November 7, 2026

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ

*ಸುಳ್ಯ:* ಬೆಳಕಿನ ಹಬ್ಬ ದೀಪಾವಳಿಯನ್ನು ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ನವೆಂಬರ್ 7ರಂದು ಶನಿವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಮಕ್ಕಳು ಆಕರ್ಷಕ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಶಾಲೆಗೆ ಆಗಮಿಸಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಸಂಚಾಲಕರಾದ ಗೀತಾಂಜಲಿ ಟಿ.ಜಿ. ಅವರು ಮಕ್ಕಳಿಗೆ ದೀಪಾವಳಿಯ ಮಹತ್ವವನ್ನು ಸಾರುವ ಸುಂದರ ಕಥೆಯನ್ನು ಹೇಳುವ ಮೂಲಕ ಹಬ್ಬದ ಸಂದೇಶವನ್ನು ಮನಮುಟ್ಟುವಂತೆ ತಿಳಿಸಿಕೊಟ್ಟರು. ಬೆಳಕಿನ ಮಹತ್ವ, ಒಳ್ಳೆಯತನದ ಗೆಲುವು ಹಾಗೂ ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಕುರಿತು ಮಕ್ಕಳಿಗೆ ಅರಿವು

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ Read More »

ಜೇಸಿಐ ಸುಳ್ಯ ಪಯಸ್ವಿಗೆ “ಆರ್ಯ”ವಲಯ ಸಮ್ಮೇಳನ -2026ರಲ್ಲಿ ಪ್ರಶಸ್ತಿಗಳ ಮನ್ನಣೆ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು 2026ರಲ್ಲಿ ಸಂಚಲನ ಮೂಡಿಸಿದ್ದು, ಘಟಕದ ಈ ವರ್ಷದ ಸಾಧನೆಗೆ ಪಿ. ಆರ್ ಎಂಡ್ ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಘಟಕಾಧ್ಯಕ್ಷರಾದ ಜೆ ಎಪ್ ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರಿಗೆ ಉತ್ತಮ ಘಟಕಾಧ್ಯಕ್ಷ ರನ್ನರ್ ಪ್ರಶಸ್ತಿಯೊಂದಿಗೆ ಹಲವಾರು ವಿಭಾಗಗಳಲ್ಲಿ ಮನ್ನಣೆಗಳು ವಲಯ ಮಟ್ಟದಲ್ಲಿ ಲಭಿಸಿದೆ. ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ನಡೆದ ಆರ್ಯ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೆ ಎಪ್ ಎಸ್ ಸಂತೋಷ್

ಜೇಸಿಐ ಸುಳ್ಯ ಪಯಸ್ವಿಗೆ “ಆರ್ಯ”ವಲಯ ಸಮ್ಮೇಳನ -2026ರಲ್ಲಿ ಪ್ರಶಸ್ತಿಗಳ ಮನ್ನಣೆ Read More »

ಗೂನಡ್ಕ : ಸಾಹಿತ್ಯದ ಕಂಪು, ಹಿರಿಯರ ಸಾಧನೆಗೆ ಗೌರವ, ಮಕ್ಕಳ ಕಲಾಪ್ರತಿಭೆಯ ಅನಾವರಣ – ದೋಳ ವೀರಪ್ಪ ಗೌಡ ದಂಪತಿಗಳಿಗೆ ಸನ್ಮಾನ

ಗೂನಡ್ಕ: ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಪರಂಪರೆಯ ಸೊಗಡನ್ನು ಅನಾವರಣಗೊಳಿಸಿದ ಸುಂದರ ವೇದಿಕೆ ಗೂನಡ್ಕದಲ್ಲಿ ಅ.6ರಂದು ಸಜ್ಜಾಗಿತ್ತು. ದೀಪಾವಳಿಯ ಬೆಳಕಿನ ಸಂಭ್ರಮದೊಂದಿಗೆ ಸಾಹಿತ್ಯದ ಸವಿಯನ್ನೂ ಬೆರೆಸಿದ ಕವಿಗೋಷ್ಠಿ, ಹಾಸ್ಯಮಯ ಹರಟೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ಪಂಜ ಹೋಬಳಿ ಘಟಕ, ಶಾಲಾ ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮದ ಅಂಗವಾಗಿ ನ.6ರಂದು ಗೂನಡ್ಕದ

ಗೂನಡ್ಕ : ಸಾಹಿತ್ಯದ ಕಂಪು, ಹಿರಿಯರ ಸಾಧನೆಗೆ ಗೌರವ, ಮಕ್ಕಳ ಕಲಾಪ್ರತಿಭೆಯ ಅನಾವರಣ – ದೋಳ ವೀರಪ್ಪ ಗೌಡ ದಂಪತಿಗಳಿಗೆ ಸನ್ಮಾನ Read More »

ಪ್ರೀತಿಸಿ ನಂಬಿದವನೇ ಕೊಲೆ ಯತ್ನಕ್ಕೆ ಮುಂದಾದನೇ?

ಕಡಬ: ಪ್ರೀತಿಸಿ ನಂಬಿದ ವ್ಯಕ್ತಿಯೇ ತನ್ನ ಜೀವಕ್ಕೆ ಸಂಚಕಾರ ತಂದಿದ್ದಾನೆ ಎಂಬ ಆರೋಪ ಕೇಳಿಬಂದಿರುವ ಹೃದಯವಿದ್ರಾವಕ ಘಟನೆಯೊಂದು ಕಡಬ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಗರ್ಭಿಣಿ ಯುವತಿಯೊಬ್ಬಳನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ ನಡೆಸಿ, ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಕಾಡಿನ ನಡುವಿನ ಚರಂಡಿಗೆ ಎಸೆದು ಹೋದ ಘಟನೆ ನವೆಂಬರ್ 4ರಂದು ವರದಿಯಾಗಿದೆ.ಕಡಬ ತಾಲ್ಲೂಕಿನ ಕೊಣಾಜೆಯ ಯುವಕ ಹಾಗೂ ಕೊಂಬಾರಿನ ಯುವತಿಯ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ನವೆಂಬರ್ 4ರ ಸಂಜೆ ಇಬ್ಬರೂ ಬಿಸಿಲೆ ಘಾಟಿಗೆ

ಪ್ರೀತಿಸಿ ನಂಬಿದವನೇ ಕೊಲೆ ಯತ್ನಕ್ಕೆ ಮುಂದಾದನೇ? Read More »

error: Content is protected !!
Scroll to Top