ಪಂಜ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ, ಭರತನಾಟ್ಯ ಮನರಂಜನೆ

ಪಂಜ: ಇಲ್ಲಿನ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ವಿಶೇಷ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಅ.13ರಂದು ಭಜನಾ ಸಂಕೀರ್ತನೆ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ ಹಾಗೂ ಪಂಬೆತ್ತಾಡಿಯ ಪಂಚಶ್ರೀ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಐವರ್ನಾಡಿನ ಭೈರವಿ ನಾಟ್ಯಾಲಯದ ಕು. ಅದಿತಿ ಲಕ್ಷ್ಮಿ ನಾಯರ್‌ಕೆರೆ ಹಾಗೂ ಕು. ವರ್ಷ ನೆಲ್ಲಿಗದ್ದೆ ಅವರು ಭರತನಾಟ್ಯ ಪ್ರದರ್ಶಿಸಿ

ಪಂಜ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ, ಭರತನಾಟ್ಯ ಮನರಂಜನೆ Read More »