Author name: Tejas

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ

ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಕೆಲವು ಕಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಕೆಎಸ್‌ಎನ್‌ಡಿಎಂಸಿ ಮಾಹಿತಿಯಂತೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ 40 ಡಿ.ಸೆ. ತಾಪಮಾನ ದಾಖಲಾಗಿದೆ. ಉಳಿದಂತೆ ಅಜೆಕಾರಿನಲ್ಲಿ 39.8, ಉಪ್ಪಿನಂಗಡಿ 39.6, ಮೂಡುಬಿದಿರೆ 39, ಹೆಬ್ರಿಯಲ್ಲಿ 39 ಡಿ.ಸೆ. ಮತ್ತು ಮಂಗಳೂರಿನಲ್ಲಿ 35.2 ತಾಪಮಾನ ದಾಖಲಾಗಿದೆ. .

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ Read More »

ಪುತ್ತೂರು : ರೈಲು ಕೆಟ್ಟು ಸಮಸ್ಯೆಗೊಳಗಾದ ಪ್ರಯಾಣಿಕರು

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಪುತ್ತೂರಿನಲ್ಲಿ ಕೆಟ್ಟು ನಿಂತ ಘಟನೆ ಭಾನುವಾರ ರಾತ್ರಿ ನಡೆದಿದೆ.ಮಂಗಳೂರಿನಿಂದ ಹೊರಟಿದ್ದ ಕಣ್ಣೂರು ಎಕ್ಸ್’ಪ್ರೆಸ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಪರದಾಡುವ ಸ್ಥಿತಿ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ.ರಾತ್ರಿ 9.30ಕ್ಕೆ ಕಣ್ಣೂರು ಎಕ್ಸ್’ಪ್ರೆಸ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿತ್ತು.ಪುತ್ತೂರಿನಿಂದ ಸುಮಾರು 1.ಕಿ.ಮೀ ಮುಂದೆ ಸಾಗಿದ ರೈಲು ಅಚಾನಕಾಗಿ ನಿಂತಿತುಸುಬ್ರಹ್ಮಣ್ಯದಿಂದ ರೈಲು ಇಂಜಿನ್ ತರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು : ರೈಲು ಕೆಟ್ಟು ಸಮಸ್ಯೆಗೊಳಗಾದ ಪ್ರಯಾಣಿಕರು Read More »

ಪುತ್ತೂರು : ಭೀಕರ ಅಪಘಾತದಲ್ಲಿ ತಾಯಿ ಮಗು ಸಾವು

ಬಸ್‌ ಹಾಗೂ ಆಟೋ ರಿಕ್ಷಾ ನಡುವೆ ಪುತ್ತೂರಿನ ನೆಹರು ನಗರದಲ್ಲಿ ಮಾ.2ರಂದು ಅಪಘಾತ ಸಂಭವಿಸಿ ಘಟನೆಯಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೂವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.ಕುಂಬ್ರ ನಿವಾಸಿ ಜಮೀಲಾ(52.ವ) ಹಾಗೂ ತನ್ನೀರ್ (4 ವ.) ಮೃತರು. ಇನ್ನೂ ಆಟೋರಿಕ್ಷಾ ಚಾಲಕ ಮಹಮ್ಮದ್, ಒರ್ವ ಮಹಿಳೆ ಮತ್ತು ಮಗು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪುತ್ತೂರು : ಭೀಕರ ಅಪಘಾತದಲ್ಲಿ ತಾಯಿ ಮಗು ಸಾವು Read More »

ಅರೆಭಾಷೆಯ ಹಲವು ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಬೇಕು : ಪುರುಷೋತ್ತಮ ಬಿಳಿಮಲೆ

ಮಡಿಕೇರಿ : ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ‘ಅರೆಭಾಷೆ ‘ಅಧ್ಯಯನ ಪೀಠ’ವು ಈಗಾಗಲೇ ಆರಂಭವಾಗಿದ್ದು, ಅರೆಭಾಷೆಯ ಹಲವು ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಒತ್ತಾಯಿಸಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರ, ಆಲೂರು ಸಿದ್ದಾಪುರ, ಸುಂಟಿಕೊಪ್ಪ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ಪಿರಿಯಾಪಟ್ಟಣ, ಸೋಮವಾರಪೇಟೆ ಹಾಗೂ ಯಡವಾರೆ ಗೌಡ ಸಮಾಜಗಳ ಸಹಕಾರದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಭಾನುವಾರ

ಅರೆಭಾಷೆಯ ಹಲವು ಚಟುವಟಿಕೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ 5 ಕೋಟಿ ರೂ ಬಿಡುಗಡೆ ಮಾಡಬೇಕು : ಪುರುಷೋತ್ತಮ ಬಿಳಿಮಲೆ Read More »

ಸುಳ್ಯದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲೆ

ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ದಾಖಲಾಗಿದೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮಾನಿಟರಿಂಗ್ ಸೆಂಟರ್ ಮಾ.1ರಂದು ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಸುಳ್ಯದಲ್ಲಿ ಅತ್ಯಧಿಕ 40.1 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಮಾ.2ರಂದೂ ಕರಾವಳಿಯಲ್ಲಿ ಹೀಟ್ ವೇವ್ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ದಕ್ಷಿಣ ಕನ್ನಡದ ನಾಲ್ಕು ಪ್ರದೇಶಗಳು ಮತ್ತು ಉತ್ತರ ಕನ್ನಡದ ಮೂರು ಪ್ರದೇಶಗಳಲ್ಲಿ 39 ಡಿ.ಸೆ.ನಿಂದ 40.1 ಡಿ.ಸೆ. ವರೆಗೆ ಉಷ್ಣಾಂಶ ದಾಖಲಾಗಿರುವುದು ಕಂಡುಬಂದಿದೆ.ಬಂಟ್ವಾಳದಲ್ಲಿ 39.1 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಕಡಬದಲ್ಲಿ 39 ಡಿ.ಸೆ. ಗರಿಷ್ಠ

ಸುಳ್ಯದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೇರ್ಪಡ ಶ್ರೀಮಹಿಷಾ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಡಿಡಿ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೇರ್ಪಡ ಶ್ರೀಮಹಿಷಾ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುರಾದ 5,00,000 ಮೊತ್ತದ ಡಿಡಿ ಹಸ್ತಾಂತರ ಮಾಡಲಾಯಿತು.. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡುವ ಬೇರೆ ಬೇರೆ ಕಾರ್ಯಕ್ರಮಗಳಿಗೆ ನೀಡುವ ಅನುದಾನಗಳ ಬಗ್ಗೆ.. ಯೋಜನೆಯಿಂದ ಸದಸ್ಯರಿಗೆ ಮತ್ತು ಊರಿನ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಯೋಜನೆಯ ಕಾರ್ಯ ನಿರ್ವಹಿಸುವ ರೀತಿಯ ಬಗ್ಗೆ ಸದಸ್ಯರಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೇರ್ಪಡ ಶ್ರೀಮಹಿಷಾ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಡಿಡಿ ಹಸ್ತಾಂತರ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದ ಜೀರ್ಣೊದ್ದಾರ ಸಮಿತಿ ಸಭೆ,ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ ಆಯ್ಕೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜೀರ್ಣೋದ್ಧಾರ ಸಮಿತಿ ಸಭೆ ಮಾ 2ರಂದು‌ ದೇವಳದಲ್ಲಿ ನಡೆಯಿತು.ಜಾತ್ರೋತ್ಸವ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು.ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಸಂತೋಷ ಕುತ್ತಮೊಟ್ಟೆ ಆಯ್ಕೆಯಾದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಕೇಶವ ಕೊಳಲು ಮೂಲೆ(ಉಳುವಾರು),ಕಾರ್ಯನಿರ್ವಾಹಣಾಧಿಕಾರಿ ಅವಿನ್ ರಂಗತ್ ಮಲೆ,ಗುರುಮನೆಯ ಕ್ರಷ್ಣ ಬೈಪಾಡಿತ್ತಾಯ,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯು.ಎಂ ಕಿಶೋರ್ ಕುಮಾರ್, ಅರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಅರಂತೋಡು ನೆಹರು ಸ್ಮಾರಕ ಪದವಿಪೂರ್ವ

ತೊಡಿಕಾನ : ಮಲ್ಲಿಕಾರ್ಜುನ ದೇವಳದ ಜೀರ್ಣೊದ್ದಾರ ಸಮಿತಿ ಸಭೆ,ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ ಆಯ್ಕೆ Read More »

ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ

ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವು ಫೆಬ್ರುವರಿ 28 ರಿಂದ ಮಾರ್ಚ್ 2 ರವರೆಗೆ ನಡೆಯುತ್ತಿದ್ದು, ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡ ಮಹಿಳಾ ವಿಚಾರ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಬಂಧ ಮಂಡನೆ ಮಾಡಿದರು. ಮಹಿಳಾ ಚಿಂತಕಿ ಶೈಲಜ ಹಿರೇಮಠ್ ಉದ್ಘಾಟಿಸಿದ , ಸಾಹಿತಿಗಳಾದ ಎಸ್ ವಿ ಪಾಟೀಲ್ ಅಧ್ಯಕ್ಷತೆ ವಪಿಸಿದ್ದ ವಿಚಾರ ಗೋಷ್ಠಿಯಲ್ಲಿ ಡಾ. ಅನುರಾಧಾ

ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ Read More »

ಚಲಿಸುತ್ತಿದ್ದ ರೈಲಿನಿಂದ ಇಬ್ಬರು ಮಕ್ಕಳೊಂದಿಗೆ ತಾಯಿ ಹಾರಿ ಆತ್ಮಹತ್ಯೆ

ಚಲಿಸುತ್ತಿದ್ದ ರೈಲಿನಿಂದ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಟ್ಟಾಯಂನ ಎಟ್ಟುಮನೂರಿನಲ್ಲಿ ರೈಲು ಹಳಿಯ ಬಳಿ ನಡೆದಿದೆ. ಶೈನಿ ಕುರಿಯಾಕೋಸ್ (42) ಮತ್ತು ಅವರ ಪುತ್ರಿಯರಾದ ಇವಾನಾ ಮರಿಯಾ ನೋಬಿ (10) ಮತ್ತು ಅಲೀನಾ ಎಲಿಸಬಾತ್ ನೋಬಿ (11) ಮೃತರು. ಶುಕ್ರವಾರ ಬೆಳಿಗ್ಗೆ 5.15 ರ ಸುಮಾರಿಗೆ ಮೂವರು ಕೊಟ್ಟಾಯಂ ನಿಲಂಬೂರು ಎಕ್ಸಪ್ರೇಸ್ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೌಟುಂಬಿಕ ಸಮಸ್ಯೆಯಿಂದಾಗಿ ತನ್ನ ಪತಿಯಿಂದ ಬೇರ್ಪಟ್ಟು ತನ್ನ ತಂದೆಯ ಜೊತೆ ಪರೋಲಿಕಲ್ ಎಂಬಲ್ಲಿ ಮಹಿಳೆ

ಚಲಿಸುತ್ತಿದ್ದ ರೈಲಿನಿಂದ ಇಬ್ಬರು ಮಕ್ಕಳೊಂದಿಗೆ ತಾಯಿ ಹಾರಿ ಆತ್ಮಹತ್ಯೆ Read More »

ಸಂಪಾಜೆ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಕಲ್ಲು ಅಲಡ್ಕ ಮುಂಡಡ್ಕ 14,36000 ರೂಪಾಯಿ ವೆಚ್ಚದಲ್ಲಿ ಗ್ರಾಮ ಪಂಚಾಯತ್ ಸ್ವಂತ ನಿಧಿ 15 ನೇ ಹಣಕಾಸು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆಯನ್ನು ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯರೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಸಂಪಾಜೆ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮೂಲಕ 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ ಈ ಭಾಗದ ಜನ ಪ್ರತಿನಿಧಿಗಳು ಕ್ರಿಯಾಶೀಲಾರಾಗಿ ಕೆಲಸ ಮಾಡುವ

ಸಂಪಾಜೆ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ Read More »

error: Content is protected !!
Scroll to Top