ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಪುತ್ತೂರಿನಲ್ಲಿ ಕೆಟ್ಟು ನಿಂತ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಹೊರಟಿದ್ದ ಕಣ್ಣೂರು ಎಕ್ಸ್’ಪ್ರೆಸ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಪರದಾಡುವ ಸ್ಥಿತಿ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ.
ರಾತ್ರಿ 9.30ಕ್ಕೆ ಕಣ್ಣೂರು ಎಕ್ಸ್’ಪ್ರೆಸ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿತ್ತು.
ಪುತ್ತೂರಿನಿಂದ ಸುಮಾರು 1.ಕಿ.ಮೀ ಮುಂದೆ ಸಾಗಿದ ರೈಲು ಅಚಾನಕಾಗಿ ನಿಂತಿತು
ಸುಬ್ರಹ್ಮಣ್ಯದಿಂದ ರೈಲು ಇಂಜಿನ್ ತರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರು : ರೈಲು ಕೆಟ್ಟು ಸಮಸ್ಯೆಗೊಳಗಾದ ಪ್ರಯಾಣಿಕರು





















































