ಮಾಡಾವು ಉಪಕೇಂದ್ರದಿಂದ.ಹೆಚ್ಚುವರಿಯಾಗಿ 20 ಮೆಗಾವ್ಯಾಟ್ ಪರಿವರ್ತಕ ಅಳವಡಿಸಿ ಶಾಶ್ವತ ಪರಿಹಾರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಂದ ಇಂಧನ ಸಚಿವರಿಗೆ ಮನವಿ.
110/33/11KV ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ಪ್ರಸ್ತುತ ಎರಡು 20MVA ಪರಿವರ್ತಕಗಳಿದ್ದು ಈ ಪೈಕಿ ಒಂದು 20MVA ಪರಿವರ್ತಕ ಮೂಲಕ 33KV ಕಾವು ಮತ್ತು ಸುಳ್ಯಹಾಗೂ ಇನ್ನೊಂದು ಪರಿವರ್ತಕದ ಮೂಲಕ ಬೆಳ್ಳಾರೆ ಹಾಗೂ ಗುತ್ತಿಗಾರು ಉಪಕೇಂದ್ರ ಗಳಿಗೆ ವಿದ್ಯುತ್ ವಿತರಣಾ ವ್ಯವಸ್ಥೆ ಇರುತ್ತದೆ,ಪ್ರಸ್ತುತ ಕಾವು ಮತ್ತು ಸುಳ್ಯ ಉಪಕೇಂದ್ರಗಳ ಸ್ಥಾಪಿತ ಸಾಮರ್ಥ್ಯ ಒಟ್ಟು 35MVA ಆಗಿದ್ದು ಬೆಳ್ಳಾರೆ ಹಾಗೂ ಗುತ್ತಿಗಾರು ಉಪಕೇಂದ್ರಗಳ ಸ್ಥಾಪಿತ ಸಾಮರ್ಥ್ಯ 27.5MVA ಆಗಿರುತ್ತದೆ.ಮಾಡಾವು ಉಪಕೇಂದ್ರದ ಎರಡೂ 20MVA ಪರಿವರ್ತಕ ಗಳು ಓವರ್ ಲೋಡ್ ನಿಂದ […]









