ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು 2026ರಲ್ಲಿ ಸಂಚಲನ ಮೂಡಿಸಿದ್ದು, ಘಟಕದ ಈ ವರ್ಷದ ಸಾಧನೆಗೆ ಪಿ. ಆರ್ ಎಂಡ್ ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಘಟಕಾಧ್ಯಕ್ಷರಾದ ಜೆ ಎಪ್ ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರಿಗೆ ಉತ್ತಮ ಘಟಕಾಧ್ಯಕ್ಷ ರನ್ನರ್ ಪ್ರಶಸ್ತಿಯೊಂದಿಗೆ ಹಲವಾರು ವಿಭಾಗಗಳಲ್ಲಿ ಮನ್ನಣೆಗಳು ವಲಯ ಮಟ್ಟದಲ್ಲಿ ಲಭಿಸಿದೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ನಡೆದ ಆರ್ಯ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೆ ಎಪ್ ಎಸ್ ಸಂತೋಷ್ ಶೆಟ್ಟಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
2026ನೇ ಸಾಲಿನಲ್ಲಿ ಘಟಕಾಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ನಾಯಕತ್ವದಲ್ಲಿ ವಲಯ ಹಾಗೂ ರಾಷ್ಟ್ರ ಮಟ್ಟದ ಸೂಚನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವುದರ ಜತೆಗೆ ಸಮಾಜಮುಖಿ ಸೇವಾ ಚಟುವಟಿಕೆಗಳು, ತರಬೇತಿ ಕಾರ್ಯಾಗಾರಗಳು, ಶಿಕ್ಷಣ ಸಂವರ್ದಿತ ಕಾರ್ಯಕ್ರಮ, ಅಂತೆಯೇ ವಿವಿಧ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹಿನ್ನಲೆಯಲ್ಲಿ ಈ ಗೌರವ ಲಭಿಸಿದೆ. ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಜಿತೇಶ್ ಪಿರೇರಾ, ಕಾರ್ಯದರ್ಶಿ ತಾರಾ ಚೂಂತಾರು, ದೇವರಾಜ್ ಕುದ್ಪಾಜೆ, ಸತ್ಯ ಶಾಂತಿ ತ್ಯಾಗ ಮೂರ್ತಿ, ಉಮೇಶ್ ಬೊಳುಗಲ್ಲು, ನವೀನ್ ಚಾತುಬಾಯಿ, ಮಂಜುನಾಥ್ ಮಡ್ತಿಲ, ಸ್ನಿಗ್ಧ ಮೋಂಟಡ್ಕ, ಸುಪ್ರೀತ್ ಮೋಂಟಡ್ಕ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಅಲ್ಲದೇ ಈ ಸಂದರ್ಭದಲ್ಲಿ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರನ್ನು ವಲಯಾಧ್ಯಕ್ಷರು ವಿಶೇಷ ಮನ್ನಣೆಯನ್ನು ನೀಡಿ ಗೌರವಿಸಿದರು.

















