬರಾದ ಆಸಿಫ್ ಅಝ್ಹರಿ, ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ,

ಅರಂತೋಡು ಅನ್ವಾರುಲ್ ಹುಧಾ ಅಸೋಸಿಯೇಶನ್ 50 ನೇ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ Read More »

ಪಾಕ್ ಬಾಂಬ್ ದಾಳಿ – 11 ಮಕ್ಕಳು ಸೇರಿದಂತೆ 13 ಮಂದಿ ಸಾವು

ಅಫ್ಘಾನಿಸ್ತಾನದ ಗಡಿಯಲ್ಲಿ ಪಾಕಿಸ್ತಾನ ಸೇನೆ ಬಾಂಬ್ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಈ ದಾಳಿಯಲ್ಲಿ 11 ಮಕ್ಕಳು ಸೇರಿ ಕನಿಷ್ಠ 13 ಜನ ಸಾವನ್ನಪ್ಪಿದ್ದು, 14 ಜನ ಗಾಯಗೊಂಡಿದ್ದಾರೆ ಎಂದು ವಕ್ತಾರ ಜಬೀಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಇದು ಅಮಾನವೀಯ ಕೃತ್ಯ ಎಂದು ಖಂಡಿಸಿದ್ದಾರೆ. ಪಾಕಿಸ್ತಾನ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತವೂ ಪಾಕಿಸ್ತಾನದ ಈ ಕೃತ್ಯವನ್ನು ಖಂಡಿಸಿದೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಫೆಬ್ರವರಿಯಿಂದ ಗಡಿ ಸಂಘರ್ಷದಲ್ಲಿ

ಪಾಕ್ ಬಾಂಬ್ ದಾಳಿ – 11 ಮಕ್ಕಳು ಸೇರಿದಂತೆ 13 ಮಂದಿ ಸಾವು Read More »

ಪ್ರಧಾನ ಸೇವಕ ನರೇಂದ್ರ ಮೋದಿ ಅವರ 4399 ದಿನಗಳ ನಿರಂತರ ಜನಸೇವೆಯ ಪ್ರಯುಕ್ತ ವಿಶೇಷ ಪೂಜೆ

ಸುಳ್ಯ : ಭಾರತದ ಪ್ರಧಾನಮಂತ್ರಿಯಾಗಿ ಸತತ 4399 ದಿನಗಳ ಕಾಲ ನಿರಂತರವಾಗಿ ಜನಸೇವೆ ಸಲ್ಲಿಸಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಪ್ರಧಾನಸೇವಕ ನರೇಂದ್ರ ಮೋದಿ ಅವರ ಹೆಸರಿನಲ್ಲಿ BJP ಸುಳ್ಯ ಮಂಡಲದ ವತಿಯಿಂದ ಪೆರುವಾಜೆ ಜಲದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ,ಹಾಗೂ ಮಹಾಮಂಗಳಾರತಿಯನ್ನು ಶ್ರದ್ಧಾ-ಭಕ್ತಿಯಿಂದ ಸಲ್ಲಿಸಲಾಯಿತು.​ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ 4398 ದಿನಗಳ ಆಡಳಿತದ ದಾಖಲೆಯನ್ನು ದಾಟಿ, ಅತ್ಯಂತ ದೀರ್ಘಾವಧಿಗೆ ಸತತವಾಗಿ ದೇಶ ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮೋದಿ ಅವರ ಈ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು

ಪ್ರಧಾನ ಸೇವಕ ನರೇಂದ್ರ ಮೋದಿ ಅವರ 4399 ದಿನಗಳ ನಿರಂತರ ಜನಸೇವೆಯ ಪ್ರಯುಕ್ತ ವಿಶೇಷ ಪೂಜೆ Read More »

ಸುಳ್ಯ : ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

ಸುಳ್ಯದ ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಜೂ.9ರಂದು ನಡೆಯಿತು.ದೈವಸ್ಥಾನದಲ್ಲಿ ಪ್ರಾರ್ಥಿಸಿ ಚಪ್ಪರ ಕೆಲಸಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿಆಡಳಿತ ಧರ್ಮದರ್ಶಿಗಳಾದ ಪಿ.ಕೆ.ಉಮೇಶ್ ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಜಿ.ಜಿ.ನಾಯಕ್, ಸಮಿತಿ ಸದಸ್ಯರಾದ ಚಂದ್ರಶೇಖರ ಪಿ.ಆ‌ರ್, ಸತ್ಯಪ್ರಸಾದ್ ಕೆ, ಕೋಶಾಧಿಕಾರಿ ಅವಿನಾಶ್ ಕುರುಂಜಿ, ಗೋಪಾಲಕೃಷ್ಣ ಕೆ.ಎಸ್, ಗುರುದತ್ ನಾಯಕ್, ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಇತರರು ಉಪಸ್ಥಿತರಿದ್ದರು.

ಸುಳ್ಯ : ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ Read More »

error: Content is protected !!
Scroll to Top