Author name: Tejas

ಸುಳ್ಯ : ಸಿ.ಎ ಬ್ಯಾಂಕ್ ಕಾಂಪ್ಲೆಕ್ಸ್ ಉದ್ಘಾಟನೆ ಮತ್ತು ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಶತಮಾನೋತ್ತರ ದಶಮಾನೋತ್ಸವ ಮತ್ತು ನೂತನ ಕಟ್ಟಡ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ಲೋಕಾರ್ಪಣೆ ಸಮಾರಂಭ ಅದ್ದೂರಿಯಾರಿ ಎ.12ರಂದು ನಡೆಯಿತು.ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಶತಮಾನೋತ್ತರ ದಶಮಾನೋತ್ಸವ ಹಾಗೂ ನೂತನ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ಉದ್ಘಾಟಿಸಿದರು.ಸಿ.ಎ.ಬ್ಯಾಂಕ್‌ ಅಧ್ಯಕ್ಷ ವಿಕ್ರಂ ಅಡ್ಡಂಗಾಯರ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ […]

ಸುಳ್ಯ : ಸಿ.ಎ ಬ್ಯಾಂಕ್ ಕಾಂಪ್ಲೆಕ್ಸ್ ಉದ್ಘಾಟನೆ ಮತ್ತು ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ Read More »

ಏ.16ಕ್ಕೆ ದೀನ್ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ ಇದರ ವತಿಯಿಂದ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಣೆ

ಸುಳ್ಯದ ರಥಬೀದಿಯ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದ 2ನೇ ಮಹಡಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀನ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ ಇದರ ವತಿಯಿಂದ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಣೆ ಮತ್ತು ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಎ.16 ರಂದು ನಡೆಯಲಿದೆ.ದಿನ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ 2024 ಡಿ.7 ರಂದು ಉದ್ಘಾಟನೆಗೊಂಡಿದ್ದು, ಇದೀಗ ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ಒನ್ ಜನ ಸಂಪರ್ಕ ಕೇಂದ್ರ ಮಂಜೂರಾತಿಗೊಂಡಿರುತ್ತದೆ. ಸಹಕಾರ ಸಂಘದ

ಏ.16ಕ್ಕೆ ದೀನ್ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ ಇದರ ವತಿಯಿಂದ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಣೆ Read More »

ತೊಡಿಕಾನ : ಮಲ್ಲಿಕಾರ್ಜುನ ದೇವರ ಜಾತ್ರೋತ್ಸವಕ್ಕೆ ಶ್ರದ್ದಾ ಭಕ್ತಿಯಿಂದ ನಡೆದ ಹಸಿರುವಾಣಿ ಮೆರವಣಿಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಇಂದಿನಿಂದ ಆರಂಭಗೊಳ್ಳಲಿದ್ದು ಹಸಿರುವಾಣಿ ಮೆರವಣಿಗೆ ನಡೆಯಿತು.ಸಿಂಗಾರಿ ಮೇಳ, ವಿವಿಧ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ ಹಸಿರುವಾಣಿ ಮೆರವಣಿಗೆಗೆ ವಿಶೇಷ ಆಕರ್ಷಣೆಯಾಗಿತ್ತು.ಹಸಿವಾಣಿ ಮೆರವಣಿಗೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು ಮಾಜಿ ಅಧ್ಯಕ್ಷರು ಸದಸ್ಯರು,ಜಾತ್ರೋತ್ಸವ ಸಮಿತಿ ಅಧ್ಯಕ್ಷರು ವಿವಿಧ ಸಮಿತಿಯ ಸಂಚಾಲಕರು,ಉಪ ಸಂಚಾಲಕರು,ಸದಸ್ಯರು ಸುಳ್ಯ ಸೀಮೆಯ ಭಕ್ತರು ಉಪಸ್ಥಿತರಿದ್ದರು.

ತೊಡಿಕಾನ : ಮಲ್ಲಿಕಾರ್ಜುನ ದೇವರ ಜಾತ್ರೋತ್ಸವಕ್ಕೆ ಶ್ರದ್ದಾ ಭಕ್ತಿಯಿಂದ ನಡೆದ ಹಸಿರುವಾಣಿ ಮೆರವಣಿಗೆ Read More »

ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪುರುಷರ ಗುಡ್ಡೆ ಬಳಿ ಕೊಕ್ರಾಡಿ ನಾರಾವಿ ಸಾರ್ವಜನಿಕ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.ಏ.12 ರಂದು ಸುಮಾರು ರಾತ್ರಿ 12:15 ಕ್ಕೆ ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ತೂರು ಗ್ರಾಮದ ಪುರುಷ ಗುಡ್ಡೆ ಎಂಬಲ್ಲಿ ಕೊಕ್ರಾಡಿ ನಾರಾವಿ ಸಾರ್ವಜನಿಕ ಡಾಮರು ರಸ್ತೆಯಲ್ಲಿ ಕೆ ಎ 19 ಇಪಿ 9677 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಪ್ರಶಾಂತ ರವರು ತಿರುವು ರಸ್ತೆಯಲ್ಲಿ

ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು Read More »

ಅರೆಭಾಷೆ ಜಾತಿ ಮತವನ್ನು ಮೀರಿ ಬೆಳೆಯುತ್ತಿದೆ : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ

ಅಜ್ಜಾವರ : ಅರೆಭಾಷೆ ಜಾತಿ ಮತವನ್ನು ಮೀರಿ ಬೆಳೆಯುತ್ತಿದೆ, ಇದನ್ನು ಇನ್ನಷ್ಟು ವಿಸ್ತಾರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಶ್ರೀ ದೇವಿ ಭಗವತಿ ಮಂದಿರದ 27ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಬಿಡುಗೊಂಡ ನೂತನ‌ ಕ್ರತಿಗಳ ಬಗ್ಗೆ ಮಾತನಾಡಿದರು.ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಭೀಮರಾವ್ ವಾಷ್ಟರ್

ಅರೆಭಾಷೆ ಜಾತಿ ಮತವನ್ನು ಮೀರಿ ಬೆಳೆಯುತ್ತಿದೆ : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ Read More »

ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು

ಉಳ್ಳಾಲ: ಕೊಲ್ಯ ಕನೀರುತೋಟ ಸಮೀಪ ಶೇಂದಿ ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ತೆಂಗಿನ ಮರದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆಕೊಲ್ಯ ಕನೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ್ (46) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಯಶೋಧರ್ ಅವರು ಶುಕ್ರವಾರ ಬೆಳಗ್ಗೆ ತನ್ನ ಮನೆ ಬಳಿಯ ತೋಟವೊಂದರ ಬಳಿ ಮೂರ್ತೆದಾರಿಕೆ ನಡೆಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ನಡೆಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.ಯಶೋಧರ್ ಅವರು

ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು Read More »

ಮುಟ್ಟಾಗಿದ್ದ ದಲಿತ ವಿದ್ಯಾರ್ಥಿನಿಯನ್ನು ಹೊರಗಡೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲ

ಕೊಯಮತ್ತೂರು: ದಲಿತ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಬರೆಯಲು ಬಂದ ಸಂದರ್ಭದಲ್ಲಿ ಮುಟ್ಟಾಗಿದ್ದು, ಈ ಕಾರಣಕ್ಕೆ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಯ ಹೊರಭಾಗದಲ್ಲಿ ಕೂರಿಸಿ ಪರೀಕ್ಷೆ ಬರೆಸಿರುವ ಅಮಾನವೀಯ ಘಟನೆ ತಮಿಳುನಾಡಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಹುಡುಗಿಯ ತಂದೆ ಪ್ರಾಶುಂಪಾಲರ ವಿರುದ್ಧ ದೂರನ್ನು ನೀಡಿದ್ದಾರೆ.ಘಟನೆಯ ವಿವರ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾತುಕಡವು ತಾಲೂಕಿನಲ್ಲಿರುವ ಶಾಲೆಯೊಂದರಲ್ಲಿ ಏಪ್ರಿಲ್ 7 ರಂದು ವಿಜ್ಞಾನ ಪರೀಕ್ಷೆ ಬರೆಯಲು 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಬಂದಿದ್ದು, ಈ ಸಂದರ್ಭದಲ್ಲಿ ಆಕೆ ಮುಟ್ಟಾಗಿದ್ದಾಳೆ. ಆಕೆ

ಮುಟ್ಟಾಗಿದ್ದ ದಲಿತ ವಿದ್ಯಾರ್ಥಿನಿಯನ್ನು ಹೊರಗಡೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲ Read More »

ರೆಂಜಿಲಾಡಿ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಜಾತ್ರೋತ್ಸವಕ್ಕೆ ಧ್ವಜಾರೋಹಣ, ನಾಳೆಯಿಂದ ಜಾತ್ರೋತ್ಸವ ಆರಂಭ

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಜಾತ್ರೆಗೆ ಧ್ವಜಾರೋಹಣ ನೆರವೇರಿಸಲಾಯಿತು.ಶುಕ್ರವಾರ ಬೆಳಗ್ಗೆ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯದಂತೆ ಜಾತ್ರೆಗೆ ದ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಅಶ್ವಥ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈಧಿಕ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕ್ಷೇತ್ರದ ಅರ್ಚಕರು, ಪರಿಚಾರಕರು, ಕ್ಷೇತ್ರದ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು,

ರೆಂಜಿಲಾಡಿ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಜಾತ್ರೋತ್ಸವಕ್ಕೆ ಧ್ವಜಾರೋಹಣ, ನಾಳೆಯಿಂದ ಜಾತ್ರೋತ್ಸವ ಆರಂಭ Read More »

ಅರಂತೋಡು : ಏ.13ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶ ಸೇವೆ ಮತ್ತು ಕುಣಿತ ಭಜನೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿಯಲ್ಲಿ 13-04-2025 ರ ಮೇಷ ಸಂಕ್ರಮಣದಂದು ಕಲಶ ಸೇವೆ ನಡೆಯಲಿದೆ.ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತಪ್ರಣೆ ರಾತ್ರಿ ಗಂಟೆ 7:30ಕ್ಕೆ ನಡೆಯಲಿದೆ.ಈ ದಿನ ಅಗೇಲು ಸೇವೆ ಇರುವುದಿಲ್ಲ.ಶ್ರೀ ಮಿತ್ತೂರು ಉಳ್ಳಾಕುಲು ಮಕ್ಕಳ ಕುಣಿತ ಭಜನಾ ತಂಡ, ಅಮೈಮಡಿಯಾರು ಉಬರಡ್ಕ ಮಿತ್ತೂರು ಮತ್ತುಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಡಿಯಾರು ಉಬರಡ್ಕ ಮಿತ್ತೂರು ಇವರಿಂದ ಕುಣಿತ ಭಜನೆ ಸಂಜೆ ಗಂಟೆ 6:15 ರಿಂದ 7:30 ರ ವರೆಗೆ ನಡೆಯಲಿದೆ. ಭಕ್ತಭಿಮಾನಿಗಳು

ಅರಂತೋಡು : ಏ.13ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶ ಸೇವೆ ಮತ್ತು ಕುಣಿತ ಭಜನೆ Read More »

ಸಿಡಿಲು ಬಡಿದು ಮೂವರು ಸಾವು

ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಮೂವರು ಸಿಡಿಲು ಬಡಿದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಕೊಪ್ಪಳದ ಸಿಂದೋಗಿಯಲ್ಲಿ ಕೆಲಸ ಮಾಡಲು ಹೊಲಕ್ಕೆ ತೆರಳಿದ್ದ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಗುರುವಾರ ವರದಿಯಾಗಿದೆ. ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ್ ರಾಮಲಿಂಗಪ್ಪ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ(62) ಮೃತಪಟ್ಟವರಾಗಿದ್ದಾರೆ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡದಲ್ಲಿ ಯುವನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಬಂಡೆಬಸಾಪುರ ಗ್ರಾಮದ ಪಾಂಡುನಾಯ್ಕ್(18) ಮೃತಪಟ್ಟ ಯುವಕನಾಗಿದ್ದಾನೆ.ಮಳೆ ಬರುತ್ತಿದ್ದ ವೇಳೆ ಮನೆಯ ಬಳಿ

ಸಿಡಿಲು ಬಡಿದು ಮೂವರು ಸಾವು Read More »

error: Content is protected !!
Scroll to Top