Author name: Tejas

ರೆಂಜಾಳ: ವರಮಹಾಕ್ಷ್ಮಿಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು.ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ. ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ .ಇವರ ಸಹಕಾರದೊಂದಿಗೆ ಸಾರ್ವಜನಿಕ ”ಶ್ರೀ ವರಮಹಾಲಕ್ಷ್ಮೀ ‘ ಪೂಜಾ ಕಾರ್ಯಕ್ರಮವು ದಿನಾಂಕಃ 08.08.2025 ರ ಶುಕ್ರವಾರ ರಂದು “ಶ್ರೀ ವಿನಾಯಕ” ಸಭಾಭವನ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳ ದಲ್ಲಿ ನಡೆಯಿತು. ಸಭಾಕಾರ್ಯಕ್ರಮದಲ್ಲಿಶ್ರೀ ವರಮಹಾಲಕ್ಷ್ಮಿ ಪೂಜಾ ಸಮತಿ ಅಧ್ಯಕ್ಷರಾದಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನಾ ಕಾರ್ಯನನ್ನು: […]

ರೆಂಜಾಳ: ವರಮಹಾಕ್ಷ್ಮಿಪೂಜೆ Read More »

ನಾಳೆ  (ಆ.10)/ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮ ಆ. 10ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ.ಬೆಳಿಗ್ಗೆ 10 ಗಂಟೆಗೆ ಪ್ರಗತಿಪರ ಕೃಷಿಕ ಎ.ಆರ್.ಗಂಗಾಧರ ಗೌಡ ಅಡ್ಕಾರುರವರು ಜಂಬರಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರು ಉಪಸ್ಥಿತರಿರುವರು.ಬೆಳಿಗ್ಗೆ 10.30 ರಿಂದ ಕನಕಮಜಲಿನ ಶ್ರೀ ಕನಕದಾಸ ಮಕ್ಕಳ ಭಜನಾ ಮಂಡಳಿಯಿಂದ ಕುಣಿತ

ನಾಳೆ  (ಆ.10)/ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ ಕಾರ್ಯಕ್ರಮ Read More »

ಶಂಕಿತ ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವ ನಾಟಕಕಾರ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ.ಮೃತರನ್ನು ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕುಡ್ಕಣಿ ನಿವಾಸಿ, ದಿವಂಗತ ಬೊಮ್ಮಾಲೆ ಅವರ ಪುತ್ರ ನಾರಾಯಣ ಕೊಯಿಲ (35) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರುವ ಅವರಿಗೆ ಇಬ್ಬರು ಸಹೋದರಿಯರು ಇದ್ದಾರೆ.ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ನಂತರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃತ್ತಿಯಲ್ಲಿ ಮೇಸ್ತ್ರಿ ಕೆಲಸಗಾರರಾಗಿದ್ದ ನಾರಾಯಣ ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದರು. ಒಬ್ಬ ಪ್ರತಿಭಾನ್ವಿತ ಬರಹಗಾರರಾಗಿದ್ದ ನಾರಾಯಣ ಅವರು 12 ಕ್ಕೂ ಹೆಚ್ಚು

ಶಂಕಿತ ಡೆಂಗ್ಯೂ ಜ್ವರಕ್ಕೆ ಯುವಕ ಬಲಿ Read More »

ಅರಂತೋಡು : ವರಮಹಾಲಕ್ಚ್ಮಿ ಪೂಜೆ

ಅರಂತೋಡು : ಅರಂತೋಡು  ಶ್ರೀ ದುರ್ಗಾ ಮಾತಾ ಮಂದಿರದಲ್ಲಿ   13ನೇ ವರ್ಷದ ವರಮಹಾಲಕ್ಷ್ಮೀ ಮಹಾ  ನಡೆಯಿತು. 260ಕ್ಕೂ ಹೆಚ್ಚು ಪೂಜೆಗಳ ನಡೆದು ಹೆಚ್ಚಿನ ಭಕ್ತಭಿಮಾನಿಗಳ ಸದಸ್ಯರುಗಳು ಪಾಲ್ಗೊಂಡಿದ್ದರು. ವರಮಹಾಲಕ್ಷ್ಮಿ ಪೂಜಾ ಸಮಿತಿಯ  ಪೂಜಾ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರುಗಳು ಭಾಗವಹಿಸಿದ್ದರು.

ಅರಂತೋಡು : ವರಮಹಾಲಕ್ಚ್ಮಿ ಪೂಜೆ Read More »

ಅರಂಬೂರು : 15ನೇ ವರ್ಷದ ವರಮಹಾಲಕ್ಷ್ಮಿ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿ ಸುಳ್ಯ ತಾಲ್ಲೂಕು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು ಇದರ ಸಹಯೋಗದೊಂದಿಗ ಪುರೋಹಿತ ಅಭಿರಾಮ್ ಭಟ್ ಸರಳಿಕುಂಜರ ನೇತೃತ್ವದಲ್ಲಿ ಅರಂಬೂರು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ 15ನೇ ವರ್ಷದ ವರಮಹಾಲಕ್ಷ್ಮಿ ಪೂಜೆಯು ಈ ದಿನ ನಡೆಯಿತುಈ ದಿನ ಬೆಳಗ್ಗೆ 10:30ರ ಶುಭ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾದ ಮಾಧವ ಗೌಡರವರು ದೀಪ

ಅರಂಬೂರು : 15ನೇ ವರ್ಷದ ವರಮಹಾಲಕ್ಷ್ಮಿ ಪೂಜೆ Read More »

ಸುಳ್ಯ : ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅ.8 ರಂದು ನಡೆಯಿತು .ಅಧ್ಯಕ್ಷತೆಯನ್ನು ಹರೀಶ್ ನಾಯಕ್ ವಹಿಸಿದರು. ಸುಳ್ಯ ಉಪ ವಿಭಾಗ ಮಟ್ಟದ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಖೆಗಳಹಾಗೂ ಉಪ ವಿಭಾಗ ಮಟ್ಟದ ಮೆಸ್ಕಾಂ ಗ್ರಾಹಕರು ತಾವು ಅನುಭವಿಸುತ್ತಿರುವ ಬಹಳಷ್ಟು ಸಮಸ್ಯೆಗಳು,ಆಗಬೇಕಾದ ಕೆಲಸಗಳು ಹಾಗೂ ಸುರಕ್ಷಿತ ಬಗ್ಗೆ ಮೆಸ್ಕಾಂ ಸದಸ್ಯರುಅಧಿಕಾರಿಗಳ ಗಮನ ಸೆಳೆದರು. ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.ಸುಳ್ಯದಲ್ಲಿ 110 ಕೆವಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಗ್ರಾಹಕರು ಸದಸ್ಯರು ತೀರ್ವ ಸಮಾಧಾನ ವ್ಯಕ್ತಪಡಿಸಿ

ಸುಳ್ಯ : ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್‌ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಅಜ್ಜಾವರ ವಲಯದ ಮಂಡೆಕೋಲು ಕಾರ್ಯಕ್ಷೇತ್ರದ ವೀರಕೇಸರಿ ಸಂಘದ ಸದಸ್ಯರಾದ ಶ್ರೀಕಾಂತ್‌ ಇವರ ತಾಯಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವಿಮಾ ಕಾರ್ಯಕ್ರಮದಡಿಯಲ್ಲಿ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಯಿಂದ ಮಂಜೂರಾದ ಮೊತ್ತ ರೂ. 1 ಲಕ್ಷದ ಚೆಕ್‌ ನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಲೋಕನಾಥ ಅಮೆಚೂರ್‌ ರವರು ವಿತರಸಿದರು. ಈ ಸಂದರ್ಭದಲ್ಲಿ ಶ್ರೀ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್‌ ವಿತರಣೆ Read More »

ಆರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಬಾರ್ಡ್ ಡಿಡಿಎಂ ಸಂಗೀತ ಕರ್ತ ಭೇಟಿ

ಅರಂತೋಡು ತೊಡಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಬಾರ್ಡ್ ನ ಡಿಡಿಎಂ ಆಗಿರುವ ಶ್ರೀಮತಿ ಸಂಗೀತ ಕರ್ತರವರು ಭೇಟಿ ನೀಡಿದರು. ದಕ್ಷಿಣ ಕನ್ನಡದ ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಮಹತ್ವಾಕಾಂಕ್ಷಿ ಯೋಜನೆಯಾಗಿ ಸುಳ್ಯ ತಾಲ್ಲೂಕಿನಲ್ಲಿ ಅಡಿಕೆ ಹಳದಿ ರೋಗಕ್ಕೆ ಪರ್ಯಾಯವಾಗಿ ಕಾಫಿಯನ್ನು ಪ್ರಚುರ ಪಡಿಸುವ ದೃಷ್ಟಿಯಿಂದ ಯೋಜನೆಯನ್ನು ಹಮ್ಮಿಕೊಂಡಿದ್ದು ಈ ಯೋಜನೆ ಕಾರ್ಯಗತಗೊಳಿಸುವ ಮತ್ತು ಕೇಂದ್ರ ಸರ್ಕಾರದ ಮೂಲಕ ಆರ್ಥಿಕ ಸಹಕಾರವನ್ನು ನೀಡುವ ಉದ್ದೇಶಗಳಿಂದ ಯೋಜನೆಯನ್ನು ರೂಪಿಸುವ ಸಲುವಾಗಿ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತ

ಆರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಬಾರ್ಡ್ ಡಿಡಿಎಂ ಸಂಗೀತ ಕರ್ತ ಭೇಟಿ Read More »

ಮಗ ಚಲಾಯಿಸುತ್ತಿದ್ದ ಜೀಪಿನಡಿಗೆ ಬಿದ್ದು ತಂದೆ ಸಾವು

ವ್ಯಕ್ತಿಯೊಬ್ಬರು ತಮ್ಮ ಮಗನ ಜೀಪಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಮಣ್ಣಿನ ರಸ್ತೆ ಯಲ್ಲಿ ನಡೆದಿದೆ. ಕಡಬ ತಾಲೂಕು ಬಿಳಿನೆಲೆ ನಿವಾಸಿ ಧರ್ಮಪಾಲ ( 68ವ) ಮೃತಪಟ್ಟವರು ಎಂದು ಗುರುತಿಸಲಾಗಿದೆ.ಮೃತರ ಮಗ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ಜೀಪನ್ನು ಚಾಲಯಿಸುತ್ತಿದ್ದರು. ಈ ಸಂದರ್ಭದಲ್ಲಿ ಮೇಲೆ ಹೋಗದ ಹಿನ್ನಲೆ ಜೀಪಿನಲ್ಲಿದ್ದ ತಂದೆ ಧರ್ಮಪಾಲರು ಕೆಳಗೆ ಇಳಿದು ವಾಹನದ ಹಿಂಬದಿ ನಿಂತಿದ್ದರು ಎನ್ನಲಾಗಿದೆ. ಆದರೆ ಜೀಪು ಏಕಾಏಕಿ ಹಿಮ್ಮುಖವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು

ಮಗ ಚಲಾಯಿಸುತ್ತಿದ್ದ ಜೀಪಿನಡಿಗೆ ಬಿದ್ದು ತಂದೆ ಸಾವು Read More »

ಚೆಂಬು : ಕಾಡಾನೆ ದಾಳಿಗೆ ರೈತ ಬಲಿ,ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ

ಮಡಿಕೇರಿ ತಾಲೂಕು ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಕಾಡಾನೆ  ದಾಳಿಗೆ ವ್ಯಕ್ತಿ ಯೊಬ್ಬರು ಬಲಿಯಾದ  ದಾರುಣ ಘಟನೆ ಬುಧವಾರವ ತಡ ರಾತ್ರಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆ ತುಳಿತಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.ಅವರು ಅ.6ರ ರಾತ್ರಿ ಸುಮಾರು 10.30 ರ ಸಮ ಮನೆಯ ಹತ್ತಿರದ ತೋಟದಲ್ಲಿ ನಾಯಿ ಬೋಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ  ತನ್ನ ಪತ್ನಿಯೊಂದಿಗೆ ತೆರಳಿದ ಸಂದರ್ಭ ದಲ್ಲಿ ಆನೆ ಅವರಿಗೆ  ತುಳಿದಿದೆ. ಪತ್ನಿ ಪ್ರಾಣಾಪಯದಿಂದ ಪರಾಗಿದ್ದಾರೆ. ಗಂಭೀರ ಗಾಯಗೊಂಡ ಶಿವಪ್ಪ ಅವರನ್ನು  ಮನೆಯವರು

ಚೆಂಬು : ಕಾಡಾನೆ ದಾಳಿಗೆ ರೈತ ಬಲಿ,ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ Read More »

error: Content is protected !!
Scroll to Top