Author name: Tejas

ಆನೆಗುಂಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು!

ಕನಕಮಜಲು ಗ್ರಾಮದ ಆನೆಗುಂಡಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ನ.12ರಂದು ಕಾಡಾನೆಗಳು ಸಂಚರಿಸಿವೆ.ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿ ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ತಿಳಿದುಬಂದಿದೆಕನಕಮಜಲು ಗ್ರಾಮದ ಕುದ್ಕುಳಿ, ಕುತ್ಯಾಳ, ಕಣಜಾಲು, ಮುಗೇರು ಪರಿಸರದಲ್ಲಿ ಕೃಷಿಕರ ಕೃಷಿ ತೋಟಗಳಿಗೆ ನುಗ್ಗಿ ಪ್ರತಿ ವರ್ಷ ಹಾನಿ ನಡೆಸುತ್ತಿದ್ದ ಕಾಡಾನೆಗಳು ಇದೀಗ ಆನೆಗುಂಡಿ ಪರಿಸರದ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ.ಇದರಿಂದ ಪರಿಸರದ ರೈತರು ಆತಂಕಗೊಂಡಿದ್ದಾರೆ.

ಆನೆಗುಂಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು! Read More »

ಕಾಂಗ್ರೆಸ್‌ ಹಿರಿಯ ನಾಯಕ ಆದಿತ್ಯ ವಿಕ್ರಮ್ ಜೈಸ್ವಾಲ್‌ ಬಿಜೆಪಿ ಸೆರ್ಪಡೆ

ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನಕ್ಕೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್‌ ಹಿರಿಯ ನಾಯಕ ಆದಿತ್ಯ ವಿಕ್ರಮ್ ಜೈಸ್ವಾಲ್ ಸೋಮವಾರ ಬಿಜೆಪಿ ಸೇರಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಅಭಿವೃದ್ಧಿ ಕೆಲಸಗಳಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದ ಅವರು ಹೇಳಿದ್ದಾರೆ. ನಮ್ಮ ಕುಟುಂಬ ಕಳೆದ ಐದು ತಲೆಮಾರುಗಳಿಂದ ಕಾಂಗ್ರೆಸ್‌ನಲ್ಲಿದೆ. ಆದರೆ ಈ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಲಾಯಿತು. ಜಾರ್ಖಂಡ್‌ನ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನಿವಾರ್ಯ ಎಂದರು.

ಕಾಂಗ್ರೆಸ್‌ ಹಿರಿಯ ನಾಯಕ ಆದಿತ್ಯ ವಿಕ್ರಮ್ ಜೈಸ್ವಾಲ್‌ ಬಿಜೆಪಿ ಸೆರ್ಪಡೆ Read More »

ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಆರಂಭ

ಸುಳ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿದ್ದ ಆಧಾ‌ರ್ ತಿದ್ದುಪಡಿ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಪುನರಾಂಭಗೊಂಡಿದೆ. ಸುಳ್ಯದ ಬ್ಯಾಂಕ್ ಬರೋಡಾ ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿತ್ತು. ಮೂರು ತಿಂಗಳ ಹಿಂದೆ ಸುಳ್ಯದ ಅಂಚೆ ಕಚೇರಿಯ ಆಧಾರ್ ತಿದ್ದುಪಡಿ ಕೇಂದ್ರ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿತ್ತು. ಬ್ಯಾಂಕ್ ಆಫ್ ಬರೋಡಾದಲ್ಲಿದ್ದ ಆಧಾರ್ ಕೇಂದ್ರವನ್ನು ಜನರು ಅವಲಂಬನೆ ಮಾಡಬೇಕಿತ್ತು. ಬ್ಯಾಂಕ್ ಆಫ್ ಬರೋಡದ ಆಧಾ‌ರ್ ಕೇಂದ್ರವು ವಾರದ ಹಿಂದೆ ಸ್ಥಗಿತಗೊಂಡಿದ್ದು ಸುಳ್ಯದಲ್ಲಿ ಆಧಾರ್ ಕಾರ್ಡ್

ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಆರಂಭ Read More »

ಮಗು ಮೃತಪಟ್ಟ ಹಿನ್ನಲೆ, ಬಾಣಂತಿ ಆಸ್ಪತ್ರೆ ಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮ ಹತ್ಯೆ

ಮಂಗಳೂರು: ಬಾಣಂತಿ ಒಬ್ಬರು ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ.ತಕ್ಷಣ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿದ್ದಾರೆಮೃತಪಟ್ಟ ಬಾಣಂತಿ ಕಾರ್ಕಳದ ರಂಜಿತಾ (28) ಎಂ ತಿಳಿದು ಬಂದಿದೆ.ಅವರು ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಲವು ಆರೋಗ್ಯ ಸಮಸ್ಯೆಯಿಂದಾಗಿ ಲೇಡಿಗೋಷನ್ ಗೆ ಅ.28 ಕ್ಕೆ ದಾಖಲಾಗಿದ್ದರು. ಅ.30 ಕ್ಕೆ ಸಿಸೇರಿಯನ್ ಹೆರಿಗೆಯಾಗಿತ್ತು. ಮಗು ಎನ್ ಐಸಿಯುನಲ್ಲಿತ್ತು. ನ.3 ಕ್ಕೆ ಮಗು

ಮಗು ಮೃತಪಟ್ಟ ಹಿನ್ನಲೆ, ಬಾಣಂತಿ ಆಸ್ಪತ್ರೆ ಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮ ಹತ್ಯೆ Read More »

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಬೆಳ್ತಂಗಡಿ: ಬೆಳ್ತಂಡಿ ತಾಲೂಕಿನ ಆಳದಂಗಡಿ ಸಮೀಪ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾಣದೆ ಮೃತ ಪಟ್ಟಿದ್ದಾರೆ. ಇವರು ಮಾಳ ನಿವಾಸಿ, ಬಳಂಜದಲ್ಲಿ ವ್ಯಾಸ್ತವ್ಯವಿರುವ ಶಶಿಧರ ದೇವಾಡಿಗ(40ವ) ಎಂಬವರಾಗಿದ್ದಾರೆ.ಇವರು ಚಲಾಯಿಸುತ್ತಿದ್ದ ಬೈಕ್ ನ 7ರಂದು ಅಪಘಾತ ವಾಗಿ ಗಾಯಗೊಂಡಿದ್ದರು. ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಯುವ ವಕೀಲ ಅಸೌಖ್ಯದಿಂದ ನಿಧನ

ಪುತ್ತೂರು: ಪತ್ತೂರು ತಾಲೂಕಿನ ಕುಂಬ್ರ ನಿವಾಸಿ ನ್ಯಾಯವಾದಿ ಚಂದ್ರಕಾಂತ್ ಅಡೂರ್ (38) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರೆಅನಾರೋಗ್ಯದ ಹಿನ್ನಲೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯುವ ವಕೀಲ ಅಸೌಖ್ಯದಿಂದ ನಿಧನ Read More »

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ನ.4ರಂದು ಆಲೆಟ್ಟಿ ಸುಳ್ಯ ರಸ್ತೆಯಲ್ಲಿ ಸಂಭವಿಸಿದಕಾರು ಮತ್ತು ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋಪಾಲ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಂಗಳೂರಿನ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು .ಮೃತರು ಪತ್ನಿ ಜಯಂತಿ ಹಾಗೂ ಇಬ್ಬರು ಪುತ್ರಿಯರಾದ ಕು.ಶರಣ್ಯ ಮತ್ತು ಕು.ಭೂಮಿಕಾ ಮತ್ತು ಸಹೋದರರನ್ನು, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರು ಸುಳ್ಯದಲ್ಲಿ ಕಳೆದ 8 ವರ್ಷಗಳಿಂದ ಅಟೋ ಚಾಲಕರಾಗಿದ್ದರು.ಸುಳ್ಯ ಜೂನಿಯರ್ ಕಾಲೇಜ್ ಬಳಿಯಲ್ಲಿ ವಾಸವಾಗಿದ್ದರು.

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಹಿಂದು ಯುವತಿ ಮುಸ್ಲಿಂ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದು ಸಂಘಟನೆ

ಸೌತಡ್ಕದಲ್ಲಿ‌ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಮುಸ್ಲಿಂ ಯುವಕ ಹಾಗೂ ಹಿಂದು ಯುವತಿಯನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಕೊಪ್ಪಳದ ಮುಸ್ಲಿಂ ಯುವಕ ಸಲೀಮ್ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು ರಿಕ್ಷಾದಿಂದ ಇಳಿದು ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಸಲೀಮ್ ಎಂದು ತಿಳಿದು ಕೂಡಲೇ ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಾಗ ಅನ್ಯ ಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.ಧರ್ಮಸ್ಥಳ

ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಹಿಂದು ಯುವತಿ ಮುಸ್ಲಿಂ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದು ಸಂಘಟನೆ Read More »

ಪೆರ್ಲ : ಕೊಲೆ ಆರೋಪಿಯ ಬಂಧನ

ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿಯನ್ನು‌ ಪೊಲೀಸರು ಬಂಧಿಸಿದ್ದಾರೆ.ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿ ಹರೀಶ್ ಗೋಳಿತೊಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪೆರ್ಲ : ಕೊಲೆ ಆರೋಪಿಯ ಬಂಧನ Read More »

ಪೆರ್ಲ : ಕೊಲೆ ಆರೋಪಿ ನಾಪತ್ತೆ,ಪೊಲೀಸರಿಂದ ತೀವ್ರ ಹುಡುಕಾಟ

ಕಡಬ ತಾಲೂಕಿನ ಅಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ಅಕ್ಕ ಪಕ್ಕದ ಸಂಬಂಧಿ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಗೋಳಿತ್ತೊಟ್ಟುವಿನ ಅಲಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಸಂಬಂಧಿ ಹರೀಶ್ ಕೊಲೆ ಮಾಡಿದ ಆರೋಪಿ.ಇದೀಗ ಹರೀಶ್ ನಾಪತ್ತೆಯಾಗಿದ್ದು ಪೊಲೀಸರು ಆತನ ಮೊಬೈಲ್ ಲೊಕೇಶನ್ ಆಧಾರಿಸಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೊಲೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ

ಪೆರ್ಲ : ಕೊಲೆ ಆರೋಪಿ ನಾಪತ್ತೆ,ಪೊಲೀಸರಿಂದ ತೀವ್ರ ಹುಡುಕಾಟ Read More »

error: Content is protected !!
Scroll to Top