ವ್ಯಕ್ತಿಯೊಬ್ಬರು ತಮ್ಮ ಮಗನ ಜೀಪಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಮಣ್ಣಿನ ರಸ್ತೆ ಯಲ್ಲಿ ನಡೆದಿದೆ. ಕಡಬ ತಾಲೂಕು ಬಿಳಿನೆಲೆ ನಿವಾಸಿ ಧರ್ಮಪಾಲ ( 68ವ) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೃತರ ಮಗ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ಜೀಪನ್ನು ಚಾಲಯಿಸುತ್ತಿದ್ದರು. ಈ ಸಂದರ್ಭದಲ್ಲಿ ಮೇಲೆ ಹೋಗದ ಹಿನ್ನಲೆ ಜೀಪಿನಲ್ಲಿದ್ದ ತಂದೆ ಧರ್ಮಪಾಲರು ಕೆಳಗೆ ಇಳಿದು ವಾಹನದ ಹಿಂಬದಿ ನಿಂತಿದ್ದರು ಎನ್ನಲಾಗಿದೆ. ಆದರೆ ಜೀಪು ಏಕಾಏಕಿ ಹಿಮ್ಮುಖವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಹಿಂಬದಿ ನಿಂತಿದ್ದವರ ಮೇಲೆ ಮಗುಚಿ ಬಿದ್ದಿದೆ ಎನ್ನಲಾಗಿದೆ.
ಮಗ ಚಲಾಯಿಸುತ್ತಿದ್ದ ಜೀಪಿನಡಿಗೆ ಬಿದ್ದು ತಂದೆ ಸಾವು





















































