October 2026

ಅ.24ರಿಂದು ಸುಳ್ಯ ತಾಲೂಕಿನಲ್ಲಿ ವಿಶ್ವ ನಾಯಕ ನರೇಂದ್ರ ಮೋದಿ ಬೀದಿ ನಾಟಕ ಪ್ರದರ್ಶನ

ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಸಲ್ಲಿಸಿದ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಬಿಂಬಿಸುವ ಉದ್ದೇಶದಿಂದ ವಿಶ್ವ ನಾಯಕ ನರೇಂದ ಮೋದಿ ನಾಟಕವನ್ನು ಸುಳ್ಯ ತಾಲೂಕಿನಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಅವರು ಕೈಗೊಂಡಿರುವ ಕಾರ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬೀದಿ ನಾಟಕ ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ತಮ್ಮ ಭಾಗಗಳಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.ನಾಟಕ

ಅ.24ರಿಂದು ಸುಳ್ಯ ತಾಲೂಕಿನಲ್ಲಿ ವಿಶ್ವ ನಾಯಕ ನರೇಂದ್ರ ಮೋದಿ ಬೀದಿ ನಾಟಕ ಪ್ರದರ್ಶನ Read More »

ಕಲ್ಮಡ್ಕ ವಿದ್ಯುತ್ ಅವಘಡ: ಮೃತರ ಕುಟುಂಬಗಳಿಗೆ ಪರಿಹಾರ ಕೋರಿ ಮುಖ್ಯಮಂತ್ರಿಗಳಿಗೆ ಶಾಸಕಿ ಮನವಿ

ಕಲ್ಮಡ್ಕದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಭರತ್ ಹಾಗೂ ರಮೇಶ್ ಅವರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಸುಳ್ಯ ಶಾಸಕಿ ಮನವಿ ಸಲ್ಲಿಸಿದ್ದಾರೆ.ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಮೃತರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಮೂಲಕ ಸಂಕಷ್ಟದ ಸಂದರ್ಭದಲ್ಲಿ

ಕಲ್ಮಡ್ಕ ವಿದ್ಯುತ್ ಅವಘಡ: ಮೃತರ ಕುಟುಂಬಗಳಿಗೆ ಪರಿಹಾರ ಕೋರಿ ಮುಖ್ಯಮಂತ್ರಿಗಳಿಗೆ ಶಾಸಕಿ ಮನವಿ Read More »

ಬಡ ಕುಟುಂಬಗಳ ಸದಸ್ಯರಿಂದ ಎಂಐಒ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ

ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ಈ ಬಾರಿಯ ಆಯುಧ ಪೂಜೆಯನ್ನು ವಿಶಿಷ್ಟ ಹಾಗೂ ಮಾನವೀಯ ಸಂದೇಶದೊಂದಿಗೆ ಆಚರಿಸಲಾಯಿತು. ಬಡ ರೋಗಿಗಳಿಗೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರೆಯಬೇಕು ಎಂಬ ಆಶಯದೊಂದಿಗೆ, ಆಸ್ಪತ್ರೆಯ ಮಾಲೀಕರು ಅಥವಾ ವೈದ್ಯರ ಬದಲಿಗೆ ಇಬ್ಬರು ಬಿಪಿಎಲ್ ಕುಟುಂಬಗಳ ಸದಸ್ಯರಿಂದ ನೂತನ ವೈದ್ಯಕೀಯ ಉಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು.ಆಸ್ಪತ್ರೆಯಲ್ಲಿ ಒಟ್ಟು ₹35 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳಿಗೆ ಪೂಜೆ ನೆರವೇರಿಸಲಾಯಿತು. ಇದರಲ್ಲಿ ₹25 ಕೋಟಿ ವೆಚ್ಚದ ಟ್ರೂಬೀಮ್ (TrueBeam) ರೇಡಿಯೊಥೆರಪಿ

ಬಡ ಕುಟುಂಬಗಳ ಸದಸ್ಯರಿಂದ ಎಂಐಒ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ Read More »

ತೊಡಿಕಾನ : ಹರ್ಲಡ್ಕದಲ್ಲಿ ಆನೆ ಮರಿ ಸಾವು: ತೋಟಕ್ಕೆ ನುಗ್ಗಿದ ಆನೆಗಳ ಹಿಂಡು

ಸುಳ್ಯ: ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿಯೊಂದು ಸಾವಿಗೀಡಾದ ಘಟನೆ ವರದಿಯಾಗಿದೆ.ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಮೃತಪಟ್ಟಿದ್ದು, ಭಾಗಮಂಡಲದ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ.ತೋಟವು ಎತ್ತರ ಪ್ರದೇಶದಲ್ಲಿರುವುದರಿಂದ ಆನೆಗಳ ಹಿಂಡು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ಆನೆ ಮರಿಯೊಂದು ಜಾರಿ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ

ತೊಡಿಕಾನ : ಹರ್ಲಡ್ಕದಲ್ಲಿ ಆನೆ ಮರಿ ಸಾವು: ತೋಟಕ್ಕೆ ನುಗ್ಗಿದ ಆನೆಗಳ ಹಿಂಡು Read More »

ಸುಳ್ಯ ದಸರಾ: ಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ

ಸುಳ್ಯ: ಸುಳ್ಯ ದಸರಾ ಮಹೋತ್ಸವದ ಅಂಗವಾಗಿ ಶ್ರೀಶಾರದಾಂಬ ಸಮಿತಿಯ ವತಿಯಿಂದ ಅ.22ರಂದು ಸಂಜೆ 7 ಗಂಟೆಗೆ ಶ್ರೀ ಚಂಡಿಕಾ ಮಹಾಯಾಗ ಹಾಗೂ ಮಾತೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಭಕ್ತಿಭಾವದಿಂದ ನಡೆಯಿತು.ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಿಯ ಆರಾಧನೆಯ ಅಂಗವಾಗಿ ನಡೆದ ಮಹಾಯಾಗ ಹಾಗೂ ಸಾಮೂಹಿಕ ಪಾರಾಯಣದಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀಶಾರದಾಂಬ ಸಮಿತಿಯ ವಿವಿಧ ಪದಾಧಿಕಾರಿಗಳು

ಸುಳ್ಯ ದಸರಾ: ಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ Read More »

ಸಂಬಂಧಗಳ ಮೌಲ್ಯ, ಬದುಕಿನ ವಾಸ್ತವ ಮತ್ತು ಕಾಲಚಕ್ರದ ಸತ್ಯ!

✍️ *ಸಖಿ*ಜೀವನವೆಂಬುದು ನೂರಾರು ಅನುಭವಗಳ ಸಂಗಮ. ಇಲ್ಲಿ ಸಂಬಂಧಗಳಿವೆ, ಪ್ರೀತಿಯಿದೆ, ನಂಬಿಕೆಯಿದೆ, ಕಾಳಜಿಯಿದೆ, ಜೊತೆಗೆ ನಿರೀಕ್ಷೆಗಳು, ನಿರಾಸೆಗಳು, ಗೆಲುವು ಮತ್ತು ಸೋಲುಗಳೂ ಇವೆ. ಬದುಕಿನ ಪಯಣದಲ್ಲಿ ಎಲ್ಲವೂ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ಕೆಲವೊಮ್ಮೆ ನಮ್ಮ ಒಳ್ಳೆಯತನಕ್ಕೆ ಪ್ರೀತಿ ಸಿಗುತ್ತದೆ. ಇನ್ನು ಕೆಲವೊಮ್ಮೆ ಅದೇ ಒಳ್ಳೆಯತನಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಇಂತಹ ಅನುಭವಗಳು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತವೆ.ಸಂಬಂಧಗಳು ನಿಜವಾಗಿಯೂ ಪ್ರೀತಿಯಿಂದ ಉಳಿಯುತ್ತವೆಯೇ, ಅಥವಾ ಅಗತ್ಯಗಳ ಆಧಾರದ ಮೇಲೆ ಮುಂದುವರಿಯುತ್ತವೆಯೇ?ಇದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಯೋಚಿಸಬೇಕಾದ ಪ್ರಶ್ನೆ. ಅನೇಕ

ಸಂಬಂಧಗಳ ಮೌಲ್ಯ, ಬದುಕಿನ ವಾಸ್ತವ ಮತ್ತು ಕಾಲಚಕ್ರದ ಸತ್ಯ! Read More »

ರಂಗಮಯೂರಿ ಕಲಾ ಶಾಲೆಯಲ್ಲಿ ಭಕ್ತಿಭಾವದ ಶಾರದಾ ಪೂಜೆ; ಗುರುಗಳಿಗೆ ಗುರುವಂದನೆ

ಸುಳ್ಯ: ಸಂಗೀತ ಹಾಗೂ ಕಲೆಯ ಆರಾಧನೆಯೊಂದಿಗೆ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಅ. 21ರಂದು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಶಾರದಾ ಪೂಜೆ ನೆರವೇರಿತು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ ಹಾಗೂ ಶಾರದಾ ಪೂಜೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ವಿದ್ಯಾದೇವಿ ಶಾರದಾಂಬೆಯ ಸನ್ನಿಧಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ವಿದ್ಯೆ ಮತ್ತು ಕಲೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಸಂಕಲ್ಪದೊಂದಿಗೆ ದೇವಿಯ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ

ರಂಗಮಯೂರಿ ಕಲಾ ಶಾಲೆಯಲ್ಲಿ ಭಕ್ತಿಭಾವದ ಶಾರದಾ ಪೂಜೆ; ಗುರುಗಳಿಗೆ ಗುರುವಂದನೆ Read More »

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಅ.22ರಂದು ರಜೆ ಘೋಷಣೆ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಕ್ಟೋಬರ್ 22ರಂದು ರಜೆ ಘೋಷಿಸಲಾಗಿದೆ.1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ರಜೆ ಅನ್ವಯವಾಗಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರಜೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಅ.22ರಂದು ರಜೆ ಘೋಷಣೆ Read More »

ಪಂಜ ದೇವಸ್ಥಾನದಲ್ಲಿ ಭಕ್ತಿ ಸಡಗರ, ಸಂಭ್ರಮದಿಂದ ನಡೆದ ನವರಾತ್ರಿ ಮಹೋತ್ಸವ ಸಂಪನ್ನ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅ. 11ರಂದು ಆರಂಭಗೊಂಡಿದ್ದ ನವರಾತ್ರಿ ಮಹೋತ್ಸವವು ಅ. 20ರಂದು ಅತ್ಯಂತ ಭಕ್ತಿ-ಭಾವಪೂರ್ಣವಾಗಿ ಸಂಪನ್ನಗೊಂಡಿತು.ನವರಾತ್ರಿಯ ಹತ್ತು ದಿನಗಳ ಕಾಲ ದೇವಿಯ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳು, ಭಜನಾ ಸಂಕೀರ್ತನೆಗಳು ಹಾಗೂ ವಿವಿಧ ಕಲಾಸೇವೆಗಳು ಭಕ್ತಿಭಾವದ ವಾತಾವರಣವನ್ನು ಸೃಷ್ಟಿಸಿದವು. ಪ್ರತಿದಿನ ವಿವಿಧ ಭಜನಾ ತಂಡಗಳಿಂದ ನಡೆದ ಭಜನಾ ಸಂಕೀರ್ತನೆಗಳು ಭಕ್ತರ ಮನದಲ್ಲಿ ಭಕ್ತಿಯ ರಸಧಾರೆಯನ್ನು ಹರಿಸಿದವು. ಭಕ್ತಾದಿಗಳಿಂದ ದುರ್ಗಾಪೂಜೆ, ಕುಂಕುಮಾರ್ಚನೆ, ನವರಾತ್ರಿ ಪೂಜೆ, ವಾಹನ ಪೂಜೆ

ಪಂಜ ದೇವಸ್ಥಾನದಲ್ಲಿ ಭಕ್ತಿ ಸಡಗರ, ಸಂಭ್ರಮದಿಂದ ನಡೆದ ನವರಾತ್ರಿ ಮಹೋತ್ಸವ ಸಂಪನ್ನ Read More »

ಕಡಬ : ಸ್ನೇಹಿತನ ಜೀವ ಉಳಿಸಲು ಹೋಗಿ ನರ್ಸಿಂಗ್ ವಿದ್ಯಾರ್ಥಿ ಸಾವು

ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಮುಂದಾದ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ತಾವೇ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ನಿಡ್ಲೆ ಗ್ರಾಮದ ಪಾರ್ಪಿಕಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ಗೌಡ ಅವರ ಪುತ್ರ ಕೀರ್ತನ್ ಗೌಡ (20) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಕೀರ್ತನ್, ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು ಎನ್ನಲಾಗಿದೆ.ಮಂಗಳವಾರ

ಕಡಬ : ಸ್ನೇಹಿತನ ಜೀವ ಉಳಿಸಲು ಹೋಗಿ ನರ್ಸಿಂಗ್ ವಿದ್ಯಾರ್ಥಿ ಸಾವು Read More »

error: Content is protected !!
Scroll to Top