ಕೆ-ಸೆಟ್ ಪರೀಕ್ಷೆಯಲ್ಲಿ ಉಪನ್ಯಾಸಕ ಪದ್ಮಕುಮಾರ್ ಜಿ.ಆರ್. ಉತ್ತೀರ್ಣ
ಅರಂತೋಡು: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಜಿ.ಆರ್. ಅವರು ಉತ್ತೀರ್ಣರಾಗಿದ್ದಾರೆ.2026ರ ಅಕ್ಟೋಬರ್ 11ರಂದು ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಅವರು ಅರ್ಹತೆ ಗಳಿಸಿದ್ದಾರೆ.ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಕೆ-ಸೆಟ್ ಪರೀಕ್ಷೆಯಲ್ಲಿ ಉಪನ್ಯಾಸಕ ಪದ್ಮಕುಮಾರ್ ಜಿ.ಆರ್. ಉತ್ತೀರ್ಣ Read More »






