Author name: Tejas

ಸೌದಿ ಅರೇಬಿಯಾದ ಲಾರ್ಸನ್ ಮತ್ತು ಟೊಬ್ರೊ ಕಂಪೆನಿಯ ಹೈಡ್ರೊಕಾರ್ಬನ್ ವಿಭಾಗದ ಡಿಜಿಎಂ ಆಗಿ ಅಬ್ದುಲ್ ಅಝೀಜ್ ಪೆಲ್ತಡ್ಕ ಪದೋನ್ನತಿ

ಸೌದಿ ಅರೇಬಿಯಾದಲ್ಲಿರುವ ಪ್ರತಿಷ್ಠಿತ ಲಾರ್ಸನ್ ಮತ್ತು ಟೋಬ್ರೋ ಕಂಪನಿಯ ಹೈಡ್ರೋಕಾರ್ಬನ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಅಬ್ದುಲ್ ಅಝೀಜ್ ಪೆಲ್ತಡ್ಕ ಪದೋನ್ನತಿಗೊಂಡಿರುತ್ತಾರೆ. ಇವರುಸೌದಿ ಅರೇಬಿಯಾದದಲ್ಲಿ ಕಳೆದ 18 ವರ್ಷಗಳಿಂದಉದ್ಯೋಗದಲ್ಲಿದ್ದು ಅರಂತೋಡು ಜಮಾಅತ್ ನ ಸೌದಿ ಸಮಿತಿ ಅಧ್ಯಕ್ಷರಾಗಿ,ಮೊಳುಮ್ಮ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾಗಿ ವಿವಿಧ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡ ಗಿಸಿಕೊಂಡಿರುತ್ತಾರೆ ಇವರು ಸಂಪಾಜೆ ಗ್ರಾಮದ ಗೂನಡ್ಕ ಪೆಲ್ತಡ್ಕ ದಿವಂಗತ ಅಬೂಬಕ್ಕರ್ ಹಾಗೂ ಆಯಿಷಾ ದಂಪತಿಗಳ ಪುತ್ರ,

ಸೌದಿ ಅರೇಬಿಯಾದ ಲಾರ್ಸನ್ ಮತ್ತು ಟೊಬ್ರೊ ಕಂಪೆನಿಯ ಹೈಡ್ರೊಕಾರ್ಬನ್ ವಿಭಾಗದ ಡಿಜಿಎಂ ಆಗಿ ಅಬ್ದುಲ್ ಅಝೀಜ್ ಪೆಲ್ತಡ್ಕ ಪದೋನ್ನತಿ Read More »

ಬಸ್ಸಿನಲ್ಲಿ ಮಹಿಳೆಗೆ ತೀವ್ರ ಅಸ್ವಸ್ಥ !: ಬಸ್ಸನ್ನೇ ಕೆವಿಜಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ಮಹಿಳೆಯನ್ನು‌ ಆಸ್ಪತ್ರೆಗೆ ದಾಖಲಿಸಿದ ಚಾಲಕ

ಮಂಗಳೂರುದಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ತೀವ್ರ ಅಸ್ವಸ್ಥತೆ ಉಂಟಾದ ಘಟನೆ ಭಾನುವಾರ ನಡೆದಿದ್ದು ಸಮಯೋಚಿತ ಸ್ಪಂದನೆ ನೀಡಿದ ಬಸ್ ಚಾಲಕ ಬಸ್ಸನ್ನೇ ತಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ ಘಟನೆ ವರದಿಯಾಗಿದೆ.ಮೈಸೂರು ಮೂಲದ ಶೋಭಾ ಎಂಬ ಮಹಿಳೆಗೆ ಬಸ್ಸು ಸುಳ್ಯ ತಲುಪುವ ಹೊತ್ತಿಗೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿದ್ದರು ಕೂಡಲೇ ಸಹಪ್ರಯಾಣಿಕರು ಚಾಲಕನ ಗಮನಕ್ಕೆ ತಂದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕೂಡಲೇ

ಬಸ್ಸಿನಲ್ಲಿ ಮಹಿಳೆಗೆ ತೀವ್ರ ಅಸ್ವಸ್ಥ !: ಬಸ್ಸನ್ನೇ ಕೆವಿಜಿ ಆಸ್ಪತ್ರೆಗೆ ಚಲಾಯಿಸಿಕೊಂಡು ಹೋಗಿ ಮಹಿಳೆಯನ್ನು‌ ಆಸ್ಪತ್ರೆಗೆ ದಾಖಲಿಸಿದ ಚಾಲಕ Read More »

ಸುಳ್ಯ ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರ್ ಅವರಿಗೆ ಆದರ್ಶ ಹೃದಯವಂತ ಪ್ರಶಸ್ತಿ

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮ 2025 ಇದರ ಅಂಗವಾಗಿ ನಡೆದ ಸನ್ಮಾನ ಸಮಾರಂಭದಲ್ಲಿ ಸುಳ್ಯ ಕೃಷಿ ಇಲಾಖೆಯ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು ಅವರನ್ನು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ, 2025ನೇ ಸಾಲಿನ ‘ಆದರ್ಶ ಹೃದಯವಂತ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸುಳ್ಯ ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರ್ ಅವರಿಗೆ ಆದರ್ಶ ಹೃದಯವಂತ ಪ್ರಶಸ್ತಿ Read More »

ಸಂಪಾಜೆ : ಆಟಿ ಕೂಟ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ

ಸಂಪಾಜೆ ಗ್ರಾಮ ಪಂಚಾಯತ್ ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸ್ತ್ರೀ ಶಕ್ತಿ ಸಂಘಗಳು ಹಾಗೂ ಆದರ್ಶ ಮಹಿಳಾ ಸಮಾಜ ಇದರ ಜಂಟಿ ಆಶ್ರಯದಲ್ಲಿ ಆಟಿ ಕೂಟ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಜುಲೈ 31 ರಂದು ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕರು, ಚಿಂತಕರಾದ ಚಿದಾನಂದ ಮಾಸ್ಟರ್ ಚೆನ್ನೆಮಣೆ ಆಟ ಆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆಟಿ ಕೂಟ ಕಾರ್ಯಕ್ರಮ

ಸಂಪಾಜೆ : ಆಟಿ ಕೂಟ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ Read More »

ನಾಳೆ (ಆ.3) ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ

ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ ಈ ಬಾರಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವು ನಾಳೆ (ಆ.3ರಂದು) ಸುಳ್ಯದ ಕೋಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಮಕ್ಕಳು ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲಾ ವಯೋ ಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಆ ಮೂಲಕ ಈ ಬಾರಿಯ ಆಟಿ

ನಾಳೆ (ಆ.3) ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ Read More »

ಕಾರು ಬೈಕ್ ಅಪಘಾತದಲ್ಲಿ ಪೆರುವಾಜೆಯ ವ್ಯಕ್ತಿ ಸಾವು

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್‌ ಸವಾರ ಸುಳ್ಯ ತಾಲೂಕಿನ ವ್ಯಕ್ತಿ ಮೃತಪಟ್ಟ ಘಟನೆ ಕೊಡಗಿನ ಆನೆಕಾಡು ಬಳಿ ಇಂದು ಸಂಭವಿಸಿದೆ. ಬೈಕ್‌ ಸವಾರ ಪೆರುವಾಜೆಯ ಕಾರ್ತಿಕ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯಿತು.ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಡಿಕ್ಕಿ ಹೊಡೆದ ಬಳಿಕ ಚರಂಡಿಯೊಳಕ್ಕಾಗಿ ಕಾಡಿನೊಳಗೆ ಕಾರು ಸಾಗಿತ್ತು ಎಂದು ತಿಳಿದುಬಂದಿದೆ.

ಕಾರು ಬೈಕ್ ಅಪಘಾತದಲ್ಲಿ ಪೆರುವಾಜೆಯ ವ್ಯಕ್ತಿ ಸಾವು Read More »

ಆ.10 : ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮ ಆ. 10ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆ.2 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಬೆಳಿಗ್ಗೆ 10 ಗಂಟೆಗೆ ಪ್ರಗತಿಪರ ಕೃಷಿಕ ಎ.ಆರ್.ಗಂಗಾಧರ ಗೌಡ ಅಡ್ಕಾರುರವರು

ಆ.10 : ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ Read More »

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ

ಕಾಡುಕೋಣ ತಿವಿದು ರೈತರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಜಾಲ್ಸೂರಿನಿಂದ ವರದಿಯಾಗಿದೆ.ಜಾಲ್ಸೂರು ಗ್ರಾನದ ರವಿಶಂಕರ ಭಟ್‌ ಅವರು ಕಾಡುಕೋಣ ತಿವಿದು ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.ಜಾಲ್ಲೂರು ಗ್ರಾಮದ ನಂಗಾರು ಎಂಬಲ್ಲಿ ಇದೀಗ ಸಂಭವಿಸಿದೆ.ಜಾಲ್ಲೂರಿನ ನಂಗಾರು ರವಿಶಂಕರ ಭಟ್‌ರವರು ತನ್ನ ಮನೆಯ ತೋಟದಲ್ಲಿರುವಾಗ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗುತ್ತಿದೆಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ Read More »

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು

ಸುಳ್ಯ ತಾಲೂಕಿನ ಅರಂತೋಡು ಗ್ತಾಮದ ಉಳುವಾರು ರಮೇಶ ಅವರ ಪತ್ನಿ ನಳೀನಿ(51)ಶಂಕಿತ ಇಲಿ ಜ್ವರದಿಂದ ಜು.31ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಪತಿ ರಮೇಶ್ ಸೇರಿದಂತೆ ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು Read More »

ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಮಹಿಳೆಯ ಬಂಧನ

ಬೆಂಗಳೂರಿನಲ್ಲಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ 30 ವರ್ಷದ ಮಹಿಳೆಯನ್ನು ಎ.ಟಿ.ಎಸ್ ಪೊಲೀಸರು ಬಂಧಿಸಿದ್ದಾರೆ.ಶಂಕಿತ ಆರೋಪಿ ಶಮಾ ಪರ್ವೀನ್ ಬಂಧಿತ ಆರೋಪಿ.ಈಕೆ ಜಾರ್ಖಂಡ್ ಮೂಲದವಳಾಗಿದ್ದು, ಬೆಂಗಳೂರಿನ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.ಭಯೋತ್ಪಾದನೆಯ ಕಡೆಗೆ ಯುವಕರನ್ನು ಸೆಳೆಯುವುದಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡಲಾಗುತ್ತಿದ್ದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪ ಶಮಾ ಪರ್ವೀನ್ ಮೇಲಿದೆ.

ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಮಹಿಳೆಯ ಬಂಧನ Read More »

error: Content is protected !!
Scroll to Top