Author name: Tejas

ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ: ಡಾ.ವೀರೇಂದ್ರ ಹೆಗ್ಗಡೆ

ಕೇಂದ್ರ ಬಜೆಟ್ ಗ್ರಾಮೀಣ ಮತ್ತು ಉದ್ಯೋನ್ಮುಖ ಕೇಂದ್ರಗಳಲ್ಲಿ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಬಲಪಡಿಸುವ ಮೂಲಕ ಬಜೆಟ್ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಜೀವನೋಪಾಯವನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದೆ. ಆರೋಗ್ಯ, ಶಿಕ್ಷಣ ಮತ್ತು ಮೌಲ್ಯಗಳ ನೆಲೆಯಲ್ಲಿ ಕೌಶಲಗಳ ಮೂಲಕ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದಾಗ ಅದು ಸ್ವಾವಲಂಬನೆ, ಆಂತರಿಕ ಬೆಳವಣಿಗೆ ಮತ್ತು ರಾಷ್ಟ್ರದ ಪ್ರಗತಿಗೆ ಪೂರಕವಾಗುವಂತೆ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಿ.ವೀರೇಂದ್ರ ಹೆಗ್ಗಡೆಯವರು ಬಜೆಟ್ ಬಗ್ಗೆ ಪ್ರತಿಕ್ರಿಯೆ […]

ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ: ಡಾ.ವೀರೇಂದ್ರ ಹೆಗ್ಗಡೆ Read More »

ಅರಂತೋಡು : ಬಿದ್ದು ಸಿಕ್ಕಿದ ಮೊಬೈಲ್ ಫೋನ್ ವಾರಿಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮುನೀರ್ ಪೈಚಾರ್

ಅರಂತೋಡು ಪೇಟೆಯಲ್ಲಿ ಸಿಕ್ಕ ಮೊಬೈಲ್ ಫೋನ್ ಅನ್ನು ಅದರ ವಾರಿಸುದಾರರಿಗೆ ನೀಡಿ ಮುನೀರ್ ಪೈಚಾರ್ ರವರು ಪ್ರಾಮಾಣಿಕತೆ ಮೆರೆದಿದ್ದಾರೆ .ಅರಂತೋಡು ಮುಖ್ಯ ಪೇಟೆಯಲ್ಲಿರುವ ಹೋಟೆಲ್ ಫುಡ್ ಪಾಯಿಂಟ್ ಮುಂಭಾಗ ಮುನೀರ್ ರವರಿಗೆ ಬಿದ್ದು ಸಿಕ್ಕಿದ್ದು ಕೂಡಲೇ ಅವರು ಸಾಮಾಜಿಕ ಜಾಲತಾಣ ಸಂದೇಶ ಹಂಚಿಕೊಂಡರು.ಬಳಿಕ ಮೊಬೈಲ್ ಕಳೆದು ಕೊಂಡ ವ್ಯಕ್ತಿ ಕುಂಬಕೊಡ್ ನಿವಾಸಿ ಮೂಸಾ ರವರದ್ದು ಎಂದು ತಿಳಿದು ಬಂದಿದ್ದು ಬಳಿಕ ಅವರು ಅರಂತೋಡಿಗೆ ಬಂದು ಮುನೀರ್ ರವರಿಂದ ಮೊಬೈಲ್ ಫೋನ್ ಕಳೆದು ಹೋಗಿದ್ದ ವಿಚಾರ ತಿಳಿಸಿ ಮೊಬೈಲ್

ಅರಂತೋಡು : ಬಿದ್ದು ಸಿಕ್ಕಿದ ಮೊಬೈಲ್ ಫೋನ್ ವಾರಿಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮುನೀರ್ ಪೈಚಾರ್ Read More »

ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್: ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ ಸಿದ್ಧಗೊಂಡ ‘ಯುವ ಶಕ್ತಿ’ ಆಧಾರಿತ ದೂರದೃಷ್ಟಿಯ ಬಜೆಟ್ ಎಂಬುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಣ್ಣಿಸಿದ್ದಾರೆ. ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಸಂಸದರು, ಇಂದು ಮಂಡಿಸಿದ ಬಜೆಟ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಬಡವರು, ಶೋಷಿತ

ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್: ಕ್ಯಾ. ಬ್ರಿಜೇಶ್ ಚೌಟ Read More »

ಕೇಂದ್ರ ಸರಕಾರದ ಬಜೆಟ್ ಆಶಾದಾಯಕ ಬಜೆಟ್ : ಭಾಗೀರಥಿ ಮುರುಳ್ಯ

ಕೇಂದ್ರ ಸರಕಾರದ ಬಜೆಟ್ ಬಡವರು , ಮಧ್ಯಮವರ್ಗದರುಗಳಿಗೆ ಹಾಗೂ ಯುವಜನರ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬಜೆಟ್ , ವಿಶೇಷವಾಗಿ ಆತ್ಮನಿರ್ಬರಕ್ಕೆ ಒತ್ತು ನೀಡುವ ಮತ್ತು ವಿಕಸಿತ ಭಾರತ ಯೋಜನೆಗೆ ಪೂರಕವಾಗುವಂತಹ ಬಜೆಟ್ ಇದಾಗಿದ್ದು ನವ ಭಾರತದ ಅಭಿವೃದ್ಧಿಗೆ ಸಹಕಾರವಾಗಲಿದೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಬಜೆಟ್ ಆಶಾದಾಯಕ ಬಜೆಟ್ : ಭಾಗೀರಥಿ ಮುರುಳ್ಯ Read More »

ಪಂಜ ಸೀಮೆಯ ದೇವಳದಲ್ಲಿ ವರ್ಷವಾಧಿ ಜಾತ್ರೋತ್ಸವ : ಭಜನಾ ಸಂಕೀರ್ತನೆ ಆರಂಭ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಜ. 24 ರಿಂದ ಫೆ. 9ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಫೆ. 1ರಂದು ಸಂಜೆ ಭಜನಾ ಸಂಕೀರ್ತನೆಗೆ ದೀಪ ಪ್ರಜ್ವಲನೆ ನಡೆಯಿತು.ದೇವಳದಲ್ಲಿ ಪ್ರಾರ್ಥನೆ ನಡೆದು ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರು ರವರು ದೀಪ ಪ್ರಜ್ವಲನೆ ಗೊಳಿಸಿದರು. ಭಜನಾ ಸಂಕೀರ್ತನೆ ಸಂಚಾಲಕ ಮಹಾಲಿಂಗ ಸಂಪ, ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ಶ್ರೀ ಶಾರದಾಂಬಾ

ಪಂಜ ಸೀಮೆಯ ದೇವಳದಲ್ಲಿ ವರ್ಷವಾಧಿ ಜಾತ್ರೋತ್ಸವ : ಭಜನಾ ಸಂಕೀರ್ತನೆ ಆರಂಭ Read More »

ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಮದಕ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಸುಳ್ಯ ಪೋಲಿಸರು ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ ಬೈಕ್ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.ಸ್ಥಳದಲ್ಲಿದ್ದ 1 ಬೈಕ್ ಮತ್ತು 4 ಕೋಳಿಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಉಬರಡ್ಕ ಮಿತ್ತೂರು ಗ್ರಾಮದಮದಕ ಕೆ.ಎಫ್.ಡಿ.ಸಿ.ರಬ್ಬರ್ ಪ್ಲಾಂಟೇಷನ್ ಒಳಗೆ ಕೋಳಿ ಅಂಕ ನಡೆಯುತ್ತಿದ್ದಾಗ ಸುಳ್ಯ ಕ್ರೈಂ ಎಸ್. ಐ. ಸರಸ್ವತಿ ಯವರ ತಂಡ ದಾಳಿ ನಡೆಸಿತ್ತು.

ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಸುಳ್ಯಕ್ಕೆ ನೂತನ‌ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸಿದ್ದಪ್ಪ ಹರಗಿ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಯಮನೂರಪ್ಪ ಸಿದ್ದಪ್ಪ ಹರಗಿ (ವೈ.ಎಸ್.ಹರಗಿ) ಎಂಬವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ. ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಅವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.ಅವರು ಫೆ.2ರಂದು ಅವರು ಸುಳ್ಯಕ್ಕೆ ಬಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.ಸುಳ್ಯ ತಾಲೂಕು ಕಳೆದ ಒಂದು ವರ್ಷದಿಂದ ಖಾಯಂ ಶಿಕ್ಷಣಾಧಿಕಾರಿಗಳಲ್ಲದೆ ಸಮಸ್ಯೆ ಎದುರಿಸುತ್ತಿದೆ.

ಸುಳ್ಯಕ್ಕೆ ನೂತನ‌ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸಿದ್ದಪ್ಪ ಹರಗಿ Read More »

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ ಕಲ್ಲುರ್ಟಿ ದೈವಗಳ ಕೋಲ

ಸುಳ್ಯದ ಗಾಂಧಿನಗರ ನಾವೂರು ಶ್ರೀ ಕಲ್ಕುಡ ಪರಿವಾರ ದೈವಸ್ಥಾನದಲ್ಲಿಶ್ರೀ ಕಲ್ಕುಡ- ಕಲ್ಲುರ್ಟಿ,ದೈವಗಳ ಕಾಲಾವಧಿ ನೇಮೋತ್ಸವವು ಮುಂಜಾನೆಫೆ.1ರಂದು ಜರುಗಿತು. ದೈವಸ್ಥಾನದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಪಿ. ಕೆ. ಉಮೇಶ್ ಮತ್ತು ಸದಸ್ಯರಾದ ಭಾಸ್ಕರ ಐಡಿಯಲ್, ಸೋಮನಾಥ ಪೂಜಾರಿ, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಪ್ರಕಾಶ್ ಹೆಗ್ಡೆ, ಪಿ. ಆರ್. ಚಂದ್ರಶೇಖರ, ಪ್ರಸಾದ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು,ಕೋಶಾಧಿಕಾರಿ ಅವಿನಾಶ್ ಕುರುಂಜಿ ಹಾಗೂ ಸಮಿತಿಯ ಸದಸ್ಯರು, ದೈವದ ಪೂಜಾರಿ ಮೋಹನ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಕಲ್ಕುಡ ಕಲ್ಲುರ್ಟಿ ದೈವಗಳ ಕೋಲ Read More »

ಲೇಖಕ, ಅಂಕಣಗಾರ ಡಾ.ಸುಂದರ ಕೇನಾಜೆಯವರ ಅಂಕಣ ಬರಹ ಕೃತಿ “ಮಾತಿಲ್ಲದ ಮಾತು” ಬಿಡುಗಡೆ

ಲೇಖಕ, ಅಂಕಣಗಾರ ಡಾ.ಸುಂದರ ಕೇನಾಜೆಯವರ ಅಂಕಣ ಬರಹ ಕೃತಿ “ಮಾತಿಲ್ಲದ ಮಾತು” ಬಿಡುಗಡೆ ಸಮಾರಂಭ ಜ.31ರಂದು ಸುಳ್ಯದ ಪ್ರೆಸ್ ಕ್ಲಬ್ ವಠಾರದಲ್ಲಿ ನಡೆಯಿತು.ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ವಾಡಿಯವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಖ್ಯಾತ ವ್ಯಂಗ್ಯಚಿತ್ರಗಾರ ದಿನೇಶ್ ಕುಕ್ಕುಜಡ್ಕ ಕೃತಿಯ ಕುರಿತು ಮಾತನಾಡಿದರು.ಕೃತಿಗಾರ ಡಾ. ಸುಂದರ ಕೇನಾಜೆಯವರು ತನ್ನ ಕ್ರತಿಯ ಬಗ್ಗೆ ಮಾಹಿತಿ ನೀಡಿದರು.ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ,ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮನೆ,ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಪ್ ಶುಭಹಾರೈಸಿದರು.

ಲೇಖಕ, ಅಂಕಣಗಾರ ಡಾ.ಸುಂದರ ಕೇನಾಜೆಯವರ ಅಂಕಣ ಬರಹ ಕೃತಿ “ಮಾತಿಲ್ಲದ ಮಾತು” ಬಿಡುಗಡೆ Read More »

ನಾಳೆಯಿಂದ(ಫೆ.1) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವ ಆರಂಭ

ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.24 ರಿಂದ ಫೆ.9 ರ ತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಫೆ. 1 ರಿಂದ ಫೆ. 5 ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂ‌ರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ತಿಳಿಸಿದ್ದಾರೆ.ಫೆ.1 ರಂದು ಪೂರ್ವಾಹ್ನ 8.30 ರಿಂದ ವೇದ

ನಾಳೆಯಿಂದ(ಫೆ.1) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವ ಆರಂಭ Read More »

error: Content is protected !!
Scroll to Top