ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿ ಗಾರು ಮಹಾ ಶಕ್ತಿಕೇಂದ್ರದ ತೊಡಿಕಾನ ಶಕ್ತಿ ಕೇಂದ್ರದಲ್ಲಿ ತೊಡಿಕಾನ ಗ್ರಾಮದ ಬೂತ್ ಸಮಿತಿ 220 ಇದರ ವತಿಯಿಂದ ಜೂನ್ 28ರಂದು ನಡೆದ ಪ್ರಧಾನಿ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಭಾಜಪ ಕಾರ್ಯಕರ್ತರಾದ ಮಹೇಶ್ ಕುತ್ತ ಮೊಟ್ಟೆಯವರ ಮನೆಯಲ್ಲಿ ಆಲಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಭಾಜಪ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಮಂಡಲ ಸಮಿತಿ ಸದಸ್ಯರಾದ ಪ್ರಶಾಂತ ಕಾಫಿಲ ,ಒಬಿಸಿ ಮೋರ್ಚಾದ ಕಾರ್ಯದರ್ಶಿಯಾದ ಅಶೋಕ ಜಾಲ್ಸೂರು, ಶಕ್ತಿಕೇಂದ್ರ ಪ್ರಮುಖರಾದ ಚಂದ್ರಶೇಖರ ಆಚಾರ್ಯ, ಬೂತ್ ಸಮಿತಿ ಅಧ್ಯಕ್ಷರಾದ ಭವಿತ್ ಬಾಳೆ ಕಜೆ ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತ ಮೊಟ್ಟೆ, ಕಾರ್ಯಕರ್ತರಾದ ಶಿವಪ್ರಸಾದ್ ಕುಂದಲ್ಪಾಡಿ, ಮಹೇಶ ಕುತ್ತ ಮೊಟ್ಟೆ ,ಆಶಾ ಮಹೇಶ ಕುತ್ತ ಮೊಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇವರ ಮನೆಯ ವಠಾರದಲ್ಲಿ ಗಿಡ ನೆಡಲಾಯಿತು.
221 ಬೂತಿನ ಹಿರಿಯ ಕಾರ್ಯಕರ್ತರಾದ ಸುಧಾಕರ ಏ. ಜಿಯವರ ಮನೆಗೆ ಭೇಟಿ ನೀಡಲಾಯಿತು.
ಶಕ್ತಿ ಕೇಂದ್ರ ಪ್ರಮುಖರಾದ ಚಂದ್ರಶೇಖರ ಆಚಾರ್ಯರ ಮನೆಯಲ್ಲಿ ತಾಯಿಗೊಂದು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತೊಡಿಕಾನ : ಭಾ.ಜ.ಪ ವತಿಯಿಂದ ಮನ್ ಕಿ ಬಾತ್ ಮತ್ತು ಗಿಡ ನೆಡುವ ಕಾರ್ಯಕ್ರಮ






























































