ಸುಳ್ಯ ಪಿ ಎಲ್ ಡಿ ಬ್ಯಾಂಕ್ ವತಿಯಿಂದ ಕೇಂದ್ರ ಸರ್ಕಾರದ ” ಸಹಕಾರ ವಾರ” ಕಾರ್ಯಕ್ರಮದ ಅಂಗವಾಗಿ ಶಾಲಾ ಅವರಣದಲ್ಲಿ ನಾನಾ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಸುಳ್ಯ ಪಿ.ಎಲ್. ಡಿ ಬ್ಯಾಂಕಿನ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ದಿಲೀಪ್ ಹೆಚ್. ಹೆಚ್, ಸುಳ್ಯ ವ್ಯವಸ್ಥಾಪಕಿ ಉಷಾ ಸುವರ್ಣ, ಸಿಬ್ಬಂದಿಗಳಾದ ದಾಮೋದರ, ಅಶ್ವಿತ್, ಶಾಲಾ ಮುಖ್ಯಶಿಕ್ಷಕಿ ಜಯ ಲತಾ ಕೆ.ಆರ್., ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಬ್ಯಾಂಕಿನ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.
ಸುಳ್ಯ ಪಿ.ಎಲ್.ಡಿ ಬ್ಯಾಂಕ್ ನಿಂದ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ “ಸಹಕಾರ ವಾರ” ಆಚರಣೆ- ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ






























































