ಮಗು ಮೃತಪಟ್ಟ ಹಿನ್ನಲೆ, ಬಾಣಂತಿ ಆಸ್ಪತ್ರೆ ಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮ ಹತ್ಯೆ

ಮಂಗಳೂರು: ಬಾಣಂತಿ ಒಬ್ಬರು ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ.
ತಕ್ಷಣ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ
ಮೃತಪಟ್ಟ ಬಾಣಂತಿ ಕಾರ್ಕಳದ ರಂಜಿತಾ (28) ಎಂ ತಿಳಿದು ಬಂದಿದೆ.
ಅವರು ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಲವು ಆರೋಗ್ಯ ಸಮಸ್ಯೆಯಿಂದಾಗಿ ಲೇಡಿಗೋಷನ್ ಗೆ ಅ.28 ಕ್ಕೆ ದಾಖಲಾಗಿದ್ದರು. ಅ.30 ಕ್ಕೆ ಸಿಸೇರಿಯನ್ ಹೆರಿಗೆಯಾಗಿತ್ತು. ಮಗು ಎನ್ ಐಸಿಯುನಲ್ಲಿತ್ತು. ನ.3 ಕ್ಕೆ ಮಗು ಮೃತಪಟ್ಟಿತ್ತು ಎಂದು ತಿಳಿದುಬಂದಿದೆ.
ಮಹಿಳೆ ಗುಣಮುಖರಾಗಿ ಸೋಮವಾರ ಡಿಸ್ಟಾರ್ಜ್ ಗೆಂದು ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ಮಹಿಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ ಎಂದು ತಿಳಿದು ಬಂದಿದೆ.



































































































Leave a Comment

Your email address will not be published. Required fields are marked *

error: Content is protected !!
Scroll to Top