ತೊಡಿಕಾನ ಶಾಲೆಯಲ್ಲಿ ಪ್ರಾಜೆಕ್ಟರ್ ಉದ್ಘಾಟನೆ

ಬೆಂಗಳೂರಿನ ರಾಮದೇವ್ & ಅಸೋಸಿಯೇಟ್ ಸಂಸ್ಥೆಯ ವತಿಯಿಂದ ತೊಡಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 35,000 ಮೌಲ್ಯದ ಪ್ರಾಜೆಕ್ಟರ್ ಅನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನೆ ನಡೆಯಿತು.
ರಾಮದೇವ್ & ಅಸೋಸಿಯೇಟ್ಸ್ ಸಂಸ್ಥೆಯ ಬಾಲಸುಬ್ರಹ್ಮಣ್ಯ ಭಟ್ ಇವರು ಈ ಕೊಡುಗೆಯನ್ನು ನೀಡಿದ್ದು ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ ಪೈಕಿ ಎಲ್ಲೂ ಇಲ್ಲದ ಈ ಸಾಧನವನ್ನು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನೀಡಲಾಗಿದೆ. ಅಸೋಸಿಯೇಟ್ಸ್ ಸಂಸ್ಥೆಯ ಬಾಲಸುಬ್ರಹ್ಮಣ್ಯ ಭಟ್ ಇವರು ಈ ಕೊಡುಗೆಯನ್ನು ನೀಡಿದ್ದು ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ ಪೈಕಿ ಎಲ್ಲೂ ಇಲ್ಲದ ಈ ಸಾಧನವನ್ನು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನೀಡಲಾಗಿದೆ. ತೊಡಿಕಾನ ಶಾಲೆಯ ಹಿರಿಯ ವಿದ್ಯಾರ್ಥಿ ಭವಿತ್ ಬಾಳೆಕಜೆಯವರು ರಾಮದೇವ್ ಸಂಸ್ಥೆಯ ಮೂಲಕ ಪ್ರೊಜೆಕ್ಟರ್ ಅನ್ನು ತೊಡಿಕಾನ ಶಾಲೆಗೆ ನೀಡಲು ಶ್ರಮಿಸಿದ್ದರು.
ಪ್ರೊಜೆಕ್ಟ‌ರ್ ಉದ್ಘಾಟನೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮಟ್ಟೆ ನೆರವೇರಿಸಿದರು. ಹಿರಿಯ ವಿದ್ಯಾರ್ಥಿ ಭವಿತ್ ಬಾಳೆಕಜೆ, ಎಸ್‌ ಡಿ ಎಂ ಸಿ ಅಧ್ಯಕ್ಷ ನವೀನ್ ಎ.ಬಿ, ಉಪಾಧ್ಯಕ್ಷೆ ಸೌಮ್ಯ ಭಟ್, ತಿಮ್ಮಯ್ಯ ಮೆತಡ್ಕ, ರವೀಂದ್ರ ಪಂಜಿಕೋಡಿ, ಎಸ್ ಡಿ ಎಂ ಸಿ ಸದಸ್ಯರು ಶಾಲಾ ಮಕ್ಕಳ ಪೋಷಕರು ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

























Leave a Comment

Your email address will not be published. Required fields are marked *

error: Content is protected !!
Scroll to Top