Author name: Tejas

ಸುಳ್ಯದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಅಧಿಕಾರಿಗಳ ಸಭೆ

ಸುಳ್ಯ ತಾಲೂಕಿನ ಬಹುಬೇಡಿಕೆಯ ೧೧೦ ಕೆವಿ ವಿದ್ಯುತ್ ಸಬ್‌ಸ್ಟೇಷನ್ ಲೈನ್ ಕಾಮಗಾರಿಗೆ ವಿದ್ಯುತ್ ಲೈನ್ ಬರುವ ಕಡೆ ಜಾಗವನ್ನು ಗುರುತಿಸಿ, ಖಾಸಾಗಿ ಆಸ್ತಿಯಾಗಿದ್ದರೆ ತಹಸೀಲ್ದಾರ ಮೂಲಕ ನೋಟಿಸ್ ನೀಡಿ ಅ. ೧೫ರ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಲು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಸೂಚನೆ ನೀಡಿದರು.ಸುಳ್ಯ ತಾಲೂಕು ಪಂಚಾಯಿತಿಯ ಶಾಸಕರ ಕಚೇರಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸುಳ್ಯದ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ […]

ಸುಳ್ಯದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಅಧಿಕಾರಿಗಳ ಸಭೆ Read More »

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ದ. ಕ ಮತ್ತು ಕೆಪೆಕ್ ಲಿಮಿಟೆಡ್ ಬೆಂಗಳೂರುಇವರ ಸಹಯೋಗದೊಂದಿಗೆ*ಪ್ರಧಾನ ಮಂತ್ರಿಗಳ ಕಿರು ಆಹಾರ *ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವು ನಡೆಯಿತು.*ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲೆಯ ಹಿರಿಯ ಕೃಷಿ ಇಲಾಖಾ ಅಧಿಕಾರಿಗಳು, ತಾಲೂಕು ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕೃಷಿಕರು, ಕೃಷಿ ಸಖಿಯರು ಭಾಗವಹಿಸಿದ್ದು ಮಾಹಿತಿಯನ್ನು ಪಡೆದುಕೊಂಡರು .

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ Read More »

ಕಡೆಪಾಲ : ಕಾರು ಲಾರಿ ಭೀಕರ ಅಪಘಾತದಲ್ಲಿ ಮಹಿಳೆ ಸಾವು

ಸುಳ್ಯ ತಾಲೂಕಿನ ಸಂಪಾಜೆ ಕಡೆಪಾಲ ಬಳಿ ಟ್ಯಾಂಕರ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಇದೀಗ ವರದಿಯಾಗಿದೆ‌ಮಡಿಕೇರಿಗೆ ತೆರಳುವ ಕಾರು ಹಾಗೂ ಸುಳ್ಯ ಕಡೆ ಬರುತ್ತಿದ್ದ ಟ್ಯಾಂಕ‌ರ್ ಲಾರಿ ನಡುವೆ ಕಡೆಪಾಲ ತಿರುವಿನಲ್ಲಿ ಅಪಘಾತ ಸಂಭವಿಸಿದೆ .ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಡೆಪಾಲ : ಕಾರು ಲಾರಿ ಭೀಕರ ಅಪಘಾತದಲ್ಲಿ ಮಹಿಳೆ ಸಾವು Read More »

ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಭೇಟಿ

ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಭೇಟಿ ನೀಡಿದರು ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್, ಕೃಷಿಕ ಸಮಾಜದ ರಾಜ್ಯ ನಿರ್ದೇಶಕರಾದ ಪದ್ಮನಾಭ ರೈ, ಸುಪ್ರೀತ್ ಮೋoಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.ಚಂದ್ರ ಕೋಲ್ಚಾರ್ ಅಧ್ಯಕ್ಷರನ್ನು ಸನ್ಮಾನಿಸಿದರುರಾಜ್ಯ ಅಧ್ಯಕ್ಷರು : ಜೇನು ಸೊಸೈಟಿ

ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಮಂಜುನಾಥ್ ಗೌಡ ಭೇಟಿ Read More »

ವೈದ್ಯರ ಔಷಧ ಚೀಟಿ ಜನರು ಓದುವಂತಿರಲಿ: ಹೈಕೋರ್ಟ್

ಚಂಡೀಗಢ: ವೈದ್ಯರು ಬರೆಯುವಔಷಧ ಚೀಟಿಗಳಲ್ಲಿನ ಕೈಬರಹ ಜನರಿಗೆ ಅರ್ಥವಾಗುವಂತಿರಬೇಕು. ಇದು ಆರೋಗ್ಯ ಹಕ್ಕು ಮಾತ್ರವಲ್ಲದೇ, ಮೂಲಭೂತ ಹಕ್ಕು ಎಂದು ಪಂಜಾಬ್-ರ್ಹಾಣ ಹೈ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದಲ್ಲಿ ಹೇಳಿದೆ.ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ನೀಡುವ ವೈದ್ಯಕೀಯ ದಾಖಲೆಗಳು ಓದಲು ಸಾಧ್ಯವಾಗದಿದ್ದರೆ ಅದರಿಂದ ಉಂಟಾಗುವ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿರುತ್ತವೆ.ಔಷಧ ಚೀಟಿಗಳಲ್ಲಿನ ವೈದ್ಯರ ಬರಹ ಜನರಿಗೆ ಅರ್ಥವಾಗು ವಂತೆ ಇರಬೇಕು.ಇದು ಆರೋಗ್ಯದ ಹಕ್ಕು ಮಾತ್ರ ವಲ್ಲ, ಜನರ ಮೂಲಭೂತ ಹಕ್ಕು ಕೂಡ ಹೌದು,ವೈದ್ಯಕೀಯ ದಾಖಲೆಗಳು ಓದಲು ಸಾಧ್ಯವಾಗದಿದ್ದರೆ ಹಲವು ಸಮಸ್ಯೆಗೆ ದಾರಿ,ಔಷಧ ಚೀಟಿಯನ್ನು

ವೈದ್ಯರ ಔಷಧ ಚೀಟಿ ಜನರು ಓದುವಂತಿರಲಿ: ಹೈಕೋರ್ಟ್ Read More »

ಕಲ್ಚೆರ್ಪೆ ಕಾಡಾನೆಗಳು ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ

ಸೆ.2ರಂದು ರಾತ್ರಿ ಪೆರಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಲ್ಚರ್ಪೆ ಸಿರಿಕುರಲ್ ನಗರದ ಸಮೀಪದ ತೋಟಕ್ಕೆ ನುಗ್ಗಿ ಕಾಡಾನೆಗಳು ದಾಂದಲೆ ನಡೆಸಿದ ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡಕೊಂಡಿದ್ದಾರೆ.ರೈತರ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು ತೆಂಗು,ಬಾಳೆ,ಅಡಿಕೆ ಇತರ ಅಪಾರ ಬೆಳೆಗಳನ್ನು ತಿಂದು ಹಾಕಿ ಬೆಳೆ ನಾಶಪಡಿಸಿವೆ.

ಕಲ್ಚೆರ್ಪೆ ಕಾಡಾನೆಗಳು ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ Read More »

ಕಲ್ಚೆರ್ಪೆ : ಕಾಡಾನೆಗಳಿಂದ ಅಪಾರ ಬೆಳೆ ನಾಶ

ಸೆ.2ರಂದು ರಾತ್ರಿ ಪೆರಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಲ್ಚರ್ಪೆ ಸಿರಿಕುರಲ್ ನಗರದ ಸಮೀಪದ ತೋಟಕ್ಕೆ ನುಗ್ಗಿ ಕಾಡಾನೆಗಳು ದಾಂದಲೆ ನಡೆಸಿದ ಘಟನೆ ವರದಿಯಾಗಿದೆ.ಸಮೀಪದ ರೈತರ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು ತೆಂಗು,ಬಾಳೆ,ಅಡಿಕೆ ಇತರ ಅಪಾರ ಬೆಳೆಗಳನ್ನು ತಿಂದು ಹಾಕಿದ ಘಟನೆ ವರದಿಯಾಗಿದೆ.

ಕಲ್ಚೆರ್ಪೆ : ಕಾಡಾನೆಗಳಿಂದ ಅಪಾರ ಬೆಳೆ ನಾಶ Read More »

ತೊಡಿಕಾನ : ಅಗಲಿದ ಕಾಟೂರು ಕೂಸಪ್ಪ ಗೌಡರಿಗೆ ನುಡಿನಮನ ಕಾರ್ಯಕ್ರಮ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಹಿರಿಯ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತ ಪಡ್ಪು ಕಾಟೂರು ಕೂಸಪ್ಪ ಗೌಡರು ಆ.20ರಂದು ನಿಧನರಾಗಿದ್ದು ಅವರ ವೈಕುಂಟ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ತೊಡಿಕಾನ ಬಿ.ಎಸ್.ಸಭಾವನದಲ್ಲಿ ಸೆ.2ರಂದು ನಡೆಯಿತು.ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನುಡಿ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ,ರವೀಂದ್ರ ಪೂಜಾರಿ,ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಕೆ.ಆರ್ ಗಂಗಾಧರ,ತೊಡಿಕಾನ ಮಲ್ಲಿಕಾರ್ಜುನ

ತೊಡಿಕಾನ : ಅಗಲಿದ ಕಾಟೂರು ಕೂಸಪ್ಪ ಗೌಡರಿಗೆ ನುಡಿನಮನ ಕಾರ್ಯಕ್ರಮ Read More »

ಮರದಿಂದ ಬಿದ್ದು ವ್ಯಕ್ತಿ ಸಾವು

ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೊಡಿ ಅವರ ತಂದೆ ಸುಳ್ಯ ಪೈಚಾರ್ ಆರ್ತಾಜೆ ನಿವಾಸಿ ಉಮೇಶ್ ಗೌಡರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವಾಗ ಮರದಿಂದ ಬಿದ್ದು ಜಖಂಗೊಂಡು ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು.ಮರದಿಂದ ಬಿದ್ದು ಗಂಭೀರ ಗಾಯಗೊಂಡ ಉಮೇಶ್ ರವರನ್ನು ಚಿಕಿತ್ಸೆಗೆಂದು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಮರದಿಂದ ಬಿದ್ದು ವ್ಯಕ್ತಿ ಸಾವು Read More »

ಕುಂಬಳಚೇರಿ : ಪಾಣತ್ತೂರು -ಪೆರಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವ್ರದ್ದಿ ಯೋಜನೆಗೆ ಭೂ ಮಾಲೀಕರ ಒಪ್ಪಿಗೆ ಪಡೆಯು ಸಭೆ

ಪೆರಾಜೆ ಗ್ರಾಮದ ಕುಂಬಳಚೇರಿ ಸಹಕಾರಿ ಸಭಾ ಭವನದಲ್ಲಿ ಪಾಣತ್ತೂರು-ಕಲ್ಲಪಳ್ಳಿ, ಬಡ್ಡಡ್ಕ, ಕೂರ್ನಡ್ಕ, ಕುಂದಲ್ಪಾ ಡಿ, ಮಾರ್ಗವಾಗಿ ಕುಂಬಳಚೇರಿ ಮುಖಾಂತರ ಕಾಸ್ಪಾಡಿ ಎನ್ನುವಲ್ಲಿ 275 ನೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನಿರೀಕ್ಷಿತ ಅಂತರ್ ರಾಜ್ಯ ದ್ವಿಪಥ ರಸ್ತೆ ನಿರ್ಮಾಣದ ಗುರಿ ಹೊಂದಿರುವ ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿ ಕರೆದ ಸಭೆ ಕರೆಯಲಾಗಿತ್ತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಅವರು ಈಗಿರುವ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಪರಿವರ್ತನೆ ಮಾಡಿದಲ್ಲಿ ಪೆರಾಜೆ ಗ್ರಾಮ ಅಭಿವೃದ್ಧಿ

ಕುಂಬಳಚೇರಿ : ಪಾಣತ್ತೂರು -ಪೆರಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವ್ರದ್ದಿ ಯೋಜನೆಗೆ ಭೂ ಮಾಲೀಕರ ಒಪ್ಪಿಗೆ ಪಡೆಯು ಸಭೆ Read More »

error: Content is protected !!
Scroll to Top