Author name: Tejas

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ : ಬೆಂಗಳೂರು ತಂಡ ಚಾಂಪಿಯನ್

ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ಕ್ರಿಕೆಟ್ ಪಂದ್ಯವು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ ನಡುವೆ ನಡೆಯಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಬೆಂಗಳೂರು ತಂಡ, ಡೆಲ್ಲಿ ನೀಡಿದ್ದ 204 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ ಬೆಂಗಳೂರು ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ : ಬೆಂಗಳೂರು ತಂಡ ಚಾಂಪಿಯನ್ Read More »

ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ತಾಲೂಕಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಾಸಾಶನ ನೀಡುತ್ತಿರುವ ಕುಟುಂಬಗಳಿಗೆ ಹೇಮಾವತಿ ಹೆಗ್ಗಡೆಯವರು ನೀಡಿದ ದಿನನಿತ್ಯ ಬಳಕೆ ಮಾಡುವ ವಾತ್ಸಲ್ಯ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಹಾಗೂ ಶ್ರೀಗುರು ರಾಘವೇಂದ್ರಭಜನಾ ಮಂದಿರದ ಅಧ್ಯಕ್ಷರಾದ ಜಯರಾಮ ರೈ ಒಕ್ಕೂಟದ ಅಧ್ಯಕ್ಷರು ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ಪದಾಧಿಕಾರಿಗಳು ವಿಪತ್ತು ಘಟಕದ ಸದಸ್ಯರು ಪ್ರಗತಿಬಂಧು ಸದಸ್ಯರು ಮೇಲ್ವಿಚಾರಕರು ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು

ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ Read More »

ಪಂಜ : ವೈಭವದಿಂದ ನಡೆದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ದರ್ಶನ ಬಲಿ

ಪಂಜ ಸೀಮೆ ದೇವಾಲಯವಾದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.5 ರಂದು ಶ್ರೀ ದೇವರ ದರ್ಶನ ಬಲಿ ವೈಭವದಿಂದ ನಡೆಯಿತು.ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ. ನಡೆಯಿತು.ಶ್ರೀ ದೇವರ ಬಲಿಯೊಂದಿಗೆ ವೇದ ಮಂತ್ರ ಘೋಷ ಸ್ಯಾಕ್ಸೋಪನ್ , ಚೆಂಡೆ, ಬ್ಯಾಂಡ್ ವಾಲಗ ಬೇತಾಳಗಳು,ಗೊಂಬೆಗಳು, ಪಾರ್ಚೋಡ್ ಪ್ರಖ್ಯಾತ್ ರೈ ರವರ ಗೂಳಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್

ಪಂಜ : ವೈಭವದಿಂದ ನಡೆದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ದರ್ಶನ ಬಲಿ Read More »

ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ

ಮಾವ ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಸೊಸೆ ದೂರು ನೀಡಿದ ಹಿನ್ನಲೆಯಲ್ಲಿ ಮಾವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.ದಿನಾಂಕ 02.02.2026 ರಂದು ರಾತ್ರಿ ಸುಮಾರು 7.30 ಗಂಟೆಗೆ ತಾನು ಸಂಪಾಜೆ ಕಲ್ಲುಗುಂಡಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ಇರುವ ಸಂದರ್ಭದಲ್ಲಿ, ತನ್ನ ಮಾವ ಅಕ್ರಮವಾಗಿ ಕೊಠಡಿ ಪ್ರವೇಶಿಸಿ ತನ್ನ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಪರಚಿ ಕಚ್ಚಿ ಗಾಯಗೊಳಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಸಾಹಿತ್ಯ ರೈ ಎಂಬವರು ಬಂಟ್ವಾಳ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು

ಸಂಪಾಜೆ : ಮಾವನಿಂದ ಸೊಸೆಯ ಮೇಲೆ ಹಲ್ಲೆ Read More »

ದೇಶದಲ್ಲಿ 2.5 ಕೋಟಿ ಆಧಾರ್ ಕಾರ್ಡ್ ರದ್ದು

ದೇಶಾದ್ಯಂತ ಆಧಾರ್ ಡೇಟಾಬೇಸ್‌ನ್ನು ಸುರಕ್ಷಿತ ಹಾಗೂ ನಿಖರವಾಗಿಡುವ ಉದ್ದೇಶದಿಂದ, ಮೃತಪಟ್ಟಿರುವ ವ್ಯಕ್ತಿಗಳಿಗೆ ಸೇರಿದ 2.5 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಲೋಕಸಭೆಗೆ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.ಮೃತ ವ್ಯಕ್ತಿಗಳ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವುದರಿಂದ ಗುರುತು ವಂಚನೆ ತಡೆಯಲು ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಸರ್ಕಾರಿ ಕಲ್ಯಾಣ ಯೋಜನೆಗಳ ದುರುಪಯೋಗ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.ಜಿತಿನ್ ಪ್ರಸಾದ

ದೇಶದಲ್ಲಿ 2.5 ಕೋಟಿ ಆಧಾರ್ ಕಾರ್ಡ್ ರದ್ದು Read More »

ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪೂರ್ಣಚಂದ್ರ ಕಣೆಮರಡ್ಕ ದೀರ್ಘಕಾಲಿನ ಅಸೌಖ್ಯದಿಂದ ಫೆ.4ರಂದು ನಿಧನರಾದರು. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.ಅಸೌಖ್ಯ ಉಲ್ಬಣಿಸಿದಾಗ ಮನೆಯವರು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದಾಗ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.ಮಂಡೆಕೋಲು ಪ್ರದೇಶದಲ್ಲಿ ಜನಾನುರಾಗಿಯಾಗಿದ್ದ ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದ್ದರು. ಮಂಡೆಕೋಲು ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು, ಮಂಡೆಕೋಲು ದೇವಸ್ಥಾನಕ್ಕೊಳಪಡುವ ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ 10 ವರ್ಷಗಳಿಂದ

ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರಿಗೆ ಆಯುಷ್ ಶ್ರೀ ಪ್ರಶಸ್ತಿ ಪುರಸ್ಕಾರ.

ಜ. 31 ಮತ್ತು ಫೆ. 1 ರಂದು ಮಂಗಳೂರಿನ ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಆಯುಷ್ ಹಬ್ಬ-2026ರ ಅಂಗವಾಗಿ ಆಯುಷ್ ವೈದ್ಯಕೀಯ ಪದ್ಧತಿಯಲ್ಲಿ ಸಾಧನೆಗೈದವರಿಗೆ ಕೊಡಮಾಡುವ ಆಯುಷ್ ಶ್ರೀ ಪುರಸ್ಕಾರಕ್ಕೆ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ ವಿ ಯವರು ಭಾಜನರಾಗಿದ್ದು, ಅವರ ಆಯುರ್ವೇದ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರಿಗೆ ಆಯುಷ್ ಶ್ರೀ ಪ್ರಶಸ್ತಿ ಪುರಸ್ಕಾರ. Read More »

ಡಾ. ಹರಪ್ರಸಾದ್ ತುದಿಯಡ್ಕ ರವರಿಗೆ ಆಯುಷ್ ಶ್ರೀ ಪ್ರಶಸ್ತಿ

ಡಾ. ಹರಪ್ರಸಾದ್ ತುದಿಯಡ್ಕ ರವರಿಗೆ ಆಯುಷ್ ಶ್ರೀ ಪ್ರಶಸ್ತಿ ಪ್ರದಾನಡಾ. ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ಆಯೋಜಿಸಿದ್ದ ಆಯುಷ್ ಹಬ್ಬ 2026ರ ಅಂಗವಾಗಿ ನಡೆದ ಆಯುಷ್ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ಹರಪ್ರಸಾದ ತುದಿಯಡ್ಕ ರವರಿಗೆ ಅವರ ವೈದ್ಯ ಕೀಯ ಸಾಧನೆಗಾಗಿ ಆಯುಷ್ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಹರಪ್ರಸಾದ್ ತುದಿಯಡ್ಕ ರವರಿಗೆ ಆಯುಷ್ ಶ್ರೀ ಪ್ರಶಸ್ತಿ Read More »

ಪಂಜ :: ರಕ್ತೇಶ್ವರಿ ದೈವದ ಕೋಲ

ಸುಳ್ಯ ತಾಲೂಕಿನ ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.24 ರಿಂದ ಫೆ.9 ರ ತನಕ, ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.2 ರಂದು ಮುಂಜಾನೆ ಪೂರ್ವ ಸಂಪ್ರದಾಯದಂತೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಲ್ಲಿ ಶ್ರೀ ದೇವಾಲಯಕ್ಕೆ ತೀರ್ಥ ತರಲಾಯಿತು, ಸಂಜೆ ಶ್ರೀ ರಕೇಶ್ವರಿ ದೈವದ ಸನ್ನಿಧಿಯಲ್ಲಿ ತಂಬಿಲ ಸೇವೆ ಹಾಗೂ ಭಂಡಾರ ತೆಗೆಯುವುದು. ರಾತ್ರಿ ದೇಗುಲದಲ್ಲಿ ಮಹಾಪೂಜೆ. ನಿತ್ಯ ಬಲಿ, ಅನ್ನಸಂತರ್ಪಣೆ. ಶ್ರೀ ರಕೇಶ್ವರಿ ದೈವದ

ಪಂಜ :: ರಕ್ತೇಶ್ವರಿ ದೈವದ ಕೋಲ Read More »

ಎಸ್ ಕೆ ಎಸ್ ಎಸ್ ಎಫ್ ಪೇರಡ್ಕ ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸಮ್ಮೇಳನ ಪ್ರಚಾರಾರ್ಥ ಸೌಹಾರ್ದ ಚಹಾ ಕೂಟ

ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಗೂನಡ್ಕ ಪೇಟೆಯಲ್ಲಿ ಸಮಸ್ತ ಸಮ್ಮೇಳನ ಪ್ರಯುಕ್ತ ಸೌಹಾರ್ದ ಚಹಾ ಕೂಟವನ್ನು ಆಯೋಜಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನೀರ್ ದಾರಿಮಿ ವಹಿಸಿದರು .ಪೇರಡ್ಕ ಮಸೀದಿ ಖತೀಬರಾದ ಅಹಮದ್ ನಈಂ ಫೈಝಿ ದುವಾ ನೆರವೇರಿಸಿದರು .ವೇದಿಕೆಯಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿ ಅದ್ಯಕ್ಷರಾದ ಟಿ ಎಂ ಶಹೀದ್ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಕಲ್ಲುಗುಂಡಿ ಮಸೀದಿ ಖತೀಬರಾದ ನಾಸಿರ್ ದಾರಿಮಿ ಮಾತನಾಡಿ ಸಮಸ್ತ ಶತಾಬ್ಧಿ ಕಾರ್ಯಕ್ರಮದ ಬಗ್ಗೆ

ಎಸ್ ಕೆ ಎಸ್ ಎಸ್ ಎಫ್ ಪೇರಡ್ಕ ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸಮ್ಮೇಳನ ಪ್ರಚಾರಾರ್ಥ ಸೌಹಾರ್ದ ಚಹಾ ಕೂಟ Read More »

error: Content is protected !!
Scroll to Top