ಕಳೆದ ಹಲವು ವರ್ಷಗಳಿಂದ ತಂಡಕ್ಕೆ ಎಷ್ಟೇ ಕೊಡುಗೆ ನೀಡಿದರೂ ಮಯಾಂಕ್ ಅಗರ್ವಾಲ್ ಅವರನ್ನು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಮಿನಿ ಹರಾಜಿಗೆ ಬಿಡುಗಡೆಗೊಳಿಸಿದ ಪಂಜಾಬ್ ಕಿಂಗ್ಸ್ ವಿರುದ್ದ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2022ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತೊರೆದು ನೂತನ ಫ್ರಾಂಚೈಸಿ ಲಖನೌ ಸೂಪರ್ ಜಯಂಟ್ಸ್‌ಗೆ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಿದ್ದರು. 2018 ರಿಂದ 2022ರ ವರೆಗೂ ಮಯಾಂಕ್ ಅಗರ್ವಾಲ್ ಅವರು ಪಂಜಾಬ್ ಕಿಂಗ್ಸ್ ಪರ 60 ಪಂದ್ಯಗಳಾಡಿದ್ದು ಒಂದು ಶತಕ ಸೇರಿದಂತೆ 1513 ರನ್‌ಗಳನ್ನು ಕಲೆ ಹಾಕಿದ್ದಾರೆ.