ಆಡಿಂಜದಿಂದ ಆಲೆಟ್ಟಿವರೆಗಿನ ಹದೆಗೆಟ್ಟ ಲೋಕೋಪಯೋಗಿ ರಸ್ತೆಯನ್ನು ಶ್ರಮದಾನ ಮೂಲಕ ದುರಸ್ಥಿಪಡಿಸಿದ ನಾಗರಿಕರು
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಆಡಿಂಜಾದಿಂದ ಆಲೆಟ್ಟಿ ವರೆಗಿನ ಲೋಕೋಪಯೋಗಿ ರಸ್ತೆಯು ತೀವ್ರ ಹದೆಗೆಟ್ಟಿದ್ದು, ಇಲಾಖೆಯಾಗಲಿ, ಜನಪ್ರತಿನಿದಿಗಳಾಗಲಿ ಎಷ್ಟೇ ಮನವಿಮಾಡಿದರೂ ಸ್ಪಂದಿಸದೇ ಇರದಿರುವುದರಿಂದ ಈ ಭಾಗದ ಸಾರ್ವಜನಿಕರು ಮತ್ತು ಸ್ಥಳೀಯ ಯುವಕ ಮಂಡಲಗಳ ಸದಸ್ಯರು ಸೇರಿಕೊಂಡು ಅ. 12ರಂದು ಬೆಳಗ್ಗಿನಿಂದ ಸಂಜೆಯವರೆಗೆ ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಪಡಿಸಿದರು.ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ತುಂಬಿರುವ ರಸ್ತೆಗೆ ರೆಡಿ ವೆಟ್ ಮಿಕ್ಸ್ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದರು.ಈ ರಸ್ತೆಯಲ್ಲಿ ಸಂಚರಿಸುವ ಎಸ್ ವಿ ಕನ್ ಸ್ಟ್ರಕ್ಷನ್ ನ ಪುನೀತ್ […]










