Author name: Tejas

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರ ವಿರುದ್ಧ ಅವಹೇಳನಕಾರಿ ಮಾತನಾಡಿದ ಆರೋಪದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ‌.ಬ್ರಹ್ಮಾವರ ತಾಲೂಕು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.ಮುಂದಿನ ವಿಚಾರಣೆ ಆಗಸ್ಟ್ 23ಕ್ಕೆ ಮುಂದೂಡಿದೆ.ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ಹರಿದಾಡಿದ್ದು, ಇದರ ಬೆನ್ನಿಗೇ ವ್ಯಕ್ತಿಯೋರ್ವರು ಬ್ರಹ್ಮಾವರ ಠಾಣೆಗೆ ದೂರು […]

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ Read More »

ಸುಳ್ಯ : ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಸುಳ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಇಂಜಿನಿಯರಿಂಗ್ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಯೋರ್ವ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ.ಆತ್ಮ ಹತ್ಯೆ ಮಾಡಿಕೊಂಡ ಯುವಕನನ್ನು ಅಭಿ ಜಾರ್ಜ್ ಎಂದು ಗುರುತಿಸಲಾಗಿದೆ.ಕೇರ್ಪಳದ ಬಾಲಣ್ಣ ಎಂಬವರ ಮನೆಯಲ್ಲಿ ತನ್ನ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಭಿಜಾರ್ಜ್ ಇಂದುಬೆಳಗ್ಗೆ ತಾನುಮಲಗಿದ್ದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಳ್ಯ : ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ Read More »

ಅರಂಬೂರು : ಯುವಕನ‌ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆ.20ರ ರಾತ್ರಿ ವರದಿಯಾಗಿದೆ.ಯುವಕರ ತಂಡವೊಂದು ತಲ್ವಾರಿನಿಂದ ಪುನೀತ್ ಎಂಬ ಯುವಕನ ಮೇಲೆ ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.ಅರಂಬೂರಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಹಲ್ಲೆಗೊಳಗಾದ ಯುವಕ.ರಾತ್ರಿ ಗಂಟೆ 9.30 ರ ವೇಳೆಗೆ ಆರಂಬೂರಿನಲ್ಲಿರುವ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಏಕಾಏಕಿಯಾಗಿ ಬಂದು ತಲ್ವಾರಿನಿಂದ ಮತ್ತು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.ತಲೆಯ ಭಾಗಕ್ಕೆ ಏಟಾಗಿದ್ದು ಪುನೀತ್ ರವರನ್ನು ಸುಳ್ಯದ ಸರಕಾರಿ

ಅರಂಬೂರು : ಯುವಕನ‌ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ Read More »

ಸುಳ್ಯ : ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಸುಳ್ಯ: ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಚೇರಿ ವಿಟ್ಲ, ತಾಲೂಕು ಪಂಚಾಯತ್ ಸುಳ್ಯ, ಜಿಲ್ಲಾ ಪಂಚಾಯತ್ ಮಂಗಳೂರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕೌಶಲ್ಯ ಸಂವರ್ಧನ ಸಂಸ್ಥೆ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ತಾಲೂಕು ಪಂಚಾಯತ್ ಸುಳ್ಯದ ಮಿನಿ ಸಭಾಂಗಣದಲ್ಲಿ ಕೆ. ಇ ಜಯರಾಮ ಯೋಜನಾ ನಿರ್ದೇಶಕರು

ಸುಳ್ಯ : ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ Read More »

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್, ಸುಳ್ಯ ವತಿಯಿಂದ ಗುರುವಂದನಾ ಕಾರ್ಯಕ್ರಮ

ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್(ರಿ). (ಎನ್. ಎಸ್.ಎಸ್. ಹಿರಿಯ ಸ್ವಯಂ ಸೇವಕರ ಸಂಘ ಕೆ.ವಿ‌.ಜಿ ಪಾಲಿಟೆಕ್ನಿಕ್ ಸುಳ್ಯ)ಇದರ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸಂಘದ ಪ್ರಥಮ ತೈಮಾಸಿಕ ಸಭೆಯನ್ನು ಅರಂಬೂರಿನ “ವಿಕಸನ” ಮನೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿಸಂಘದ ಗೌರವಾಧ್ಯಕ್ಷರು , ಕೆ ವಿ ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದಬಾಲಕೃಷ್ಣ ಗೌಡ ಬೊಳ್ಳೂರು, ಗೌರವ ಸಲಹೆಗಾರರುಗಳಾದ ಕೆ ವಿ ಜಿ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಸಿ ಬಿಳಿನೆಲೆ, ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್, ಸುಳ್ಯ ವತಿಯಿಂದ ಗುರುವಂದನಾ ಕಾರ್ಯಕ್ರಮ Read More »

ವಿಶ್ವ ಹಿಂದು ಪರಿಷತ್ ನಲ್ಲಿ ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವ ಜೋಡಿಸುವ ಅಗತ್ಯ ಇದೆ. ಸೂಲಿಬೆಲೆ

ವಿಶ್ವ ಹಿಂದು ಪರಿಷತ್ ಗೆ ಇಂದು 6೦ರ ಸಂಭ್ರಮ . ಸಂಘಟನೆಗೆ ಇಂದು ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವದ ಮೂಲಕ ಕೈ ಜೋಡಿಸುವ ಅಗತ್ಯ ಇದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿ ಸುಳ್ಯ ಪ್ರಖಂಡಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗ ದಲ್ಲಿ ಆ.19 ರಂದು ನಡೆದ

ವಿಶ್ವ ಹಿಂದು ಪರಿಷತ್ ನಲ್ಲಿ ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವ ಜೋಡಿಸುವ ಅಗತ್ಯ ಇದೆ. ಸೂಲಿಬೆಲೆ Read More »

ಆ 24:ಸುಳ್ಯದಲ್ಲಿ ಭೀಮರಾವ್ ವಾಷ್ಕರ್ ಉತ್ಸವ ,ಸನ್ಮಾನ,ಕವಿಗೋಷ್ಠಿ,ಸಂಗೀತ ರಸಮಂಜರಿ ಕಾರ್ಯಕ್ರಮ

ಕವಿ, ಕಥೆಗಾರ, ಗಾಯಕ,ಜ್ಯೋತಿಷಿ, ನಟ – ನಿರ್ದೇಶಕಹೆಚ್ . ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ವತಿಯಿಂದ ಭೀಮರಾವ್ ವಾಷ್ಕರ್ ಉತ್ಸವ ಭಾನುವಾರ ಆಗಸ್ಟ್ 24ರಂದು ಬೆಳಿಗ್ಗೆ 9-30ಕ್ಕೆ ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಸಮಾರಂಭ, ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ರಸಮಂಜರಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಲಾಗುವುದು.ಉತ್ಸವವನ್ನು ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಸಂಚಾಲಕರು, ಚೈತನ್ಯ ಸೇವಾಶ್ರಮ, ಅಜ್ಜಾವರ

ಆ 24:ಸುಳ್ಯದಲ್ಲಿ ಭೀಮರಾವ್ ವಾಷ್ಕರ್ ಉತ್ಸವ ,ಸನ್ಮಾನ,ಕವಿಗೋಷ್ಠಿ,ಸಂಗೀತ ರಸಮಂಜರಿ ಕಾರ್ಯಕ್ರಮ Read More »

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ಶಿಫಾರಸ್ಸಿನ ಮೆರಗೆ ಪರಿಹಾರ ನಿಧಿ ಬಿಡುಗಡೆ

ಸುಳ್ಯ ತಾಲ್ಲೂಕು ತೋಡಿಕಾನ ಗ್ರಾಮದ ವೆಂಕಟೇಶ್ ಕೆ.ಜಿ ಇವರ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ. 50,000 ಹಣವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರ ಶಿಪಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಿಡುಗಡೆ ಮಾಡಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ಶಿಫಾರಸ್ಸಿನ ಮೆರಗೆ ಪರಿಹಾರ ನಿಧಿ ಬಿಡುಗಡೆ Read More »

ಸುಳ್ಯ : ಮೊಸರು ಕುಡಿಕೆ ಉತ್ಸವಕ್ಕೆ ಅದ್ದೂರಿ ಚಾಲನೆ

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ, ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ೧೨ನೇ ವರ್ಷದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಗೆ ಚೆನ್ನಕೇಶವ ದೇವಳದ ವಠಾರದಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಅದ್ದೂರಿ ಚಾಲನೆ ನೀಡಿ ಶುಭಹಾರೈಸಿದರು. ಹಿಂದೂ ಯುವಕರ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಗೆ ಅಟಲ್ ಬಿಹಾರಿ ವಾಜಪೇಯಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಮಡಿಕೆ ಒಡೆಯುವ ಮೂಲಕ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾ‌ರ್

ಸುಳ್ಯ : ಮೊಸರು ಕುಡಿಕೆ ಉತ್ಸವಕ್ಕೆ ಅದ್ದೂರಿ ಚಾಲನೆ Read More »

ನಾಪತ್ತೆಯಾದ ಪಿಕಪ್ ಪತ್ತೆ

ಐವರ್ನಾಡಿನಲ್ಲಿ ಅಂಗಡಿಯ ಎದುರು ನಿಲ್ಲಿಸಿದ್ದ ಪಿಕಪ್ ವಾಹನವೊಂದು ಕೆಲವು ದಿನಗಳ ಹಿಂದೆ ನಿಲ್ಲಿಸಿದ ಕಳವಾಗಿದ್ದು ಕಾರ್ಕಳದಲ್ಲಿ ಪತ್ತೆಯಾದ ಘಟನೆ ಆ.19 ರಂದು ನಡೆದಿದೆ.ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್,ಶಾಮಿಯಾನ ಅಂಗಡಿ ಮಾಲಕ ಸುನಿಲ್‌ ನಿಡ್ಡಾಜೆಯವರು ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದ ಪಿಕಪ್ ಕಾಣೆಯಾಗಿತ್ತು.ಈ ಬಗ್ಗೆ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಮುಖ್ಯ ರಸ್ತೆಯಲ್ಲಿರುವ ಸಿ.ಸಿ.ಕೆಮರಾಗಳನ್ನು ಪರಿಶೀಲಿಸಿದ್ದರು. ಇಂದು ಕಾರ್ಕಳ ತಾಲೂಕಿನ ಮುಡೂರು ಎಂಬಲ್ಲಿ ಪಿಕಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ನಾಪತ್ತೆಯಾದ ಪಿಕಪ್ ಪತ್ತೆ Read More »

error: Content is protected !!
Scroll to Top