July 2026

ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ

ರಾಜ್ಯದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ.ಜುಲೈ 2 ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಮಲೆನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಜುಲೈ 5 ವರೆಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ Read More »

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಧಾರಾವಾಹಿ, ಸಿನಿಮಾ ಚಿತ್ರೀಕರಣ ನಿಷೇಧ

ವಿದ್ಯಾರ್ಥಿಗಳ ಸುರಕ್ಷತೆ, ಗೌಪ್ಯತೆ, ಶೈಕ್ಷಣಿಕ ಅಡಚಣೆ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ, ಸರ್ಕಾರಿ ಶಾಲೆಗಳ ಆವರಣದಲ್ಲಿ ಸಿನಿಮಾ, ಕಿರುಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ರೀತಿಯ ಚಿತ್ರೀಕರಣವನ್ನು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಪೋಷಕರ ಆಕ್ಷೇಪವನ್ನೂ ಪರಿಗಣಿಸಲಾಗಿದೆ. ಈ ನಿಯಮವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಧಾರಾವಾಹಿ, ಸಿನಿಮಾ ಚಿತ್ರೀಕರಣ ನಿಷೇಧ Read More »

ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮ

ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮವನ್ನು ಪ್ರದೀಪ್ ಕ್ರಾಫ್ಟ್ ವರ್ಕ್ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್ ಕರಿಕೆ ಜು.1ರಂದು ನಡೆಸಿಕೊಟ್ಟರು. ತೆಂಗಿನ ಗೆರಟೆಯಲ್ಲಿ ವಿವಿಧ ಗೃಹ ಉಪಯೋಗಿ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿತೆ ಮೂಲಕ ತೊರಿಸಲಾಯಿತು. ಸ್ವದೇಶಿ ನಿರ್ಮಿತ ವಸ್ತುವಿನ ಬಳಕೆಯಿಂದ ಪರಿಸರ ಸಂರಕ್ಷಣೆಯ ಜೊತೆಗೆ ದೇಹದ ಆರೋಗ್ಯಕ್ಕೆ ಮತ್ತು ದೇಶದ ಆರ್ಥಿಕತೆಗೆ ಅದ್ಭುತ ಶಕ್ತಿಯನ್ನು ನೀಡಬಹುದು ಎಂಬುದಾಗಿ ಅವರು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಪ್ರದೀಪ್ ಕರಿಕೆ ಅವರನ್ನು

ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮ Read More »

ಸುಳ್ಯ ಪಿ.ಎಲ್.ಡಿ ಬ್ಯಾಂಕ್ ನಿಂದ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ “ಸಹಕಾರ ವಾರ” ಆಚರಣೆ- ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ

ಸುಳ್ಯ ಪಿ ಎಲ್ ಡಿ ಬ್ಯಾಂಕ್ ವತಿಯಿಂದ ಕೇಂದ್ರ ಸರ್ಕಾರದ ” ಸಹಕಾರ ವಾರ” ಕಾರ್ಯಕ್ರಮದ ಅಂಗವಾಗಿ ಶಾಲಾ ಅವರಣದಲ್ಲಿ ನಾನಾ ಹಣ್ಣಿನ ಗಿಡಗಳನ್ನು ನೆಡಲಾಯಿತು.ಸುಳ್ಯ ಪಿ.ಎಲ್. ಡಿ ಬ್ಯಾಂಕಿನ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ದಿಲೀಪ್ ಹೆಚ್. ಹೆಚ್, ಸುಳ್ಯ ವ್ಯವಸ್ಥಾಪಕಿ ಉಷಾ ಸುವರ್ಣ, ಸಿಬ್ಬಂದಿಗಳಾದ ದಾಮೋದರ, ಅಶ್ವಿತ್, ಶಾಲಾ ಮುಖ್ಯಶಿಕ್ಷಕಿ ಜಯ ಲತಾ ಕೆ.ಆರ್., ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಬ್ಯಾಂಕಿನ

ಸುಳ್ಯ ಪಿ.ಎಲ್.ಡಿ ಬ್ಯಾಂಕ್ ನಿಂದ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ “ಸಹಕಾರ ವಾರ” ಆಚರಣೆ- ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ Read More »

ನಾಗುರಿ ದುರಂತದ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕ್ಯಾ.ಚೌಟ

ಮಂಗಳೂರು: ನಾಗುರಿಯಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದಲ್ಲಿ ಗಾಯಗೊಂಡು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ದುರಂತದಿಂದ ಬದುಕುಳಿದು ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಾಲಕೃಷ್ಣ ಮತ್ತು ಮಕ್ಕಳಾದ ಅಲ್ಕಾ ಹಾಗೂ ಅನುಷಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು. ನಾಗುರಿ ಬಳಿ

ನಾಗುರಿ ದುರಂತದ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕ್ಯಾ.ಚೌಟ Read More »

ಅರೆಭಾಷೆ ಅಕಾಡೆಮಿ ವತಿಯಿಂದ ಐನ್‌ಮನೆಗಳ ಅಧ್ಯಯನ ಪ್ರವಾಸ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಧ್ಯಕ್ಷರಾದ ಸದಾನಂದ ಮಾವಜಿ ಇವರ ನೇತೃತ್ವದಲ್ಲಿ ಐನ್‌ಮನೆಗಳ ತುಲನಾತ್ಮಕ ಅಧ್ಯಯನ ಕಾರ್ಯಕ್ಕಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಎರಡು ದಿನಗಳ ಅಧ್ಯಯನ ಪ್ರವಾಸ ಹಮ್ಮಿಕೊಂಡಿತ್ತು.ಈ ಸಂದರ್ಭದಲ್ಲಿ ತೀರ್ಥಹಳ್ಳಿ ಸಮೀಪದಲ್ಲಿರುವ ಕೊಳಗಿ ಮನೆ, ದೇವಂಗಿ ಮನೆ, ಕೊಳಾವರ ಮನೆ ಹಾಗೂ ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದಲ್ಲಿರುವ ಕೊರ್ಗಿ ಮನೆಗಳಿಗೆ ಭೇಟಿ ನೀಡಲಾಯಿತು.ಮನೆಗಳ ಬಗೆಗಿನ ವಿನ್ಯಾಸ, ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳು, ಮೂಲ, ಅಂದಿಗೂ ಇಂದಿಗೂ ಇರುವ

ಅರೆಭಾಷೆ ಅಕಾಡೆಮಿ ವತಿಯಿಂದ ಐನ್‌ಮನೆಗಳ ಅಧ್ಯಯನ ಪ್ರವಾಸ Read More »

ದ.ಕ ಜಿಲ್ಲೆಯ ಅಂಗನವಾಡಿ,ಶಾಲೆ,ಪದವಿ ಪೂರ್ವ ಕಾಲೇಜುಗಳಿವೆ ನಾಳೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.2ರಂದು ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜು.2ರಂದು ಅಂಗನವಾಡಿ, ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ,

ದ.ಕ ಜಿಲ್ಲೆಯ ಅಂಗನವಾಡಿ,ಶಾಲೆ,ಪದವಿ ಪೂರ್ವ ಕಾಲೇಜುಗಳಿವೆ ನಾಳೆ ರಜೆ ಘೋಷಣೆ Read More »

ದ.ಕ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವೇ ಇಲ್ಲವೆಂದು ಶಾಸಕ ಎಸ್.ಆರ್ ವಿಶ್ವನಾಥ ಹೇಳಿಕೆ ನೀಡಿರುವುದು ಖಂಡನೀಯ : ದಿನೇಶ್ ಮಡಪ್ಪಾಡಿ

ದ.ಕ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವೇ ಇಲ್ಲವೆಂದು ಶಾಸಕ ಎಸ್.ಆರ್ ವಿಶ್ವನಾಥ ಹೇಳಿಕೆ ನೀಡಿರುವುದು ಖಂಡನೀಯ,ತಕ್ಷಣ ಅವರು ಕ್ಷಮೆಯಾಚಿಸಬೇಕೆಂದುಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಒತ್ತಾಯಿಸಿದ್ದಾರೆ‌.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಒಕ್ಕಲಿಗರ ಮಠವಾದ ಆದಿಚುಂಚನಗಿರಿಗೆ ಪ್ರಧಾನ ಕಾರ್ಯದರ್ಶಿಯನ್ನು ನೀಡಿರುವುದು ಈ ಭಾಗದಿಂದ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ ಕೆದಂಬಾಡಿ ರಾಮಯ್ಯ ಗೌಡ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಗುಡ್ಡೆಮನೆ ಅಪ್ಪಯ್ಯ ಗೌಡರು ಒಕ್ಕಲಿಗ ಸಮುದಾಯದ ಈ ಭಾಗದವರು. ಇತಿಹಾಸವನ್ನು ತಿಳಿದುಕೊಳ್ಳದೆ

ದ.ಕ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವೇ ಇಲ್ಲವೆಂದು ಶಾಸಕ ಎಸ್.ಆರ್ ವಿಶ್ವನಾಥ ಹೇಳಿಕೆ ನೀಡಿರುವುದು ಖಂಡನೀಯ : ದಿನೇಶ್ ಮಡಪ್ಪಾಡಿ Read More »

error: Content is protected !!
Scroll to Top