June 28, 2026

ಅರಂತೋಡು : ಒಕ್ಕೂಟ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಆಯ್ಕೆ

ಶ್ರೀ ಕ್ಷೇ.ಧ.ಗ್ರಾ.ಯೋಜನೆ (ರಿ) ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಯದ ಅರಂತೊಡು ಒಕ್ಕೂಟದ ನೂತನ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಇವರು ಆಯ್ಕೆಯಾಗಿರುತ್ತಾರೆ.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರತ್ನಾವತಿ ಅಳಿಕೆ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಒಕ್ಕೂಟದ ಪದಾದಿಕಾರಿಗಳು, ಎಲ್ಲಾ ಸಂಘಗಳ ಸದಸ್ಯರುಗಳು ಸೇವಾ ಪ್ರತಿನಿಧಿ ಗೀತಾ, ಹಾಗೂ ತೊಡಿಕಾನ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ ಉಪಸ್ಥಿತರಿದ್ದರು.

ಅರಂತೋಡು : ಒಕ್ಕೂಟ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಆಯ್ಕೆ Read More »

ತೊಡಿಕಾನ : ಭಾ.ಜ.ಪ ವತಿಯಿಂದ ಮನ್ ಕಿ ಬಾತ್ ಮತ್ತು ಗಿಡ ನೆಡುವ ಕಾರ್ಯಕ್ರಮ

ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿ ಗಾರು ಮಹಾ ಶಕ್ತಿಕೇಂದ್ರದ ತೊಡಿಕಾನ ಶಕ್ತಿ ಕೇಂದ್ರದಲ್ಲಿ ತೊಡಿಕಾನ ಗ್ರಾಮದ ಬೂತ್ ಸಮಿತಿ 220 ಇದರ ವತಿಯಿಂದ ಜೂನ್ 28ರಂದು ನಡೆದ ಪ್ರಧಾನಿ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಭಾಜಪ ಕಾರ್ಯಕರ್ತರಾದ ಮಹೇಶ್ ಕುತ್ತ ಮೊಟ್ಟೆಯವರ ಮನೆಯಲ್ಲಿ ಆಲಿಸಲಾಯಿತು.ಈ ಸಂದರ್ಭದಲ್ಲಿ ಸುಳ್ಯ ಭಾಜಪ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಮಂಡಲ ಸಮಿತಿ ಸದಸ್ಯರಾದ ಪ್ರಶಾಂತ ಕಾಫಿಲ ,ಒಬಿಸಿ ಮೋರ್ಚಾದ ಕಾರ್ಯದರ್ಶಿಯಾದ ಅಶೋಕ ಜಾಲ್ಸೂರು, ಶಕ್ತಿಕೇಂದ್ರ ಪ್ರಮುಖರಾದ ಚಂದ್ರಶೇಖರ

ತೊಡಿಕಾನ : ಭಾ.ಜ.ಪ ವತಿಯಿಂದ ಮನ್ ಕಿ ಬಾತ್ ಮತ್ತು ಗಿಡ ನೆಡುವ ಕಾರ್ಯಕ್ರಮ Read More »

ಜು.6; ಸಚಿವ ಯು. ಟಿ ಖಾದರ್ ಅವರಿಗೆ ಅಭಿನಂದನಾ ಸಮಾರಂಭ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ಯು ಟಿ ಖಾದರ್ ಅವರಿಗೆ ಜುಲೈ 6 ರಂದು ಸುಳ್ಯದ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಸಾರ್ವಜನಿಕ ಅಭಿನಂದನಾ ಸಭೆ ನಡೆಯಲಿದೆ ಎಂದು ಅಭಿನಂದನಾ ಸಮಿತಿಯ ಸಂಚಾಲಕ ಭರತ್ ಮುಂಡೋಡಿ ಹೇಳಿದರು.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜೂ.27ರಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ರಾಜಕೀಯ ರಹಿತವಾಗಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಎಲ್ಲಾ ರಾಜಕೀಯ ಪಕ್ಷದವರಿದ್ದಾರೆ.‌ಸಮಾರಂಭವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸುಳ್ಯದ ಎಲ್ಲಾ ಮುಖಂಡರುಗಳು ಸೇರಿ ಸುಳ್ಯದ ಸರ್ವರನ್ನು ಒಗ್ಗೂಡಿಸಿಕೊಂಡು

ಜು.6; ಸಚಿವ ಯು. ಟಿ ಖಾದರ್ ಅವರಿಗೆ ಅಭಿನಂದನಾ ಸಮಾರಂಭ Read More »

ವಿದ್ಯುತ್ ಕಂಪನಿಗಳನ್ನು ಟಾಟಾ ಪವರ್ ಕಂಪನಿಗೆ ನೀಡುವ ಯೋಜನೆಯನ್ನು ಖಂಡಿಸಿ ರೈತ ಸಂಘದಿಂದ ಮನವಿ

ರಾಜ್ಯದಲ್ಲಿರುವ ಸರಕಾರಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣಗೊಳಿಸಿ ಟಾಟಾ ಪವರ್ ಕಂಪನಿಗೆ ಲೈಸನ್ಸ್‌ ನೀಡುವ ಯೋಜನೆಯನ್ನು ಖಂಡಿಸಿ ರೈತ ಸಂಘದ ಸುಳ್ಯ ತಾಲೂಕು ಘಟಕ ತಹಶೀಲ್ದಾ‌ರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದೆ.ಖಾಸಗೀಕರಣದಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಸರಕಾರದಿಂದ ರೈತರು ಹಾಗೂ ಗ್ರಾಹಕರಿಗೆ ಸಿಗುವ ವಿವಿಧ ಸೌಲಭ್ಯಗಳು ಕಡಿತಗೊಳ್ಳುವ ಸಾಧ್ಯತೆಯಿದೆ.ಆದುದರಿಂದ ಲಾಭದಲ್ಲಿ ಇರುವ ಮೆಸ್ಕಾಂ ಕಂಪನಿಯನ್ನು ಯಾವಕಾರಣಕ್ಕೂ ಟಾಟಾ ಪವರ್ ಕಂಪನಿಯವರಿಗೆ ಹಸ್ತಾಂತರಿಸಬಾರದು. ರೈತರ ಹಾಗೂ ಜನಸಾಮಾನ್ಯರ ಪರವಾಗಿ ರೈತ ಸಂಘವು ವಿರೋಧಿಸುತ್ತದೆ. ಹಾಗಾಗಿ ಈ ಕೂಡಲೇ

ವಿದ್ಯುತ್ ಕಂಪನಿಗಳನ್ನು ಟಾಟಾ ಪವರ್ ಕಂಪನಿಗೆ ನೀಡುವ ಯೋಜನೆಯನ್ನು ಖಂಡಿಸಿ ರೈತ ಸಂಘದಿಂದ ಮನವಿ Read More »

ಅರಂತೋಡು : ಕುರುಂಜಿ‌ ತಂಗಮ ನಿಧನ

ಅರಂತೋಡು ಗ್ರಾಮದ ಅಂಗಡಿಮಜಲು ಬಳಿಯ ಕುರುಂಜಿ ಬೆಳ್ಯಪ್ಪ ಗೌಡರ ಪತ್ನಿ ತಂಗಮ್ಮ (92 ವರ್ಷ)ರವರು ಜೂ. 28ರಂದು ಸ್ವಗ್ರಹದಲ್ಲಿ ನಿಧನರಾದರು.ಮೃತರು ಪುತ್ರರಾದ ರಾಮಮೋಹನ್ ಕುರುಂಜಿ, ದಯಾನಂದ ಕುರುಂಜಿ, ಪುತ್ರಿ ಕುಸುಮಾ ಸಂಜೀವ ಮಾಳ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಗಖು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅರಂತೋಡು : ಕುರುಂಜಿ‌ ತಂಗಮ ನಿಧನ Read More »

ಜಿನಿಗುವ ಮಳೆಯ ನಡುವೆಯೂ ನಡೆದ ಆರಂತೋಡು ಗ್ರಾಮ ಪಂಚಾಯತಿನ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ.

ಅರಂತೋಡು, ಜೂ. 28 : ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಕಾಂಕ್ಷಿ ಯೋಜನೆಯಾದ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮದ ಸರಣಿಯ 85ನೇ ಕಾರ್ಯಕ್ರಮವು ಸುವರ್ಣ ಸಂಭ್ರಮದಲ್ಲಿರುವ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಶೋಸಿಯೇಶ್ ಮತ್ತು ವಿಖಾಯ ತುರ್ತು ನಿರ್ವಹಣಾ ಸಂಘ ಆರಂತೋಡು ಇದರ ಸಹಯೋಗದೊಂದಿಗೆ ನಡೆಯುತು.ಆರಂತೋಡು ಗ್ರಾಮ ಪಂಚಾಯತ್ 2018 ಡಿಸೆಂಬರ್ ತಿಂಗಳಿಂದ ಕೊನೆಯ ಆದಿತ್ಯವಾರದಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಜೂ.28ರಂದು

ಜಿನಿಗುವ ಮಳೆಯ ನಡುವೆಯೂ ನಡೆದ ಆರಂತೋಡು ಗ್ರಾಮ ಪಂಚಾಯತಿನ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ. Read More »

ಅರಂತೋಡು : ನಿವೃತ್ತ ಮುಖ್ಯ ಶಿಕ್ಷಕಿ ಸರೋಜನಿ ಕಲ್ಲುಗದ್ದೆ ನಿಧನ

ಅರಂತೋಡು ಗ್ರಾಮದ ಕಲ್ಲುಗದ್ದೆ ನಿವೃತ್ತ ಮುಖ್ಯ ಶಿಕ್ಷಕ ದಿ. ಜತ್ತಪ್ಪ ಗೌಡರ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಸರೋಜಿನಿ(83ವರ್ಷ) ಕಲ್ಲುಗದ್ದೆಯವರು ಅಸೌಖ್ಯದಿಂದ ಜೂ. 28ರಂದು ಸ್ವಗೃಹದಲ್ಲಿ ನಿಧನರಾದರು.ಗೂನಡ್ಕ ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪುತ್ರರಾದ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆ, ಕೃಷಿಕರಾದ ಹರಿಪ್ರಸಾದ್ ಕಲ್ಲುಗದ್ದೆ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ದಿವಾಕರ ಕಲ್ಲುಗದ್ದೆ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ತಾರಾನಾಥ ಕಲ್ಲುಗದ್ದೆ, ಪುತ್ರಿ

ಅರಂತೋಡು : ನಿವೃತ್ತ ಮುಖ್ಯ ಶಿಕ್ಷಕಿ ಸರೋಜನಿ ಕಲ್ಲುಗದ್ದೆ ನಿಧನ Read More »

ಸುಳ್ಯದ ಆದರ್ಶ ಸೌಹಾರ್ದ ಸಹಕಾರ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮಿಪೂಜೆ ಮತ್ತು ಗಣಹೋಮ

ಸಹಕಾರಿ ರತ್ನ ಸವಣೂರು ಕೆ. ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸುಳ್ಯ ಶಾಖೆಯಲ್ಲಿ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೀಪೂಜೆ ಮತ್ತು ಗಣಹೋಮ ಜೂ. 28ರಂದು ಪುರೋಹಿತರಾದ ಶಿವಕುಮಾರ್ ಭಟ್ ಎಡಮಂಗಲರವರ ನೇತೃತ್ವದಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾಗಿರುವ ಕೆ. ಸೀತಾರಾಮ ರೈ ಸವಣೂರು, ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ, ಸುಳ್ಯ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವಪ್ರಭಾಕರನ್ ನಾಯರ್, ನ್ಯಾಯವಾದಿ ಎನ್. ಜಯಪ್ರಕಾಶ್

ಸುಳ್ಯದ ಆದರ್ಶ ಸೌಹಾರ್ದ ಸಹಕಾರ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮಿಪೂಜೆ ಮತ್ತು ಗಣಹೋಮ Read More »

error: Content is protected !!
Scroll to Top