Author name: Tejas

ತೊಡಿಕಾನ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ!

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬದಿ ಪೈಪು ಲೈನಿಗಾಗಿ ತೋಡಿದ ಚರಂಡಿಯಿಂದಾಗಿ ಗ್ರಾಮದಲ್ಲಿರುವ ಏಕಮಾತ್ರ ಬಿಎಸ್ಎನ್ಎಲ್ ಮೊಬೈಲ್ ಟವರ್ ಗೆ ಸಂಪರ್ಕ ಕಲ್ಪಿಸುವ ಕೇಬಲ್ ತುಂಡಾದ ಕಾರಣದಿಂದ ತೊಡಿಕಾನ ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಕಳೆದ ಮೂರು ದಿನಗಳಿಂದ ಜನರು ಪರದಾಟ ನಡೆಸುತ್ತಿದ್ದಾರೆ.ಮೊದಲೇ ತೊಡಿಕಾನ ಗ್ರಾಮದಲ್ಲಿ ಬಿ.ಎಸ್‌.ಎನ್.ಮೊಬೈಲ್ ಟವರ್ ಮಾತ್ರ ಇದ್ದು ಆಗಾಗ ಕೈ ಕೊಡುತ್ತಿತ್ತು.ಇದೀಗ ಟವರ್ ಈಗ ಪೂರ್ಣ ಪ್ರಮಾಣದಲ್ಲಿ ಸ್ಥಗೀತಗೊಂಡ ಹಿನ್ನಲೆಯಲ್ಲಿ ಗುಡ್ಡ ಬೆಟ್ಟ ಹತ್ತಿ ಅಲೆದಾಡಿಷರೂ […]

ತೊಡಿಕಾನ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ! Read More »

ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಇಂದು ಬೆಂಗಳೂರು, ಕೋಲಾರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ದಟ್ಟ ಮಂಜಿನ ವಾತಾವರಣ ಇರಲಿದೆ. ದಕ್ಷಣ ಕನ್ನಡ ಮತ್ತು ಉಡುಪಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ Read More »

ಸುಳ್ಯ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ.24 ರಿಂದ ಡಿ. 4 ರವರೆ ಗೋಲ್ಡ್  ಎಕ್ಸ್ ಚೇಂಜ್ ಮೇಳ

ಸುಳ್ಯ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗೋಲ್ಡ್  ಎಕ್ಸ್ ಚೇಂಜ್ ಮೇಳ ಇದೇ ನವಂಬರ್ 24 ರಿಂದ ಡಿಸೆಂಬರ್ 4 ರ ವರೆಗೆ ನಡೆಯಲಿದೆ.  ಪ್ರತೀ ಗ್ರಾಂ ಚಿನ್ನ ಖರೀದಿ ಗೆ ರೂ *250* ಕಡಿತ  ನೀಡಲಾವುವುದು. ನಿಮ್ಮ ಹಳೆಯ ಚಿನ್ನಾಭರಣ ಗಳನ್ನು ಹೊಸ 916 ಹಾಲ್ ಮಾರ್ಕ್ ಆಭರಣಗಳೊಂದಿಗೆ ವಿನಿಮಯ ಮಾಡಲು ಅಪೂರ್ವ ಅವಕಾಶ ಇದೆ‌.  ಚಿನ್ನಾಭರಣ ಗಳ ಉಚಿತ ರಿಪೇರಿಗೆ, ಸ್ವರ್ಣಂ ಜ್ಯುವೆಲ್ಸ್ ಸೂಂತೋಡು ಎಂಪೋರಿಯಂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ 

ಸುಳ್ಯ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ.24 ರಿಂದ ಡಿ. 4 ರವರೆ ಗೋಲ್ಡ್  ಎಕ್ಸ್ ಚೇಂಜ್ ಮೇಳ Read More »

ಕ್ಯಾಂಪ್ಕೋ ಆಡಳಿತ ಮಂಡಳಿಗೆ ಶೇ.45.53 ಮತದಾನ

ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿಗೆ 13 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು ಬಾಕಿ ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆಯಿತು. ಒಟ್ಟು 5651 ಮತದಾರರ ಪೈಕಿ 2573 ಮತದಾರರು ಮತ ಚಲಾಯಿಸಿದ್ದು ಶೇ.45.53% ಮತದಾನವಾಗಿದೆ. 6 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿದ್ದರು. 6 ಜನ ಸಹಕಾರ ಭಾರತಿಯಿಂದ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.ನ.25 ರಂದು ಮತ ಎಣಿಕೆ ನಡೆಯಲಿದ್ದು, ನ.28 ರಂದು ಫಲಿತಾಂಶ ಘೋಷಣೆಯಾಗಲಿದೆ.

ಕ್ಯಾಂಪ್ಕೋ ಆಡಳಿತ ಮಂಡಳಿಗೆ ಶೇ.45.53 ಮತದಾನ Read More »

ಕಲ್ಲುಗುಂಡಿ : ಗೂಳಿ ಕಾಳಗ ಅಂಗಡಿ ಧ್ವಂಸ

ಅರಂತೋಡು : ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ  ನೆಲ್ಲಿಕುಮೇರಿಯ ಫಿಲೋಮಿನ ಕುಟಿನ್ಹ ರವರ ಅಂಗಡಿಗೆ ಹೋರಿಗಳು ಗೂಳಿ ಕಾಳಗ ಮಾಡಿಕೊಂಡು ನುಗ್ಹಿ  ಅಂಗಡಿ ದ್ವಂಸ ಮಾಡಿದ ಘಟನೆ ನ.23ರಂದು  ಸಂಜೆ ವೇಳೆ ವರದಿಯಾಗಿದೆಇದರಿಂದ ಅಪಾರ  ನಷ್ಟ ಸಂಭವಿಸಿದೆದಾಳಿಯಿಂದ ಫಿಲೋಮಿನ ರವರಿಗೆ ಗಾಯವಾಗಿದೆಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಪಂಚಾಯತ್ ಸದಸ್ಯರಾದ ಜಿ ಕೆ ಹಮೀದ್, ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್, ಪಂಚಾಯತ್ ಸ್ವಚ್ಛತಾ ತಂಡದ ಗುರುವ ಕಡೆಪಾಲ ಭೇಟಿ ನೀಡಿದ್ದಾರೆ.

ಕಲ್ಲುಗುಂಡಿ : ಗೂಳಿ ಕಾಳಗ ಅಂಗಡಿ ಧ್ವಂಸ Read More »

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಪುನರಾಯ್ಕೆ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ ರೇಣುಕಾ ಪ್ರಸಾದ್ ಕುರುಂಜಿಯವರು ಸರ್ವಾನುಮತದಿಂದ ಪುನಾರಯ್ಕೆಗೊಂಡಿದ್ದಾರೆ.ಹಲವಾರು ಮಂದಿ ಅಭಿಮಾನಿಗಳು‌ ಅವರನ್ನು ಅಭಿನಂದಿಸಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಪುನರಾಯ್ಕೆ Read More »

ಕೆಸೆಟ್ ಪರೀಕ್ಷೆಯಲ್ಲಿ ಸುಳ್ಯದ ಕೇತನ ರಾಜ್ಯಕ್ಕೆ ಪ್ರಥಮ

ಕೆ ಸೆಟ್ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) 2025 ಪರೀಕ್ಷೆಯಲ್ಲಿ ಕುಮಾರಿ ಕೇತನ ಕೆ.ಎಸ್. ಇವರು ಗೃಹ ವಿಜ್ಞಾನ ( Home Science) ವಿಷಯ ದಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಇವರು ಎನ್ ಟಿಎ ನಡೆಸಿದ ಯುಜಿಸಿ ನೆಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹರಾಗಿದ್ದಾರೆ. ಇವರು ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಸುರೇಶ ಕೊರತ್ಯಡ್ಕ ಹಾಗೂ ಕಮಲಾಕ್ಷಿ ದಂಪತಿಗಳ ಪುತ್ರಿ. ಪ್ರಸ್ತುತ ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ

ಕೆಸೆಟ್ ಪರೀಕ್ಷೆಯಲ್ಲಿ ಸುಳ್ಯದ ಕೇತನ ರಾಜ್ಯಕ್ಕೆ ಪ್ರಥಮ Read More »

ದ.ಕ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ ಹಾಗೂ ದೀಪಿಕಾ ಪ್ರೌಢಶಾಲೆ ಮೊಡಂಕಾಪು-ಬಂಟ್ವಾಳ ಆಶ್ರಯದಲ್ಲಿ ನಡೆದ ದ.ಕ‌.ಜಿಲ್ಲಾ ಮಟ್ಟದ ಪ್ರೌಢಶಾಲಾ 17 ಹಾಗೂ 14 ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಬಾಲಕರ ತಂಡ 17 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಆಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಅನ್ವಿತ್.ಎಂ.ಪಿ,ಧನುಷ್,ನಿತೇಶ್.ಡಿ,ಅಕ್ಷಯ್‌.ಕೆ.ಸಿ ಹಾಗೂ ಗಿರೀಶ್ .ಕೆ ತಂಡದಲ್ಲಿದ್ದರು

ದ.ಕ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಚಾಂಪಿಯನ್ Read More »

ಕೆಸೆಟ್ ಪರೀಕ್ಷೆಯಲ್ಲಿ ಮೇಘಾ ಪಿ.ಎಂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಡುವ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಲ್ಲಿ (ಕೆಸೆಟ್ -೨೦೨೫) ರಲ್ಲಿ ಮೇಘಾ ಪಿ.ಎಂ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಪೂಜಾರಿಮನೆ ಮಾಧವ ಮಾಸ್ಟರ್ ಹಾಗೂ ಗೂನಡ್ಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶೀಲಾವತಿ ಕೆ.ಎನ್‌. ಇವರ ಪುತ್ರಿ.ಮೇಘಾ ಪಿ.ಎಂ. ರೋಟರಿ ಶಾಲೆ ಸುಳ್ಯ, ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು, ಎನ್.ಎಂ.ಸಿ. ಸುಳ್ಯದ ಹಳೆ ವಿದ್ಯಾರ್ಥಿನಿ.ಮಂಗಳೂರು ವಿಶ್ವ ವಿದ್ಯಾಲಯ ಮಂಗಳೂರು ಗಂಗೋತ್ರಿಯಲ್ಲಿ ೨೦೨೫ನೇ ಸಾಲಿನಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದಾರೆ.

ಕೆಸೆಟ್ ಪರೀಕ್ಷೆಯಲ್ಲಿ ಮೇಘಾ ಪಿ.ಎಂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ Read More »

ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ‌ ಗ್ರಾಮದ ನಾರ್ಕೋಡು ಪರ್ನೋಜಿ ಸುಂದರ ಗೌಡ ಅವರು ನ.23ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.ಅವರಿಗೆ 82 ವರ್ಷವಾಗಿತ್ತು.ಮ್ರತರು ಮಕ್ಕಳಾದ ಗುರುಪ್ರಸಾದ್,ಜಯಶ್ರೀ,ಸೊಸೆ ಮೊಮ್ಮಕ್ಕನ್ನು ಸಹೋದರನ್ನು ಕುಟುಂಬಸ್ಥರನ್ನು,ಬಂಧುಬಳಗ ,ಮಿತ್ರರನ್ನು ಅಗಲಿದ್ದಾರೆ.

ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ Read More »

error: Content is protected !!
Scroll to Top