Author name: Tejas

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ,ಇನ್ನೂ ನಾಲ್ಕು ಮಂದಿಯ ಮೇಲೆ ಆರೋಪ ಪಟ್ಟಿ ದಾಖಲು!

ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇನ್ನೂ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಇವರಲ್ಲಿ ಮೂವರು ತಲೆಮರೆಸಿಕೊಂಡಿದ್ದಾರೆ.ಇದು ಈ ಪ್ರಕರಣದಲ್ಲಿ ಎನ್‌ಐಎ ಸಲ್ಲಿಸಿರುವ ದ್ವಿತೀಯ ಪೂರಕ ಆರೋಪ ಪಟ್ಟಿ ಆಗಿದ್ದು, ಇದರಲ್ಲಿ ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹಮಾನ್ ಮತ್ತು ಅತೀಕ್ ಅಹ್ಮದ್ ಎಂಬವರನ್ನು ಹೆಸರಿಸಲಾಗಿದೆ. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಈ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರೊಂದಿಗೆ ತಲೆಮರೆಸಿರುವ 6 ಮಂದಿ ಸಹಿತ […]

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ,ಇನ್ನೂ ನಾಲ್ಕು ಮಂದಿಯ ಮೇಲೆ ಆರೋಪ ಪಟ್ಟಿ ದಾಖಲು! Read More »

ಕಸಾಯಿ ಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ ಗೋವುಗಳ ರಕ್ಷಣೆ!

ಕಸಾಯಿಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ್ದ ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ಮೂಡಬಿದರೆ ತೋಡಾರು ಗ್ರಾಮದ ಬಂಗಬೆಟ್ಟು ಶಾಲೆಯ ಹಿಂಭಾಗದ ಗುಡ್ಡದಲ್ಲಿ ಮಂಗಳವಾರ ನಡೆದಿದೆ.ದುಷ್ಕರ್ಮಿಗಳು ಕಸಾಯಿ ಖಾನೆಗೆ ಒಯ್ಯಲು ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಎಲ್ಲಿಂದಲೂ ಕದ್ದು ತಂದು ಗುಡ್ಡದಲ್ಲಿ ಕಟ್ಟಿ ಹಾಕಿದ್ದರು. ಬೆಳಗ್ಗೆ ಸುಮಾರು 6 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಕೂಡಲೇ ಸ್ಥಳಕ್ಕೆ ತೆರಳಿ ಎರಡು ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿ ಅವುಗಳನ್ನು ಗೋಶಾಲೆಗೆ ಸಾಗಿಸಿದ್ದಾರೆ.ಪೊಲೀಸ್ ಇಲಾಖೆ ಗೋವುಗಳನ್ನು ಕಟ್ಟಿ ಹಾಕಿದ

ಕಸಾಯಿ ಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ ಗೋವುಗಳ ರಕ್ಷಣೆ! Read More »

ಅರಂತೋಡು,ತೊಡಿಕಾನ ಭಾಗದಲ್ಲಿ ಕೈ ಕೊಟ್ಟ ವಿದ್ಯುತ್

ಅರಂತೋಡು ತೊಡಿಕಾನ ಸಂಪಾಜೆ ಭಾಗದಲ್ಲಿ ಸೋಮವಾರ ಸುರಿದ ಗಾಳಿ ಮಳೆಗೆ ಕೆಲವು ಪ್ರದೇಶದಲ್ಲಿ ಲೈನ್ ಮೇಲೆ ಮರ ಗೆಲ್ಲು ಗಳು ಬಿದ್ದು ವಿದ್ಯುತ್ ಕಂಬಗಳು ಹಾನಿಯಾಗಿದ್ದು ನಿನ್ನೆ ಹೋದ ಕರೆಂಟು ಇಂದು ರಾತ್ರಿ ಯದರು ಬರಲಿಲ್ಲ.ಕೆಲವು ಕಡೆ ಕುಡಿಯುವ ನೀರಿಗೆ ಬರ ಬಂದಿದೆ.ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಮೊಬೈಲ್ ಸ್ವಿಚ್ ಮಾಡಿ ಇಟ್ಟಿರುತ್ತಾರೆ. ವಿದ್ಯುತ್ ಗ್ರಾಹಕ ರು ಫೋನ್ ಕರೆ ಮಾಡಿದ್ದರು ಉತ್ತರಿಸುವುದಿಲ್ಲ.ಕೂಡಲೇ ಅಧಿಕಾರಿಗಳು ಕಾರ್ಯಪ್ರವರ್ತ ರಾಗಿ ಕೆಲಸ ನಿರ್ವಹಿಸಿ ವಿದ್ಯುತ್ ಸಮಸ್ಯೆ ಯನ್ನು ಬಗ್ಗೆ

ಅರಂತೋಡು,ತೊಡಿಕಾನ ಭಾಗದಲ್ಲಿ ಕೈ ಕೊಟ್ಟ ವಿದ್ಯುತ್ Read More »

ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಸಾವು

ಕಾಸರಗೋಡು : ಮದ್ಯಪಾನ ಮಾಡಿ ಬಂದು ಅಂಗಡಿ ಮುಂದೆ ಗಲಾಟೆ ಮಾಡುತ್ತಿದ್ದಾನೆಂದು ದೂರು ನೀಡಿದ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಕಾಸರಗೋಡು ಜಿಲ್ಲೆಯ ಬೇಡಡ್ಕ ಎಂಬಲ್ಲಿ ನಡೆದು ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಎಪ್ರಿಲ್ 8ರಂದು ರಮಿತಾ (30) ಎಂಬ ಮಹಿಳೆ ಮೇಲೆ ಏಸಿಡ್‌ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೇಹದ ಭಾಗ ಸುಟ್ಟು ಹೋಗಿದ್ದರಿಂದ ಕೂಡಲೇ ಆಕೆಯನ್ನು ಕಾಞಂಗಾಡು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆನಂತರ ಮಂಗಳೂರಿನ ಆಸ್ಪತ್ರೆಗೆ

ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಸಾವು Read More »

ಅರಂತೋಡು: ಮೆಸ್ಕಾಂ ಸಲಹಾ ಸಮಿತಿಗೆ ಸದಸ್ಯರ ನಾಮನಿರ್ದೇಶನ

ಅರಂತೋಡು ಮೆಸ್ಕಾಂ ಸಲಹಾ ಸಮಿತಿಗೆ ರಾದಕೃಷ್ಣ ಪಾರೆಮಜಲು, ಕೇಪು ದೊಡ್ಡಕುಮೇರಿ, ಚೈತ್ರ ಬಾಳೆಕಜೆ ತೋಡಿಕಾನ, ತಾಜುದ್ದಿನ್ ಅರಂತೋಡು ಹಾಗೂ ಜುಬೈರ್ ಎಸ್ ಇ ನಾಮನಿರ್ದೇಶನಗೊಂಡಿದ್ದಾರೆ. ಇವರ ನೇಮಕಕ್ಕೆ ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ, ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹಾಗೂ ಇಂಧನ ಸಚಿವ ಕೆ ಜೆ ಜಾರ್ಜ್ ಮತ್ತು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಶಿಫಾರಸು ಮಾಡಿದ್ದರು.

ಅರಂತೋಡು: ಮೆಸ್ಕಾಂ ಸಲಹಾ ಸಮಿತಿಗೆ ಸದಸ್ಯರ ನಾಮನಿರ್ದೇಶನ Read More »

ಮಂಡೆಕೋಲು : ಮಹಾವಿಷ್ಣುಮೂರ್ತಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವವು ಎ.22ರಿಂದ ಆರಂಭಗೊಂಡು ಎ.26ರ ತನಕ ನಡೆಯುವುದು. ಆ ಪ್ರಯುಕ್ತ ಗೊನೆ ಮುಹೂರ್ತ ಎ.14ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಸದಸ್ಯರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಪಾತಿಕಲ್ಲು ಹಾಗೂ ಪದಾಧಿಕಾರಿಗಳು, ಪವಿತ್ರ ಪಾಣಿ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ಕೇನಾಜೆ ಮತ್ತು ಪದಾಧಿಕಾರಿಗಳು, ಕಚೇರಿಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಹಾಗೂ ಪದಾಧಿಕಾರಿಗಳು, ವಿವಿಧ ಸಮಿತಿಯವರು,

ಮಂಡೆಕೋಲು : ಮಹಾವಿಷ್ಣುಮೂರ್ತಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಅಡ್ಡ ಹೊಳೆ ಸಮೀಪ ಬಸ್ ಅಪಘಾತಗೊಂಡು ಮೂವರು ಗಂಭೀರ

ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೆಂದು ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಎ.14ರಂದು ರಾತ್ರಿ ನಡೆದಿದೆ.ಘಟನೆಯಲ್ಲಿ ಬಸ್ಸಿನಲ್ಲಿದ್ದ ದಂಪತಿ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು 10 ಮಂದಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದೆ.ಕುಂದಾಪುರ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸು ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿದೆ.ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್‌ಗೆ

ಅಡ್ಡ ಹೊಳೆ ಸಮೀಪ ಬಸ್ ಅಪಘಾತಗೊಂಡು ಮೂವರು ಗಂಭೀರ Read More »

ಪರ್ನಿಚರ್ ಮಳಿಗೆಗೆ ಬೆಂಕಿ ಬಿದ್ದು ನಷ್ಟ

ಪುತ್ತೂರು ತಾಲೂಕಿನ ದರ್ಬೆ ಬಳಿ ಕಾರ್ಯನಿರ್ವಹಿಸುತ್ತಿರುವ ಫರ್ನಿಚರ್ ಮಳಿಗೆಯೊಂದರಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ.ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುತ್ತಿದ್ದಾರೆ.ಬೆಂಕಿ ಬಿದ್ದಿರುವ ವಿಷಯ ತಿಳಿದು ಜನರು ದೌಡಾಯಿಸಿ ಆಗಮಿಸುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

ಪರ್ನಿಚರ್ ಮಳಿಗೆಗೆ ಬೆಂಕಿ ಬಿದ್ದು ನಷ್ಟ Read More »

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ‌ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಏ.13ರಂದು ಧ್ವಜಾರೋಹಣ ನಡೆಯಿತು.ಏ.20ರ ತನಕ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ.ವ್ಯವಸ್ಥಾಪನಾ ಸಮಿತಿ ಅಧ್ಯಕ್ಣ ಕೇಶವ ಕೊಳಲುಮೂಲೆ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ತಮಲೆ, ಧ್ವಜಾರೋಹಣ ದಿನದ ಅನ್ನದಾನ ಪ್ರಾಯೋಜಕರಾದ ಡಾ. ಕೆ. ವಿ. ರೇಣುಕಾಪ್ರಸಾದ್ ದಂಪತಿಗಳು, ಮರ್ಕಂಜ – ಮಿನುಂಗೂರು ದೇವಸ್ಥಾನದ ಜೀರ್ಣೋದ್ದಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯಹರೀಶ್ ಕಂಜಿಪಿಲಿ, ವ್ಯವಸ್ಥಾಪನಾ ಸಮಿತಿ

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ‌ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣ Read More »

ಬಾಲಕಿಯ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ!

ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿಕೊಲೆಗೈದಿದ್ದ ಆರೋಪಿಯನ್ನು ಪೊಲೀಸರ ಗುಂಡೇಟಿಗೆ ಬಲಿಯಾದ ಘಟನೆ ವರದಿಯಾಗಿದೆ.ಪೊಲೀಸರು ಹೆಚ್ಚಿನ ವಿಚಾರಣೆಗೆ ಅರೋಪಿಯನ್ನು ಕರೆದೊಯ್ದಾಗ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಗುಂಡು ಹೊಡೆದ ಪರಿಣಾಮ ಮೃತಪಟ್ಟ ಘಟನೆ ಹುಬ್ಬಳಿ ನಗರದ ಹೊರ ವಲಯದಲ್ಲಿ ನಡೆದಿದೆ.ಬಿಹಾರದ ಪಾಟ್ನಾದ ರಿತೇಶಕುಮಾರ (35) ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆರೋಪಿ ವಶಕ್ಕೆ ಪಡೆದು ಆತನು ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಿಳಾ

ಬಾಲಕಿಯ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ! Read More »

error: Content is protected !!
Scroll to Top