Author name: Tejas

ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ

ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ(ರಿ) ಅರಂತೋಡು ಇದರ ವತಿಯಿಂದ 20 ನೇ ವರ್ಷದ ಸರ್ವ ಧರ್ಮ ಸೌಹಾರ್ದ ಇಫ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ದುವಾಶೀರ್ವಾಚನವನ್ನು ಅರಂತೋಡು ಬದ್ರಿಯ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಮಾಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಸುಳ್ಯ ಬೀರಮಂಗಲ ಸೈಂಟ್ ಬ್ರಿಜೇಶ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ವಿಕ್ಟರ್ ಡಿ’ಸೋಜ ಹಾಗೂ ಶ್ರೀ ಅನ್ನಪೂರ್ಣೇಶ್ವರಿ […]

ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ Read More »

ಗಾಂಧಿನಗರ : ಕೆಪಿಎಸ್ ನಲ್ಲಿ ಅಕ್ಷರ ಕೈತೋಟ ಉದ್ಘಾಟನೆ

ಕೆ ಪಿ. ಎಸ್. ಗಾಂಧಿನಗರ ಸುಳ್ಯ ಇಲ್ಲಿ ಲಯನ್ಸ್ ಕ್ಲಬ್ ಇದರ ಸಹಕಾರ ದಲ್ಲಿ ನಿರ್ಮಿಸಲಾದ ಶಾಲಾ ಅಕ್ಷರ ಕೈತೋಟ ವನ್ನು ಜಿಲ್ಲಾ ಲಯನ್ಸ್ ಗವರ್ನರ್ ಭಾರತಿ ಉದ್ಘಾಟಿಸಿದರು. ಲಯನ್ಸ್ ಸುಳ್ಯ ಇದರ ಅಧ್ಯಕ್ಷ ರಾದ ರಾಮಕೃಷ್ಣ ರೈ ಎಲ್ಲರನ್ನು ಸ್ವಾಗತಿಸಿದರು, ಶಿಕ್ಷಕರಾದ ಚಿನ್ನಪ್ಪಗೌಡ ಪತ್ತುಕುಂಜ, ಕೈತೋಟ ನಿರ್ಮಾಣ ಮಾಡಿದ್ದು, ಮಕ್ಕಳಿಗೆ ಸಾವಯವ ತರಕಾರಿ ಬೆಳೆದಿದ್ದು, ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಮುಖ್ಯ ಶಿಕ್ಷಕರಾದ ಜ್ಯೋತಿ ಲಕ್ಷ್ಮೀ, ಎಲ್ಲರನ್ನು ವಂದಿಸಿದರು.

ಗಾಂಧಿನಗರ : ಕೆಪಿಎಸ್ ನಲ್ಲಿ ಅಕ್ಷರ ಕೈತೋಟ ಉದ್ಘಾಟನೆ Read More »

ಅಡ್ತಲೆ: ಉಳ್ಳಾಕುಳು ಮತ್ತು ಮಲೆ ಭೂತಗಳ ಧರ್ಮ ನಡಾವಳಿ

ಸುಳ್ಯ ತಾಲೂಕಿನ ಅಡ್ತಲೆ ಬೆದ್ರುಪಣೆ ಉಲ್ಲಾಕುಳು ಹಾಗೂ ಮಲೆ ಭೂತಗಳ ದೈವಸ್ಥಾನದಲ್ಲಿ ಮಾ.21ರಂದು ಭಂಡಾರ ತೆಗೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಮಾ‌. 22 ರಂದು ಉಲ್ಲಾಕುಳು , ಹಾಗೂ ಪುರುಷ ದೈವ, ರಾಜನ್ ದೈವ ಹಾಗೂ ಮಲೆ ಭೂತಗಳ ಧರ್ಮ ನಡಾವಳಿ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯವರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು‌

ಅಡ್ತಲೆ: ಉಳ್ಳಾಕುಳು ಮತ್ತು ಮಲೆ ಭೂತಗಳ ಧರ್ಮ ನಡಾವಳಿ Read More »

ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುಳ್ಯದ ವೆಬ್ ನ್ಯೂಸ್ ಸಂಪಾದಕ,ವರದಿಗಾರನ ಮೇಲೆ ಪ್ರಕರಣ ದಾಖಲು

ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಸುಳ್ಯದ ವೆಬ್ ನ್ಯೂಸ್‌ ವೊಂದರ ವರದಿಗಾರ ಹಾಗೂ ಸಂಪಾದಕರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಾ.20ರಂದು ರಾತ್ರಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ಧನುಷ್ ಪಿ.ಎಸ್. ಎಂಬಾತನು ಕಲ್ಲುಗುಂಡಿ ಕಡೆಗೆ ಮಾರುತಿ ಆಮ್ಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದವರೊಂದಿಗೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಸುಳ್ಯದ ವೆಬ್‌ಸೈಟೊಂದು, ‘ಹಿಂದೂ ಹುಡುಗಿಯರ ಜತೆ ಅನ್ಯ ಕೋಮಿನ ಯುವಕರು; ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ ಯುವಕ’

ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುಳ್ಯದ ವೆಬ್ ನ್ಯೂಸ್ ಸಂಪಾದಕ,ವರದಿಗಾರನ ಮೇಲೆ ಪ್ರಕರಣ ದಾಖಲು Read More »

ಕಾಡಿನಲ್ಲಿ ಅನಾಥ ಮಗು ಪತ್ತೆ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೋಳುಕೆರೆ ಎಂಬಲ್ಲಿ ದಟ್ಟ ಕಾಡಿನ ಮಧ್ಯೆ ನಾಲ್ಕು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾದ ಘಟನೆ ವರದಿಯಾಗಿದೆ.ಪ್ರಕರಣ ಶನಿವಾರ ಬೆಳಗ್ಗೆ ತಿಳಿದು ಬಂದಿದೆ.ಮಗುವಿನ ಅಳುವ ಶಬ್ದ ಕೇಳಿ ಸ್ಥಳೀಯರು ಆತಂಕಗೊಂಡು ಕಾಡಿಗೆ ಹೋದಾಗ ಅಲ್ಲಿ ಒಂಟಿಯಾಗಿ ಅಳುತ್ತಿದ್ದ ಆ ಮಗುವನ್ನು ಕಂಡು ಆಶ್ಚರ್ಯಚಕಿತರಾದರು. ಮುಂಡೊಟ್ಟು ರಸ್ತೆಯ ಬಳಿಯ ಕೊಡೋಳುಕೆರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಮತ್ತು ಆ ದಾರಿಯಲ್ಲಿ ಹಾದುಹೋಗುತ್ತಿದ್ದ ಒಬ್ಬ ಮಹಿಳೆಗೆ ಮಗುವಿನ ಧ್ವನಿ ಕೇಳಿಸಿತು.

ಕಾಡಿನಲ್ಲಿ ಅನಾಥ ಮಗು ಪತ್ತೆ Read More »

ಪಾಳು ಬಿದ್ದ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ

ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಪಟ್ಟಣ ಪಂಚಾಯತ್ ಹಿಂಭಾಗದಲ್ಲಿರುವ ಜಮೀನಿನ ಪಾಳು ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಕೆರೆಯೊಳಗಿಂದ ದುರ್ನಾತ ಬಂದ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ವಿಟ್ಲ ಠಾಣಾ ಇನ್ಸ್‌ಪೆಕ್ಟರ್ ಹೆಚ್.ಇ.ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ

ಪಾಳು ಬಿದ್ದ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಸಂಪಾಜೆ : ಕಾಡಾನೆ ಸಾವು

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ದೇವಾಲಯದ ಬಳಿ ಆನೆಯ ಮೃತ ದೇಹ ಪತ್ತೆಯಾದ ಘಟನೆ ವರದಿಯಾಗಿದೆ. ದೇವಾಲಯದಿಂದ ಸುಮಾರು ೧ ಕಿ.ಮೀ. ಅಂತರದ ದೂರದಲ್ಲಿ ಆನೆ ಸತ್ತಿದೆ ಎಂದು ಮಾಹಿತಿ ದೊರೆತ್ತಿದೆ.

ಸಂಪಾಜೆ : ಕಾಡಾನೆ ಸಾವು Read More »

ಹುಚ್ಚು ನಾಯಿ ಕಡಿದು ಮಹಿಳೆ ಸಾವು

ಗೂನಡ್ಕ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ರಾಜರಾಮಪುರ ಎಂಬಲ್ಲಿ ಮಹಿಳೆಯೊಬ್ಬರು ಹುಚ್ಚು ನಾಯಿ ಕಡಿತಕೊಳಗಾಗಿ ನಿಧನ ಹೊಂದಿದ ಘಟನೆ ವರದಿಯಾಗಿದೆ.ಹುಚ್ಚು ನಾಯಿ ಕಡಿತಕೊಳಗಾಗಿ ಮ್ರತಪಟ್ಟ ಮಹಿಳೆಯನ್ನು ಬೇಬಿ(42)ಎಂದು ಗುರುತಿಸಲಾಗಿದೆ.ಅವರು ಒಂದು ತಿಂಗಳ ಹಿಂದೆ ಅರಂತೋಡು ಭಾಗಕ್ಕೆ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ನಾಯಿಯ ಮರಿಯೊಂದು ಕಚ್ಚಿತ್ತು.ಆದರೆ ಈ ವಿಷಯವನ್ನು ಅವರು ಮನೆಯವರಿಗೆ ಹೇಳಿರಲಿಲ್ಲ.ಅಲ್ಲದೆ ಚುಚ್ಚುಮದ್ದು ತೆಗೆದುಕೊಂಡಿರಲಿಲ್ಲ.ಕಳೆದ ಸೋಮವಾರ ರೋಗ ಉಲ್ಬನಗೊಂಡು ನೀರು ನೋಡುತ್ತಿದ್ದಾಗವ ಹೆದರುತ್ತಿದ್ದ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಬಳಿಕ ಅಲ್ಲಿಂದ

ಹುಚ್ಚು ನಾಯಿ ಕಡಿದು ಮಹಿಳೆ ಸಾವು Read More »

ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಶಾಲೆಯ ಸಮೀಪದಿಂದ ಮಾ.21ರಂದು ವರದಿಯಾಗಿದೆ.ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸಕಲೇಶಪುರ ಮೂಲದ ಮದನ್ ಎಂದು ಗುರುತಿಸಲಾಗಿದೆ. ಓಂತ್ರಡ್ಕ ಶಾಲೆಯ ಸಮೀಪ ತನ್ನ ಕಾರು ನಿಲ್ಲಿಸಿ ವಿಷ ಸೇವಿಸಿ ಬಳಿಕ ತನ್ನ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ಎನ್ನಲಾಗಿದೆ. ಈ ಬೆನ್ನಲ್ಲೇ ವಾಂತಿ ಮಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ

ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ Read More »

ಅಡ್ತಲೆ :ಲಾರಿಯಲ್ಲಿ ಅಧಿಕ ತೂಕದ ರಬ್ಬರ್ ಮರ ಸಾಗಾಟ,ಲಾರಿಯನ್ನು ತಡೆದು ನಿಲ್ಲಿಸಿದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ

ಅಡ್ತಲೆ ಅರಂತೋಡು ರಸ್ತೆಯಲ್ಲಿ ಲಾರಿಯೊಂದು ರಸ್ತೆ ಸಾಮರ್ಥ್ಯಕ್ಕಿಂತ ಅಧಿಕ ಭಾರದರಬ್ಬರ್ ಮರ ಸಾಗಾಟ ಮಾಡುತ್ತಿದೆ.ಇದರಿಂದ ರಸ್ತೆಗೆ ಅಪಾಯ ಎದುರಾಗಲಿದೆ ಎಂದು ಲಾರಿ ಚಾಲಕನಿಗೆ ತಿಳಿಸಿ ರಬ್ಬರ್ ಮರ ಸಾಗಾಟದ ಲಾರಿಯನ್ನು ಅಡ್ತಲೆ ನಾಗರೀಕ ಹಿತರಕ್ಷಣಾ ಸಮಿತಿಯವರು ಅಡ್ತಲೆ ಶಾಲಾ ಬಳಿ ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಶುಕ್ರವಾರ ವರದಿಯಾಗಿದೆ.ಮರ್ಕಂಜದಿಂದ ಬಂಟ್ವಾಳಕ್ಕೆ ರಬ್ಬರ್ ಮರ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ನಾಗರೀಕ ಹಿತರಕ್ಷಣಾ ಸಮಿತಿಯವರು ಬುಧವಾರ ಮರ್ಕಂಜ ಕಲ್ಲು ಕೊರೆಯಯಿಂದ ಲಾರಿಯಲ್ಲಿ ಅಧಿಕ ಭಾರದ ಜಲ್ಲಿ

ಅಡ್ತಲೆ :ಲಾರಿಯಲ್ಲಿ ಅಧಿಕ ತೂಕದ ರಬ್ಬರ್ ಮರ ಸಾಗಾಟ,ಲಾರಿಯನ್ನು ತಡೆದು ನಿಲ್ಲಿಸಿದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ Read More »

error: Content is protected !!
Scroll to Top