Author name: Tejas

ಆರಂಬೂರು ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ ಕಲೋತ್ಸವ ಕಾರ್ಯಕ್ರಮ

ಸುಳ್ಯ ಕ್ಲಸ್ಟರ್ ಮಟ್ಟದ ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯದ ಪ್ರೋತ್ಸಾಹ ವಾಗಿ ಅರಂಬೂರು ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನ.17 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಹಾಜಿ ರಜಾಕ್ ಕರಾವಳಿ ವಹಿಸಿದರು.ಕಾರ್ಯಕ್ರಮದಲ್ಲಿಬದ್ರ್ ಜುಮ್ಮಾ ಮಸೀದಿ ಅಧ್ಯಕ್ಷ ಬಾಷಾ ಸಾಹೇಬ್ , ಬದ್ರ್ ಜುಮಾ ಮಸೀದಿ ಖತೀಬ್ ಮೊಹಿ ನುದ್ದೀನ್ ಫೈಝಿ,ಎಸ್ ಕೆ ಎಸ್ ಎಸ್ ಎಫ್ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ ,ಎಸ್ ಕೆ ಎಸ್ […]

ಆರಂಬೂರು ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ ಕಲೋತ್ಸವ ಕಾರ್ಯಕ್ರಮ Read More »

ಮರದಲ್ಲಿ ಮೃತದೇಹ ಪತ್ತೆ

ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕೊಡಂಗೆ ಎಂಬಲ್ಲಿ ಹರಿಯುವ ನದಿಯಲ್ಲಿ ಅಡ್ಡವಾಗಿ ಬಿದ್ದಿರುವ ಮರದ ಕೊಂಬೆಯಲ್ಲಿ ಅಪರಿಚಿತ ಗಂಡಸಿನ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವೊಂದು ಪತ್ತೆಯಾಗಿದೆ. ಮೃತ ದೇಹವನ್ನು ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಶೀತಲಿಕರಣ ಶವಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಗುರುತು/ವಾರಿಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿಂದು ತಿಳಿಸಲಾಗಿದೆ.

ಮರದಲ್ಲಿ ಮೃತದೇಹ ಪತ್ತೆ Read More »

ಅರಂತೋಡು ಭಾಸ್ಕರ ಗೌಡ ಉಳುವಾರು ನಿಧನ

ಅರಂತೋಡು ಗ್ರಾಮದ ಉಳುವಾರು ಯು. ಪಿ.ಭಾಸ್ಕರ ಗೌಡ ( 83 ವ)ರವರು ಅಲ್ಪಕಾಲ ಅಸೌಖ್ಯ ದಿಂದ ನ.17 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನ ರಾದರು.ಮೃತರು ಪತ್ನಿ ಜಲಜಾಕ್ಷಿ, ಗಂಡು ಮಕ್ಕಳಾದ ಶಿವ ಶಂಕರ ,ಚಿದಂಬರ ಹೆಣ್ಣು ಮಗಳಾದ ಚಿತ್ರ ಹಾಗೂ ಅಪಾರ ಕುಟುಂಬ ಸ್ಥರನ್ನು ಅಗಲಿದ್ದಾರೆ.

ಅರಂತೋಡು ಭಾಸ್ಕರ ಗೌಡ ಉಳುವಾರು ನಿಧನ Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಟನೆ ನಡೆಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವರ ಮೇಲೆ ಪ್ರಕರಣ ದಾಖಲು

ಕಸ್ತೂರಿರಂಗನ್ ವರದಿ ವಿರೋಧಿಸಿ ಶುಕ್ರವಾರ ಮಧ್ಯಾಹ್ನ ಗುಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿ ಗುಂಡ್ಯದಲ್ಲಿ ಅನುಮತಿ ಪಡೆಯದೆ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋ‌ರ್ ಶಿರಾಡಿ ಸಹಿತ 15 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ಠಾಣಾ ಎಸ್.ಐ.ಅವಿನಾಶ್ ಅವರ ದೂರಿನಂತೆ ಈ ಕೇಸು ದಾಖಲಾಗಿದೆ.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಟನೆ ನಡೆಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವರ ಮೇಲೆ ಪ್ರಕರಣ ದಾಖಲು Read More »

ಪೂಜಾ ಬೋರ್ಕರ್ ಬೆಳಗಾವಿ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ

ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಕಲೆ,ಸಾಹಿತ್ಯ ಭಾಷೆ, ನೆಲ- ಜಲ ,ಸಂಸ್ಕೃತಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಗೈದ ಗಣ್ಯರಿಗೆ ಬೆಳಗಾವಿ ಸುವರ್ಣ ಮಹೋತ್ಸವ ಪುರಸ್ಕಾರವನ್ನೂ ನೀಡಿ ಗೌರವಿಸಲಾಗುತ್ತಿದೆ. ಪೆನ್ಸಿಲ್ ಆರ್ಟ್, ವಾಲ್ ಆರ್ಟ್ ಆರ್ಕಿಲಿಕ್ ಆರ್ಟ್ ಮುಖವಾಡ ತಯಾರಿ ಕ್ಯಾನ್ವಾಸ್ ಆರ್ಟ್ ಹಾಗೂ ಇತರ ಚಿತ್ರಕಲೆ ಮೂಲಕ ಪ್ರಸಿದ್ಧಿ ಪಡೆದ ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಪೂಜಾ ಬೋರ್ಕರ್ ಅವರನ್ನು ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರಶಸ್ತಿ ಪುರಸ್ಕಾರವನ್ನು ನವಂಬರ್

ಪೂಜಾ ಬೋರ್ಕರ್ ಬೆಳಗಾವಿ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ Read More »

ನ.23ಕ್ಕೆ ಅರಂತೋಡಿನಲ್ಲಿ 27 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 23.11.2024ರ ಶನಿವಾರದಂದು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ.ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ ಶಿಕ್ಷಕರಾದ

ನ.23ಕ್ಕೆ ಅರಂತೋಡಿನಲ್ಲಿ 27 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ Read More »

ಸಂಪಾಜೆ : ವಿವಿಧ ಸವಲತ್ತುಗಳ ವಿತರಣೆ,ತರಬೇತಿ ಕಾರ್ಯಕ್ರಮ

ಸಂಪಾಜೆ : ಕೃಷಿ ಇಲಾಖೆ ಮಂಗಳೂರು.ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸುಳ್ಯ ಗ್ರಾಮ ಪಂಚಾಯತ್ ಸಂಪಾಜೆ ಕೃಷಿ, ತೋಟಗಾರಿಕೆ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ವಿವಿಧ ಸವಲತ್ತು ವಿತರಣೆ ಹಾಗೂ ತರಬೇತಿ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಂಪಾಜೆ ಇದರ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿ ವೇಲು ಅಧ್ಯಕ್ಷತೆಯಲ್ಲಿ ನಡೆಯಿತುಅತಿಥಿ ಗಳಾದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾಕ್ಟರ್ ಟಿ ಜೆ ರಮೇಶ್ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಮಾತನಾಡಿ ಕೃಷಿ

ಸಂಪಾಜೆ : ವಿವಿಧ ಸವಲತ್ತುಗಳ ವಿತರಣೆ,ತರಬೇತಿ ಕಾರ್ಯಕ್ರಮ Read More »

ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಮುಂದೆ ಚಿಲ್ಲರೆ ಸಮಸ್ಯೆ ಬರಲ್ಲ !

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಬಸ್‌ಗಳಲ್ಲಿ ನಗದು ರಹಿತ ಪಾವತಿ ಆಯ್ಕೆಗಳನ್ನು ಆರಂಭಿಸಿದ್ದು, ಪ್ರಯಾಣಿಕರಿಗೆ ಇಡೀ ಕೆಎಸ್‌ಆರ್‌ಟಿಸಿ ನೆಟ್‌ವರ್ಕ್‌ನಲ್ಲಿ ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದೆ.ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಸ್‌ ಇರಲಿ, ಕೆಎಸ್‌ಆರ್‌ಟಿಸಿ ಬಸ್ ಇರಲಿ ಮೊದಲ ಸಮಸ್ಯೆ ಎಂದರೆ ಚಿಲ್ಲರೆ ಸಮಸ್ಯೆ ಕಾಡುತ್ತದೆ. ಇದೇ ವಿಷಯಕ್ಕೆ ಕಂಡಕ್ಟ‌ರ್ ಮತ್ತು ಪ್ರಯಾಣಿಕರ ನಡುವೆ ಲೆಕ್ಕವಿಲ್ಲದಷ್ಟು ಜಗಳ ನಡೆದು ಹೋಗಿದೆ. ಒಮ್ಮೊಮ್ಮೆ ಬಸ್ ನಿಲ್ಲಿಸಿ ಜಗಳ ಅತಿರೇಕಕ್ಕೆ ಹೋಗಿದ್ದೂ ಉಂಟು. ಈ ಎಲ್ಲ

ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಮುಂದೆ ಚಿಲ್ಲರೆ ಸಮಸ್ಯೆ ಬರಲ್ಲ ! Read More »

ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಶ್ರಮದಾನಕ್ಕೆ ಮುಹೂರ್ತ

ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ಧೈವಸ್ಥಾನದಲ್ಲಿ ಮುಂದಿನ ವರ್ಷ 2025 ರ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ವಯನಾಟ್ ದೈವದ ದೈವಂಕಟ್ಟು ಮಹೋತ್ಸವದ ಪೂರ್ವ ಭಾವಿಯಾಗಿ ದೈವಸ್ಥಾನದ ವಠಾರದಲ್ಲಿ ಶ್ರಮದಾನ ನಡೆಯಲಿದ್ದು ನ. 14 ರಂದು ಬೆಳಗ್ಗೆ ಶ್ರಮದಾನದ ಕೆಲಸ ಕಾರ್ಯಗಳಿಗೆ ಮುಹೂರ್ತ ಪೂಜೆಯು ನೆರವೇರಿತು.ಈ ಸಂದರ್ಭದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಕಾಲಾವಧಿ ಪುದಿಯೋಡ್ಕಲ್ ಕಾರ್ಯಕ್ರಮವು ನ.28 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರವನ್ನು ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಶ್ರಮದಾನಕ್ಕೆ ಮುಹೂರ್ತ Read More »

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಲೀಲಾ ದಾಮೋದರ್ ಅವರಿಗೆ ಸನ್ಮಾನ

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನದ ಅಧ್ಯಕ್ಷರಾದ ಲೀಲಾ ದಾಮೋದರ ರವರನ್ನು ಪರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಹಕಾರ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ರವರು ಸನ್ಮಾನಿಸಿ ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ಶುಭಾಶಯಗಳು ತಿಳಿಸಿದರು. ಸಮ್ಮೇಳಧ್ಯಕ್ಷರು ಸಹಕಾರ ಸಂಘದ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘದ ಬೆಳವಣಿಗೆ ಕೃಷಿಕರ ಪ್ರಮುಖ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ ಎಂ, ನಿರ್ದೇಶಕರುಗಳಾದ ಹೊನ್ನಪ್ಪ

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಲೀಲಾ ದಾಮೋದರ್ ಅವರಿಗೆ ಸನ್ಮಾನ Read More »

error: Content is protected !!
Scroll to Top