October 20, 2026

ಪಂಜ ದೇವಸ್ಥಾನದಲ್ಲಿ ಭಕ್ತಿ ಸಡಗರ, ಸಂಭ್ರಮದಿಂದ ನಡೆದ ನವರಾತ್ರಿ ಮಹೋತ್ಸವ ಸಂಪನ್ನ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅ. 11ರಂದು ಆರಂಭಗೊಂಡಿದ್ದ ನವರಾತ್ರಿ ಮಹೋತ್ಸವವು ಅ. 20ರಂದು ಅತ್ಯಂತ ಭಕ್ತಿ-ಭಾವಪೂರ್ಣವಾಗಿ ಸಂಪನ್ನಗೊಂಡಿತು.ನವರಾತ್ರಿಯ ಹತ್ತು ದಿನಗಳ ಕಾಲ ದೇವಿಯ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳು, ಭಜನಾ ಸಂಕೀರ್ತನೆಗಳು ಹಾಗೂ ವಿವಿಧ ಕಲಾಸೇವೆಗಳು ಭಕ್ತಿಭಾವದ ವಾತಾವರಣವನ್ನು ಸೃಷ್ಟಿಸಿದವು. ಪ್ರತಿದಿನ ವಿವಿಧ ಭಜನಾ ತಂಡಗಳಿಂದ ನಡೆದ ಭಜನಾ ಸಂಕೀರ್ತನೆಗಳು ಭಕ್ತರ ಮನದಲ್ಲಿ ಭಕ್ತಿಯ ರಸಧಾರೆಯನ್ನು ಹರಿಸಿದವು. ಭಕ್ತಾದಿಗಳಿಂದ ದುರ್ಗಾಪೂಜೆ, ಕುಂಕುಮಾರ್ಚನೆ, ನವರಾತ್ರಿ ಪೂಜೆ, ವಾಹನ ಪೂಜೆ

ಪಂಜ ದೇವಸ್ಥಾನದಲ್ಲಿ ಭಕ್ತಿ ಸಡಗರ, ಸಂಭ್ರಮದಿಂದ ನಡೆದ ನವರಾತ್ರಿ ಮಹೋತ್ಸವ ಸಂಪನ್ನ Read More »

ಕಡಬ : ಸ್ನೇಹಿತನ ಜೀವ ಉಳಿಸಲು ಹೋಗಿ ನರ್ಸಿಂಗ್ ವಿದ್ಯಾರ್ಥಿ ಸಾವು

ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಮುಂದಾದ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ತಾವೇ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ನಿಡ್ಲೆ ಗ್ರಾಮದ ಪಾರ್ಪಿಕಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ಗೌಡ ಅವರ ಪುತ್ರ ಕೀರ್ತನ್ ಗೌಡ (20) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಕೀರ್ತನ್, ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು ಎನ್ನಲಾಗಿದೆ.ಮಂಗಳವಾರ

ಕಡಬ : ಸ್ನೇಹಿತನ ಜೀವ ಉಳಿಸಲು ಹೋಗಿ ನರ್ಸಿಂಗ್ ವಿದ್ಯಾರ್ಥಿ ಸಾವು Read More »

ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಿಇಟಿ ಶುಲ್ಕ ವಸೂಲಿ ಆರೋಪ: ತನಿಖೆಗೆ ಎಬಿವಿಪಿ ಆಗ್ರಹ

ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಿಇಟಿ ಕೋಚಿಂಗ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಗ್ರಹಿಸಿದೆ.ಈ ಸಂಬಂಧ ಎಬಿವಿಪಿ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕಳೆದ ಕೆಲವು ವರ್ಷಗಳಿಂದ ಕಾಲೇಜಿನಲ್ಲಿ ಅಧಿಕೃತ ಅನುಮತಿಯಿಲ್ಲದೆ ಸಿಇಟಿ ತರಗತಿಗಳನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳಿಂದ ತಲಾ ಸುಮಾರು ₹16,000 ಶುಲ್ಕವನ್ನು ರಶೀದಿ ನೀಡದೆ

ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಿಇಟಿ ಶುಲ್ಕ ವಸೂಲಿ ಆರೋಪ: ತನಿಖೆಗೆ ಎಬಿವಿಪಿ ಆಗ್ರಹ Read More »

ವಿಷನ್ ಚಾರಿಟೇಬಲ್ ಟ್ರಸ್ಟ್ ಟೈಲರಿಂಗ್ ತರಬೇತಿ ಸಂಸ್ಥೆಯಲ್ಲಿ ಶ್ರದ್ಧಾಭಕ್ತಿಯ ಆಯುಧಪೂಜೆ

ಸುಳ್ಯ: ಇಲ್ಲಿನ ಸಾಮಾಜಿಕ ಸಂಸ್ಥೆಯಾದ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ನಡೆಸಲಾಗುತ್ತಿರುವ ಟೈಲರಿಂಗ್ ತರಬೇತಿ ಸಂಸ್ಥೆಯಲ್ಲಿ ಭಾನುವಾರದಂದು ಆಯುಧಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಕಾನತ್ತಿಲದಲ್ಲಿರುವ ಹಿರಿಯರ ಮನೆಯ ಆವರಣದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಟೈಲರಿಂಗ್ ತರಬೇತಿಯ ಪ್ರವರ್ತಕಿ ಕಮಲಾ ಬಾಲಕೃಷ್ಣ, ಪೋಷಕರುಗಳಾದ ಸರಸ್ವತಿ ಗೋಪಾಲ ನಾಯಕ್, ತರಬೇತಿ ಶಿಕ್ಷಕಿ ಬೇಬಿ ಮಾಧವ ಹಾಗೂ ಮಾಜಿ ಟ್ರಸ್ಟಿ ರಾಜೇಶ್ವರಿ ರಂಗಯ್ಯ ಅವರುಗಳು ಹೊಲಿಗೆ ಯಂತ್ರಗಳಿಗೆ ಆರತಿ ಎತ್ತಿ ಪೂಜೆ ನೆರವೇರಿಸಿದರು. ಹಿರಿಯರ ಮನೆಯ ಉಸ್ತುವಾರಿ ಸುಭಾಷ್ ಕೆ.ಎಸ್.

ವಿಷನ್ ಚಾರಿಟೇಬಲ್ ಟ್ರಸ್ಟ್ ಟೈಲರಿಂಗ್ ತರಬೇತಿ ಸಂಸ್ಥೆಯಲ್ಲಿ ಶ್ರದ್ಧಾಭಕ್ತಿಯ ಆಯುಧಪೂಜೆ Read More »

error: Content is protected !!
Scroll to Top