Author name: Tejas

ಎಸ್.ಕೆ.ಎಸ್.ಬಿ.ವಿ, ನುಸ್ರತುಲ್ ಇಸ್ಲಾಂ ಮದರಸ ಅರಂತೋಡಿನಲ್ಲಿ ಸಮಸ್ತದ 100 ನೇ ಸಂಸ್ಥಾಪನಾ ದಿನಾಚರಣೆ

ಎಸ್.ಕೆ.ಎಸ್.ಬಿ.ವಿ, ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಶಾಖೆ ಅರಂತೋಡು ಇವುಗಳ ಜಂಟೀ ಆಶ್ರಯದಲ್ಲಿ ಸಮಸ್ತದ 100ನೇ ಸ್ಥಾಪನಾ ದಿನಾಚರಣೆಯನ್ನು ಅರಂತೋಡಿನಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ಸಂದೇಶ ಭಾಷಣವನ್ನು ಮಾಡಿ ಸಮಸ್ತ ಆದರ್ಶ ಶುದ್ಧಿಯೊಂದಿಗೆ ಶತಮಾನ ದತ್ತ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿದ್ದು. ಹಲವಾರು ಮಹನೀಯರ ಕೊಡುಗೆ ಮತ್ತು ತ್ಯಾಗದ ಫಲವಾಗಿ ಇಂದು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.ಸದರ್ […]

ಎಸ್.ಕೆ.ಎಸ್.ಬಿ.ವಿ, ನುಸ್ರತುಲ್ ಇಸ್ಲಾಂ ಮದರಸ ಅರಂತೋಡಿನಲ್ಲಿ ಸಮಸ್ತದ 100 ನೇ ಸಂಸ್ಥಾಪನಾ ದಿನಾಚರಣೆ Read More »

ಮದುವೆಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ನಡೆಸಿ ವಂಚನೆ

ಯುವತಿಯನ್ನು ಗರ್ಭವತಿಯನ್ನಾಗಿಸಿದ ಹಿನ್ನಲೆ ಯುವತಿ ನೀಡಿದ ದೂರಿನನ್ವಯ ಪುತ್ತೂರು ಮಹಿಳಾ ಠಾಣೆಯಲ್ಲಿ ಜೂ.24 ರಂದು ಪ್ರಕರಣ ದಾಖಲಾಗಿದೆ. ಪುತ್ತೂರು ಬಪ್ಪಳಿಗೆ ನಿವಾಸಿ ಪಿ.ಜಿ.ಕೃಷ್ಣ.ರಾವ್ (21) ವಿರುದ್ಧ ಪ್ರಕರಣ ದಾಖಲಾಗಿದೆ.ಸ್ನೇಹಿತರಾಗಿದ್ದ ಇಬ್ಬರಿಗೂ ಹೈ ಸ್ಕೂಲ್ ನಿಂದಲೇ ಪರಿಚಯವಿದ್ದು ಬಳಿಕ ಪರಸ್ಪರ ಪ್ರೀತಿಸುತ್ತಿದ್ದು 2024 ರ ಅಕ್ಟೋಬ‌ರ್ ತಿಂಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಗೆ ಬರ ಹೇಳಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ.ಬಳಿಕ 2025 ಜನವರಿಯಲ್ಲಿ ಮನೆಗೆ ಬರಲು ಹೇಳಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿರುತ್ತಾನೆ

ಮದುವೆಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ನಡೆಸಿ ವಂಚನೆ Read More »

ಅರಂತೋಡು; ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಅಪಘಾತ,ಒರ್ವ ಮಹಿಳೆ ಸಾವು, ಇಬ್ಬರು ಗಂಭೀರ,ಅನೇಕ ಮಂದಿಗೆ ಗಾಯ

ಅರಂತೋಡು; ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಅಪಘಾತ,ಒರ್ವ ಮಹಿಳೆ ಸಾವು, ಇಬ್ಬರು ಗಂಭೀರ,ಅನೇಕ ಮಂದಿಗೆ ಗಾಯ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಅರಂತೋಡು ಬಳಿಯ ಉದಯನಗರ ಎಂಬಲ್ಲಿ ಕೆಎಸ್ಆರ್ಟಿಸಿ ಬಸ್‌ಗಳ ನಡುವೆ ಸಂಭವಿಸಿದ ಭೀಕರಅಪಘಾತದಲ್ಲಿ ಒರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡು ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ವರದಿಯಾಗಿದೆ.ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಹಾಗೂ ಮಡಿಕೇರಿಯಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್‌ಗಳ ನಡುವೆ ಸುಳ್ಯ ತಾಲೂಕಿನ ಅರಂತೋಡು ಬಳಿಯ ಉದಯನಗರ ತಿರುವಿನಲ್ಲಿ

ಅರಂತೋಡು; ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಅಪಘಾತ,ಒರ್ವ ಮಹಿಳೆ ಸಾವು, ಇಬ್ಬರು ಗಂಭೀರ,ಅನೇಕ ಮಂದಿಗೆ ಗಾಯ Read More »

ಅರಂತೋಡು ಬಸ್ಸುಗಳ ನಡುವೆ ಭೀಕರ ಅಪಘಾತ

ಮಾಣಿ ಮೈಸೂರು‌ ರಾಷ್ಟ್ರೀಯ ಹೆದ್ದಾರಿ 275ರ ಅರಂತೋಡು ಉದಯನಗರ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ನಡುವೆ ಜೂ. 25ರಂದು ಭೀಕರ ಅಪಘಾತ ಸಂಭವಿಸಿ ಅನೇಕ ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.ಒಂದು ಬಸ್ಸು ಮಡಿಕೇರಿ ಕಡೆಯಿಂದ ಸುಳ್ಯ ಕಡೆ ಬರುತ್ತಿತ್ತು‌.ಇನ್ನೊಂದು ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿತ್ತು.

ಅರಂತೋಡು ಬಸ್ಸುಗಳ ನಡುವೆ ಭೀಕರ ಅಪಘಾತ Read More »

AIKMCC ಪಾಲಿಯೇಟಿವ್ ಹೋಮ್ ಕೇರ್  ಸಂಪಾಜೆಯಲ್ಲಿ ಆರಂಭ

AIKMCC ಸುಳ್ಯ. ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ಬೆಂಗಳೂರು,AIKMCC ಕೊಡಗು ಇದರ ಸಹಬಾಗಿತ್ವದಲ್ಲಿ ಸಂಪಾಜೆ ಪರಿಸರದಲ್ಲಿ ಪಾಲಿಯೇಟಿವ್ ಹೋಮ್ ಕೇರ್ ತಂಡವು ಸೇವೆ ಆರಂಭಿಸಿದೆ,ಇಂದು ದ,ಕ, ಸಂಪಾಜೆ ಹಾಗೂ ಕೊಡಗು ಸಂಪಾಜೆಯ ಸುಮಾರು 10ಕ್ಕೂ ಅಧಿಕ ನಿತ್ಯರೋಗಿಗಳನ್ನು ಅವರವರ ಮನೆಗಳಿಗೆ ತೆರಳಿ ಭೇಟಿಮಾಡಿ ಅವರನ್ನು ಪರೀಕ್ಷಿಸಿ ಅವಶ್ಯಕತೆ ಇರುವಲ್ಲಿ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು,.ಪ್ರತಿ ರೋಗಿಗಳ ರಕ್ತದೊತ್ತಡ, ಶುಗರ್ ಪರೀಕ್ಷಿಸಿ ವಿವರ ನೀಡಿದರು,ವಾರಕ್ಕೊಮ್ಮೆ ಆ ರೋಗಿಗಳನ್ನು ನಿರಂತರವಾಗಿ ಪರೀಕ್ಷಿಸಲಾಗುವುದು ಎಂದು ಸುಳ್ಯ AIKMCC ಪ್ರದಾನ ಕಾರ್ಯದರ್ಶಿ ತಾಜುದ್ದೀನ್

AIKMCC ಪಾಲಿಯೇಟಿವ್ ಹೋಮ್ ಕೇರ್  ಸಂಪಾಜೆಯಲ್ಲಿ ಆರಂಭ Read More »

ಅಪರಿಚಿತ ಶವ ಪತ್ತೆ

ಅಪರಿಚಿತ ಗಂಡಸಿನ ಮೃತದೇಹ ಉಜಿರೆ ಪೇಟೆಯಲ್ಲಿ ಪತ್ತೆಯಾಗಿದ್ದು. ಮೃತದೇಹದ ವಾರಿಸುದಾರರ ಪತ್ತೆಗೆ ಬೆಳ್ತಂಗಡಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಉಜಿರೆ ಪೇಟೆಯಲ್ಲಿ ಸುಮಾರು 45 ರಿಂದ 50 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಜೂ.24 ರಂದು ಬೆಳಿಗ್ಗೆ 8 ಗಂಟೆಗೆ ದೊರೆತಿದ್ದು. ಈ ಬಗ್ಗೆ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತದೇಹವನ್ನು ಮಂಗಳೂರು ವೆನ್ಹಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಅಪರಿಚಿತ ಶವ ಪತ್ತೆ Read More »

ಪೇರಡ್ಕ ಮಸೀದಿ ಸಮೀಪ ಒಂಟಿ ಸಲಗ ಪ್ರತ್ಯಕ್ಷ

ಸಂಪಾಜೆ ಗ್ರಾಮದ ಪೇರಡ್ಕ ಮಸೀದಿ ಪರಿಸರದಲ್ಲಿ ಒಂಟಿ ಸಲಗ ಭೀತಿಯಲ್ಲಿ ಪರಿಸರ ನಿವಾಸಿಗಳು: ಸಂಪಾಜೆ ಗ್ರಾಮದ ಪೇರಡ್ಕದ ಮಸೀದಿ ಮದರಸ ಹಾಗು ಪೆರುಂಗೋಡಿ, ಅಡ್ಯಡ್ಕ ಪರಿಸರದಲ್ಲಿ ಸೋಮವಾರ ರಾತ್ರಿ ಎಂಟು ಗಂಟೆಗೆ ಒಂಟಿ ಕಾಡಾನೆ ಪ್ರತ್ಯಕ್ಷ ಗೊಂಡು ಪರಿಸರದ ನಿವಾಸಿಗಳು ಪೇರಡ್ಕ ಗೂನಡ್ಕ ಮದರಸ ವಿದ್ಯಾರ್ಥಿಗಳು ಭಯ ಭೀತರಾದರು, ಪೇರಡ್ಕ ಮೋಹಿಯದ್ದಿನ್ ಜುಮಾ ಮಸೀದಿಯ ಅಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ ಶಾಹಿದ್ ತೆಕ್ಕಿಲ್,ಸಂಪಾಜೆ ಗ್ರಾಮ ಪಂಚಯತ್ ಮಾಜಿ ಅಧ್ಯಕ್ಷರು ಸದಸ್ಯರಾದ ಜಿ ಕೆ ಹಮೀದ್

ಪೇರಡ್ಕ ಮಸೀದಿ ಸಮೀಪ ಒಂಟಿ ಸಲಗ ಪ್ರತ್ಯಕ್ಷ Read More »

ಜೂ.26ರ ಬಳಿಕ ಹಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ

ಜೂನ್ 26ರ ನಂತರ ಮಳೆ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಮುಂದಿನ ದಿನಗಳಲ್ಲಿಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಗದಗ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾಸನ ಜಿಲ್ಲೆಗಳಲ್ಲೂ ಮಳೆಯಾಗಲಿದೆ.ಭಾನುವಾರ ಶೃಂಗೇರಿ, ಕಳಸ, ಭಾಗಮಂಡಲ, ಗುಬ್ಬಿ, ಕಮ್ಮರಡಿ, ಮಾಣಿ, ಉಪ್ಪಿನಂಗಡಿ,

ಜೂ.26ರ ಬಳಿಕ ಹಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ Read More »

ಕಾಡು ಕೋಣಗಳ ಹಿಂಡು ನೋಡಿ ಆತಂಕಗೊಂಡ ಜನರು!

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ರಾತ್ರಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ದೇವಚಳ್ಳ ಗ್ರಾಮ ಪಂಚಾಯತ್ ಬಳಿಯ ಮುಖ್ಯ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿತ್ತು. ಅದೇ ದಾರಿಯಲ್ಲಿ ಉಜ್ವಲ್ ಮತ್ತಿತರರು ಹಾದುಹೋಗುತ್ತಿದ್ದ ವೇಳೆ ಕಾಡುಕೋಣಗಳ ಹಿಂಡು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ವಸತಿ ಪ್ರದೇಶಗಳ ಬಳಿ ಇಂತಹ ಕಾಡು ಪ್ರಾಣಿಗಳ ಸಂಚಾರವನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕಾಡು ಕೋಣಗಳ ಹಿಂಡು ನೋಡಿ ಆತಂಕಗೊಂಡ ಜನರು! Read More »

ಅರಂತೋಡು : ರಾಜ್ಯ ಸರಕಾರದ ಜನ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅರೋಪಿಸಿ ಜೂ. 23ರಂದು ಅರಂತೋಡು ಗ್ರಾ.ಪಂ. ಮುಂಭಾಗ ಬಿಜೆಪಿಯವರು ಪ್ರತಿಭಟನೆ ಸಭೆ ನಡೆಸಿದರು. ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ. ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಸತೀಶ್ ನಾಯ್ಕ, ರೋಹಿತ್ ಕಲ್ಲುಗದ್ದೆ ಭಾರತೀ ಪುರುಷೋತಮ, ಪುಷ್ಪಾ ಮೇದಪ್ಪ, ಚಂದ್ರಶೇಖರ ಆಚಾರ್ಯ, ಕಿಶೋ‌ರ್ ಉಳುವಾರ್, ಸೋಮಶೇಖರ ಪೈಕ, ದಯಾನಂದ ಕುರುಂಜಿ, ಪಂಚಾಯತ್

ಅರಂತೋಡು : ರಾಜ್ಯ ಸರಕಾರದ ಜನ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ Read More »

error: Content is protected !!
Scroll to Top