ಪಂಜ ದೇವಸ್ಥಾನದಲ್ಲಿ ಭಕ್ತಿಭಾವದ ನವರಾತ್ರಿ ಸಂಭ್ರಮ: ಭಜನಾ ಸಂಕೀರ್ತನೆ, ಕುಣಿತ ಭಜನೆಯಿಂದ ಆಧ್ಯಾತ್ಮಿಕ ಮೆರಗು
ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಆಧ್ಯಾತ್ಮಿಕ ಸಂಭ್ರಮದೊಂದಿಗೆ ನಡೆಯುತ್ತಿದೆ. ಅ.11ರಂದು ಆರಂಭಗೊಂಡಿರುವ ನವರಾತ್ರಿ ಪೂಜಾ ಕಾರ್ಯಕ್ರಮಗಳು ಅ.20ರವರೆಗೆ ಮುಂದುವರಿಯಲಿವೆ.ಅ.16ರಂದು ಪಂಜ ವನಿತಾ ಸಮಾಜದ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತಿಗೀತೆಗಳ ಮಧುರ ನಿನಾದ ಹಾಗೂ ದೇವಿಯ ನಾಮಸ್ಮರಣೆಯಿಂದ ದೇವಾಲಯದ ಪರಿಸರ ಭಕ್ತಿಮಯವಾಯಿತು. ನಾಗತೀರ್ಥದ ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡದ ವತಿಯಿಂದ ನಡೆದ ಕುಣಿತ ಭಜನೆಯು ಭಕ್ತರ ಗಮನ



