ಉದ್ಯಮಿ ಆನಂದ ಕಲ್ಲುಗದ್ದೆ ರವರಿಂದ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಕೊಡುಗೆ

ಬೆಂಗಳೂರಿನಲ್ಲಿ ನೆಲೆಸಿರುವ ಸಾಫ್ಟ್ ವೇರ್ ಉಧ್ಯಮಿ ಅರಂತೋಡಿನ ಆನಂದ ಕಲ್ಲುಗದ್ದೆಯವರು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧಾರ್ಥಿಗಳಿಗೆ ಪ್ರತೀ ವರ್ಷ ಉಚಿತವಾಗಿ ನೀಡುವ ನೋಟ್ ಪುಸ್ತಕಗಳನ್ನು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 190 ವಿದ್ಯಾರ್ಥಿಗಳಿಗೆ ಜೂ.9 ರಂದು ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಉಳುವಾರು ರವರು ವಹಿಸಿದರು.
ನೋಟ್ ಪುಸ್ತಕಗಳನ್ನು ಅರಂತೋಡು ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕಿ ಮಮತಾ ವಿಧಾರ್ಥಿಗಳಿಗೆ ವಿತರಿಸಿದರು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್, ಹಿರಿಯ ಶಿಕ್ಷಕಿ ಬಾನುಮತಿ, ದೈಹಿಕ ಶಿಕ್ಷಣ ಅಧ್ಯಾಪಕ ಧನಂಜಯ ಮೇರ್ಕಜೆ ಅಧ್ಯಾಪಕ ವೃಂದ, ಎಸ್.ಡಿ.ಎಂ.ಸಿ ಪಧಾಧಿಕಾರಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.











































































































Leave a Comment

Your email address will not be published. Required fields are marked *

error: Content is protected !!
Scroll to Top