ಹವಾಮಾನ ವೈಪರೀತ್ಯದಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿ ಸುರಿದ ಅಕಾಲಿಕ ಮಳೆಗೆ ಸುಮಾರು 205 ಹೆಕ್ಟೇರ್‌ನಲ್ಲಿಬೆಳೆದಿದ್ದ ಭತ್ತದ ಫಸಲು ನಷ್ಟವಾಗಿದೆ. ಪ್ರಸಕ್ತ ವರ್ಷ ಕಾಫಿಯೂ ಅತಿವೃಷ್ಟಿಗೆ ನೆಲಕಚ್ಚಿದ್ದು, ಬೆಳೆಗಾರರು ಮತ್ತೆ ಪರಿಹಾರಕ್ಕಾಗಿ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಭತ್ತದ ಕಣಜವೆಂದೇ ಕರೆಸಿಕೊಳ್ಳುವ ಸೋಮವಾರಪೇಟೆ ತಾಲೂಕಿನಲ್ಲಿಭತ್ತ ಬೆಳೆಯುವ ರೈತರೇ ಕಾಫಿ ತೋಟವನ್ನು ಹೊಂದಿದ್ದಾರೆ. ಈ ಬಾರಿ ಕಾಫಿ ಮತ್ತು ಭತ್ತ ಫಸಲು ಎರಡೂ ಹಾನಿಗೀಡಾಗಿರುವುದರಿಂದ ನಷ್ಟದ ಪ್ರಮಾಣ ಹೆಚ್ಚಿದೆ.