Author name: Tejas

ಕಾಟಿಕೇರಿ : ಭೀಕರ ರಸ್ತೆ ಅಪಘಾತ-ಬೈಕ್‌ ಸವಾರ ಸ್ಥಳದಲ್ಲೇ ಸಾವು

ಮಡಿಕೇರಿ ಸಮೀಪದ ಕಾಟಿಕೇರಿ ಸಮೀಪ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಲಾರಿ ಬೈಕ್ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.ಬೈಕ್ ಸವಾರ ಕಕ್ಕಬೆ ನಿವಾಸಿ ಶರತ್‌ (28)ಮೃತರ್ದುದೈವಿ.ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬೈಕ್ ಸಮೇತ ಯುವಕ ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಮಡಿಕೇರಿ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಎನ್ ಡಿ ಆರ್ ಎಫ್ ಕೊಡಗು ಸಂಪಾಜೆ […]

ಕಾಟಿಕೇರಿ : ಭೀಕರ ರಸ್ತೆ ಅಪಘಾತ-ಬೈಕ್‌ ಸವಾರ ಸ್ಥಳದಲ್ಲೇ ಸಾವು Read More »

ಲೈನ್ ಮ್ಯಾನ್ ಆಕಸ್ಮಿಕ ಸಾವು

ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಲೈನ್ ಮ್ಯಾನ್ ಆಗಿ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ನಾರವಿ ತುಂಬೆ ಗುಡ್ಡೆ ನಿವಾಸಿ ಕಿಟ್ಟ ಯಾನೆ ಸುಧಾಕರ (45) ಅವರು ಮಾ.26 ರಂದು ಸಂಜೆ ಆಕಸ್ಮಿಕವಾಗಿ ಅಂಡಿಂಜೆಯಲ್ಲಿ ಸಾವನ್ನಪ್ಪಿದ್ದಾರೆ.ಮಾ.26 (ಇಂದು) ಸಂಜೆಯ ಸಮಯಕ್ಕೆ ಇವರ ಮೃತದೇಹ ಅಂಡಿಂಜೆ ಟಿಸಿ ಹತ್ತಿರ ಅಂಡಿಂಜೆಯಲ್ಲಿ ಪತ್ತೆಯಾಗಿದ್ದು. ಕೈ ಯಲಿ ಒಂದು ಗಾಯದ ಗುರುತು ಪತ್ತೆಯಾಗಿದೆ. ಇವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.ಮೃತರು ಲೈನ್ ಮ್ಯಾನ್ 1998 ರಲ್ಲಿ ವೃತ್ತಿಯನ್ನು ಆರಂಭಿಸಿದ್ದು.

ಲೈನ್ ಮ್ಯಾನ್ ಆಕಸ್ಮಿಕ ಸಾವು Read More »

ಉಬರಡ್ಕ : ಮರವೇರಿ ಮಾವಿನ ಮಿಡಿ ಕೊಯ್ಯುವಾಗ ಗೆಲ್ಲು ತುಂಡಾಗಿ ವ್ಯಕ್ತಿ ಬಿದ್ದು ಸಾವು

ಸುಳ್ಯ: ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಬರಡ್ಕದಲ್ಲಿ ನಡೆದಿದೆ.ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿ ಮೃತ ದುರ್ದೈವಿ. ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿಯವರ ಮಾ.೨೨ರಂದು ಕೆಲಸಕ್ಕೆ ಹೋಗಿದ್ದಲ್ಲಿ ಮಾವಿನ ಮರ ಹತ್ತಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಬಿದ್ದು ಇವರು ಕೂಡಾ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ

ಉಬರಡ್ಕ : ಮರವೇರಿ ಮಾವಿನ ಮಿಡಿ ಕೊಯ್ಯುವಾಗ ಗೆಲ್ಲು ತುಂಡಾಗಿ ವ್ಯಕ್ತಿ ಬಿದ್ದು ಸಾವು Read More »

ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ ಕೆ.ಎಸ್.ಆರ್‌.ಟಿ ಬಸ್ಸು ನಿಲ್ದಾಣದ ಹಿಂಭಾಗದಲ್ಲಿ ಕೆಳಗಡೆ ಪೇರಿಸಿದ ಇಟ್ಟಿದ್ದ ವಿದ್ಯುತ್ ಕಂಬದಲ್ಲಿ ವೃದ್ಧನೋರ್ವನ ಮಲಗಿದ ಸ್ಥಿತಿಯಲ್ಲೇ ಶವ ಪತ್ತೆಯಾದ ಘಟನೆ ಬುಧವಾರ ವರದಿಯಾಗಿದೆ. ಈ ಶವ ಕನಕಮಜಲಿನ‌ ವ್ಯಕ್ತಿಯ ಶವ ಎಂದು ಹೇಳಲಾಗುತ್ತಿದೆ.

ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ Read More »

ಭಾರೀ ಗಾಳಿಮಳೆಗೆ ಕಾರಿನ ಮೇಲೆ ಉರುಳಿ ಬಿದ್ದು ಜಖಂಗೊಂಡ ಕಾರು

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಸುರಿದ ಭಾರೀ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು, ಕಾರು ಜಖಂಗೊಂಡ ಘಟನೆ ಮಾ.26 ರಂದು ಸಂಜೆ ನಡೆದಿದೆ.ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೇಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ ಅವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಸಂಜೆ ವೇಳೆ ಸುರಿದ ಭಾರೀ ಮಳೆ – ಗಾಳಿಗೆ ಮರವೊಂದು ದಿಢೀರ್ ಕಾರಿನ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡಿದೆ.

ಭಾರೀ ಗಾಳಿಮಳೆಗೆ ಕಾರಿನ ಮೇಲೆ ಉರುಳಿ ಬಿದ್ದು ಜಖಂಗೊಂಡ ಕಾರು Read More »

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ

ಅರಂತೋಡು : ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಸುಜಯ ಲೋಹಿತ್ ಅವರ ತೊಟಕ್ಕೆ ಕಾಡಾನೆ ದಾಳಿ ಅಪಾರ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.ತೆಂಗಿನ ಮರ ಬಾಳೆ ಇತರ ಕ್ರಷಿ ಬೆಳೆಗಳನ್ನು ನಾಶ ಮಾಡಿದೆ.ಅನೇಕ ತಿಂಗಳಿನಿಂದ ಅಡ್ತಲೆ ಪರಿಸರ ದಲ್ಲಿ ಕಾಡಾನೆಗಳು ಬೀಡು ಬಿಟ್ಟು ಆಗಾಗ್ಗೆ ಕೃಷಿ ನಾಶ ಮಾಡುತ್ತಿದೆ. ಕಾಡು ಕೋಣ ಹಾವಳಿಯು ಹೆಚ್ಚಾಗಿದ್ದು ಅನೇಕ ರೈತರ ಕ್ರಷಿ ಮಾಶ ಮಾಡಿವೆ.ಆನೆ ಹಾಗೂ ಕಾಡು ಕೋಣಗಳ ಹಾವಳಿ ವಿಪರೀತ ಆಗುತ್ತಿದ್ದು, ಜನಪ್ರತಿನಿದಿನಗಳು ದಯವಿಟ್ಟು

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ Read More »

ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ

ಸುಳ್ಯ ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿ ಮಳೆ ಸುರಿದಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗುತ್ತಿದೆ.ಅರಂತೋಡಿನಲ್ಲಿ ಸಂಜೆ ಬಿಸಿದ ಗಾಳಿ ಮಳೆ ಗೆ ಅರಂತೋಡು ಶಾಲಾ ಬಳಿ ತೆಂಗಿನ ಮರ ಮುರಿದು ಬಿದ್ದು ಅರಂತೋಡು ಅಂಗಡಿ ಮಜಲು ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ಬಂದ್ ಆಗಿತ್ತು .ಇದನ್ನು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಕೃಷ್ಣ ದಾಸರ ಹಿತ್ಲು,ಹಮೀದ್ ಕುಕ್ಕಂಬಳ,ಮುನೀರ್ ಸಂಟ್ಯಾರ್,ತಾಜುದ್ದೀನ್ ಅರಂತೋಡು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಇನ್ನು ಕೆಲವು ಕಡೆ

ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ Read More »

ಅಜ್ಜಾವರ : ರಿಕ್ಷಾ ಸ್ಕೂಟಿ ಅಪಘಾತ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಇರಂತಮಜಲು ಎಂಬಲ್ಲಿ ಸ್ಕೂಟಿಗೆ ರಿಕ್ಷಾ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರೂ ಗಾಯಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.ಅಜ್ಜಾವರದ ತುದಿಯಡ್ಕದಲ್ಲಿ ಕಾರ್ಯಕ್ರಮ ಮುಗಿಸಿ, ಕಾಸರಗೋಡಿನ ಮಲ್ಲಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಜನಾರ್ದನಾ ಇಂದಿರಾ ದಂಪತಿಗಳ ಸ್ಕೂಟಿಗೆ, ಸುಳ್ಯದ ಕಡೆ ಬರುತ್ತಿದ್ದ ಪೇರಾಲಿನ ಹರಿಪ್ರಸಾದ್ ಎಂಬವರ ರಿಕ್ಷಾ ಢಿಕ್ಕಿಯಾಯಿತು.ಈ ಅಪಘಾತದಿಂದ ರಿಕ್ಷಾ ಪಲ್ಟಿಯಾದರೆ, ಸ್ಕೂಟಿಯಲ್ಲಿದ್ದ ದಂಪತಿಗಳು ರಸ್ತೆಯ ಬದಿಗೆ ಎಸೆಯಲ್ಪಟ್ಟು ಗಾಯಗೊಂಡರು.ರಿಕ್ಷಾ ಸ್ಕೂಟಿ ಜಖಂಗೊಂಡಿದೆ.

ಅಜ್ಜಾವರ : ರಿಕ್ಷಾ ಸ್ಕೂಟಿ ಅಪಘಾತ Read More »

ಕಬಡ್ಡಿ ಆಟಗಾರ ಹೃದಯಾಘಾತಕ್ಕೆ ಬಲಿ

ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.ಪೆರ್ನೆ ನಿವಾಸಿ ವೆಲ್ಡಿಂಗ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಉತ್ತಮ ಕಬಡ್ಡಿ ಆಟಗಾರ ನವೀನ್ ಕುಮಾರ್ (27) ಮೃತ ಯುವಕ.

ಕಬಡ್ಡಿ ಆಟಗಾರ ಹೃದಯಾಘಾತಕ್ಕೆ ಬಲಿ Read More »

ಬಳ್ಪದ ವ್ಯಕ್ತಿ ನಿಗೂಢವಾಗಿ ನಾಪತ್ತೆ

ಕಡಬ ತಾಲೂಕು ಬಳ್ಪ ಗ್ರಾಮದ ಜೋಗಿಮನೆ ಚೆನ್ನಕೇಶವ ಜೋಗಿ ಮಾ.11 ರಂದು ಮನೆಯಿಂದ ತೆರಳಿದವರು ಇದುವರೆಗೆ ಪುನಃ ಹಿಂತಿರುಗಿ ಬಾರದೇ ಇದ್ದುದರಿಂದ ಮನೆಯವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರಿಗೆ 61 ವಯಸ್ಸಾಗಿತ್ತು. ದಿನಾಂಕ 11-03-2025 ಮಂಗಳವಾರದಂದು ಮನೆಯಿಂದ ಕೊಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೋದವರು ಇಲ್ಲಿತನಕ ಮನೆಗೆ ಮರಳಿರುವುದಿಲ್ಲ. ಇವರ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಥವಾ ಈ ಮೊಬೈಲ್ ಸಂಖ್ಯೆಗೆ ದಯವಿಟ್ಟು

ಬಳ್ಪದ ವ್ಯಕ್ತಿ ನಿಗೂಢವಾಗಿ ನಾಪತ್ತೆ Read More »

error: Content is protected !!
Scroll to Top