ಪಂಜ: ಇಲ್ಲಿನ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ವಿಶೇಷ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಅ.13ರಂದು ಭಜನಾ ಸಂಕೀರ್ತನೆ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.
ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ ಹಾಗೂ ಪಂಬೆತ್ತಾಡಿಯ ಪಂಚಶ್ರೀ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಐವರ್ನಾಡಿನ ಭೈರವಿ ನಾಟ್ಯಾಲಯದ ಕು. ಅದಿತಿ ಲಕ್ಷ್ಮಿ ನಾಯರ್ಕೆರೆ ಹಾಗೂ ಕು. ವರ್ಷ ನೆಲ್ಲಿಗದ್ದೆ ಅವರು ಭರತನಾಟ್ಯ ಪ್ರದರ್ಶಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಅ.14ರಂದು ಭಜನೆ, ಭರತನಾಟ್ಯ
ಅ.14ರಂದು ಬೀದಿಗುಡ್ಡೆ ಸಂಪ್ಯಾಡಿಯ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬಳಿಕ ಐಗಿರಿ ಅಡ್ಡಬೈಲಿನ ಕು. ಸ್ತುತಿ ರೈ (ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಅವರ ಶಿಷ್ಯೆ) ಮತ್ತು ಪಲ್ಲೋಡಿಯ ಕು. ಚರೀಷ್ಮ ರೈ (ವಿದುಷಿ ಪ್ರಾಂಜಲಿ ಕಾನತ್ತೂರು ಅವರ ಶಿಷ್ಯೆ) ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಅ.11ರಂದು ಆರಂಭಗೊಂಡಿರುವ ನವರಾತ್ರಿ ಪೂಜಾ ಕಾರ್ಯಕ್ರಮಗಳು ಅ.20ರವರೆಗೆ ಮುಂದುವರಿಯಲಿ.
ಪಂಜ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ, ಭರತನಾಟ್ಯ ಮನರಂಜನೆ













