August 17, 2026

ಪಂಜ : ದೇವಳದ ಕಟ್ಟೆಗಳಲ್ಲಿ ನಡೆದ ನಾಗರ ಪಂಚಮಿ ಪೂಜೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನಾಗನಕಟ್ಟೆಗಳಲ್ಲಿ ನಾಗರಪಂಚಮಿ ಪೂಜೆ ಪ್ರಯುಕ್ತ ಪೂಜೆ ನಡೆದು ನಾಗನಕಲ್ಲಿಗೆ ಹಾಲೆರೆಯಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು

ಪಂಜ : ದೇವಳದ ಕಟ್ಟೆಗಳಲ್ಲಿ ನಡೆದ ನಾಗರ ಪಂಚಮಿ ಪೂಜೆ Read More »

ಕಾನತ್ತಿಲ ನಾಗಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನಿಗೆ ಪೂಜೆ

ಸುಳ್ಯದ ಕಾನತ್ತಿಲ ನಾಗಕಟ್ಟೆಯಲ್ಲಿ ನಾಗಕಲ್ಲಿಗೆ ಪೂಜೆ ಸಲ್ಲಿಸಿ ನಾಗನಿಗೆ ಹಾಲೆರೆಯಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.

ಕಾನತ್ತಿಲ ನಾಗಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನಿಗೆ ಪೂಜೆ Read More »

ತೊಡಿಕಾನ ಅಂಗನವಾಡಿಯಲ್ಲಿ ಎಲ್. ಕೆ. ಜಿ ಮತ್ತು ಯುಕೆಜಿ ತರಗತಿಗಳು ಆರಂಭ

ತೊಡಿಕಾನ ಅಂಗನವಾಡಿ ಶಾಲೆಯಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳು ಆಗಸ್ಟ್ 15 ಸ್ವಾತಂತ್ರೋತ್ಸವದ ದಿನದಂದು ಶುಭಾರಂಭಗೊಂಡಿತು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮತ್ತು ತೊಡಿಕನ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ತರಗತಿಗಳನ್ನು ಉದ್ಘಾಟಿಸಿದರು. ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ವಾಸವಿ ಮುಪ್ಪಸೇರುಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು , ಮಾಜಿ ಸಸ್ಯರಾದ ರವೀಂದ್ರ ಪಂಜಿಕೋಡಿ, ಉಷಾ ಅಡ್ಯಡ್ಕ,

ತೊಡಿಕಾನ ಅಂಗನವಾಡಿಯಲ್ಲಿ ಎಲ್. ಕೆ. ಜಿ ಮತ್ತು ಯುಕೆಜಿ ತರಗತಿಗಳು ಆರಂಭ Read More »

ಕಲ್ಚೆರ್ಪೆಯಲ್ಲಿ ನಾಗರ ಪಂಚಮಿ‌ ಆಚರಣೆ

ಆಲೆಟ್ಟಿ ಗ್ರಾಮದ ಸಿರಿಕುರಲ್ ನಗರ, ಕಲ್ಬರ್ಪೆಶ್ರೀ ವನದುರ್ಗಾ ಮತ್ತು ಸಹಪರಿವಾರ ದೈವಸ್ಥಾನದ ನಾಗನ‌ ಕಟ್ಟೆಯಲ್ಲಿನಾಗರ ಪಂಚಮಿ ಪ್ರಯುಕ್ತ ಪೂಜೆ ನಡೆದು ನಾಗನ ಕಲ್ಲಿಗೆ ಹಾಲೆರೆಯಲಾಯಿತು.ಸಮಿತಿಯರು,ಸ್ಥಳೀಯರು ಭಾಗವಹಿಸಿದರು.

ಕಲ್ಚೆರ್ಪೆಯಲ್ಲಿ ನಾಗರ ಪಂಚಮಿ‌ ಆಚರಣೆ Read More »

ಕಾಡಾನೆ ದಾಳಿಗೆ ಕೂಲಿಕಾರ್ಮಿಕ ಬಲಿ

ಕೊಡಗಿ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಘಟ್ಟದಳ ಸಮೀಪದ ಕಾಫಿ ತೋಟದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿಯಾದ ಘಟನೆ ವರದಿಯಾಗಿದೆ.ಇನ್ನಿಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆ ದಾಳಿಗೆ ಕೂಲಿಕಾರ್ಮಿಕ ಬಲಿ Read More »

ಪೆರುವೊಡಿ : ನಾಗರ ಪಂಚಮಿ ಆಚರಣೆ

ಪೆರುವೂಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ (ಬೈಲಂಗಡಿ) ನಾಗನ ಕಟ್ಟೆಯಲ್ಲಿ ಭಕ್ತಾಧಿಗಳ ಭಕ್ತಿಪೂರ್ವಕವಾಗಿ ನಾಗರ ಪಂಚಮಿ ಆಚರಿಸಿದರು.ಈ ಸಂದರ್ಭದಲ್ಲಿ ದೇವಳದ ಸಮಿತಿಯವರು,ಭಕ್ತಾಧಿಗಳು ಉಪಸ್ಥಿತರಿದ್ದರು.

ಪೆರುವೊಡಿ : ನಾಗರ ಪಂಚಮಿ ಆಚರಣೆ Read More »

ತೊಡಿಕಾನ ಶಾಲೆಯಲ್ಲಿ ಪ್ರಾಜೆಕ್ಟರ್ ಉದ್ಘಾಟನೆ

ಬೆಂಗಳೂರಿನ ರಾಮದೇವ್ & ಅಸೋಸಿಯೇಟ್ ಸಂಸ್ಥೆಯ ವತಿಯಿಂದ ತೊಡಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 35,000 ಮೌಲ್ಯದ ಪ್ರಾಜೆಕ್ಟರ್ ಅನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನೆ ನಡೆಯಿತು.ರಾಮದೇವ್ & ಅಸೋಸಿಯೇಟ್ಸ್ ಸಂಸ್ಥೆಯ ಬಾಲಸುಬ್ರಹ್ಮಣ್ಯ ಭಟ್ ಇವರು ಈ ಕೊಡುಗೆಯನ್ನು ನೀಡಿದ್ದು ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ ಪೈಕಿ ಎಲ್ಲೂ ಇಲ್ಲದ ಈ ಸಾಧನವನ್ನು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನೀಡಲಾಗಿದೆ. ಅಸೋಸಿಯೇಟ್ಸ್ ಸಂಸ್ಥೆಯ ಬಾಲಸುಬ್ರಹ್ಮಣ್ಯ ಭಟ್ ಇವರು ಈ ಕೊಡುಗೆಯನ್ನು ನೀಡಿದ್ದು ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ

ತೊಡಿಕಾನ ಶಾಲೆಯಲ್ಲಿ ಪ್ರಾಜೆಕ್ಟರ್ ಉದ್ಘಾಟನೆ Read More »

ಕಲ್ಲುಗುಂಡಿ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ

ಕಲ್ಲುಗುಂಡಿ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜ್ನಾನಶೀಲನ್ ರಾಜು ಆಡಳಿತ ಮೋಕ್ತೇಸರರಾದ ಶ್ರೀ ಪಳನಿವೇಲು ಮತ್ತು ಸದಸ್ಯರು ಭಕ್ತರು ಉಪಸ್ಥಿತರಿದ್ದರು.

ಕಲ್ಲುಗುಂಡಿ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ Read More »

ತೊಡಿಕಾನ : ದೇವಳದಲ್ಲಿ ನಾಗರ ಪಂಚಮಿ‌ ಆಚರಣೆ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಕ್ಷೀರಾಭಿಷೇಕ,ತಂಬಿಲ, ಎಳನೀರು ಅಭಿಷೇಕ ಜರುಗಿತು

ತೊಡಿಕಾನ : ದೇವಳದಲ್ಲಿ ನಾಗರ ಪಂಚಮಿ‌ ಆಚರಣೆ Read More »

ಶ್ರದ್ಧಾ ಭಕ್ತಿಯ ಹಬ್ಬ ನಾಗರ ಪಂಚಮಿ

ನಾಗರ ಪಂಚಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗದೇವರನ್ನು ಭಕ್ತಿಯಿಂದ ಪೂಜಿಸುವುದು ಸಂಪ್ರದಾಯವಾಗಿದೆ.ನಾಗರ ಪಂಚಮಿಯಂದು ನಾಗರಹಾವುಗಳ ನಾಗನ ಕಲ್ಲಿಗೆ ಹಾಲು, ಹೂವು, ಅರಿಶಿನ, ಕುಂಕುಮ ಮುಂತಾದವುಗಳನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ಕೆಲವರು ನಾಗದೇವರ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಹಬ್ಬವು ಪ್ರಕೃತಿ ಮತ್ತು ಜೀವಜಾಲದ ಬಗ್ಗೆ ಗೌರವ ಬೆಳೆಸುವ ಸಂದೇಶವನ್ನೂ ನೀಡುತ್ತದೆ.ನಾಗರ ಪಂಚಮಿಯ ಹಿಂದೆ ಅನೇಕ ಪೌರಾಣಿಕ ಕಥೆಗಳಿವೆ.

ಶ್ರದ್ಧಾ ಭಕ್ತಿಯ ಹಬ್ಬ ನಾಗರ ಪಂಚಮಿ Read More »

error: Content is protected !!
Scroll to Top