Author name: Tejas

ಪಿಕಪ್ – ಸ್ಕೂಟರ್ ಭೀಕರ ಅಪಘಾತ ; ಇಬ್ಬರು ಸಾವು

ಬೆಳ್ತಂಗಡಿ ತಾಲೂಕಿನ ಬಳ್ಳಮಂಜ-ಪಣಕಜೆ ರಸ್ತೆಯ ಪಾಲ್ಯರದಲ್ಲಿ ನಿನ್ನೆ ಸಂಜೆ ಪಿಕಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಕ್ಟಿವಾ ಸವಾರ ಡಾಕಯ್ಯ ಗೌಡ ಹಾಗೂ ಹಿಂಬದಿ ಸವಾರ ಚಂದಪ್ಪ ಮೂಲ್ಯ ಅವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಕಪ್ – ಸ್ಕೂಟರ್ ಭೀಕರ ಅಪಘಾತ ; ಇಬ್ಬರು ಸಾವು Read More »

ಮಹಿಳೆಯರಿಗೆ ಹಲಸು,ಮಾವು,ಗೇರು ಉತ್ಪನ್ನಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ

ಜೂ. 12ರಿಂದ 14ರ ವರೆಗೆ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರಲ್ಲಿ ನಡೆಯಲಿರುವ ಮಾವು ಮತ್ತು ಹಲಸು ಮೇಳದಲ್ಲಿ ಜೂ.14 ಆದಿತ್ಯವಾರ ಅಪರಾಹ್ನ 3 ರಿಂದ 4ರ ವರೆಗೆ ಮಹಿಳೆಯರಿಗಾಗಿ ಹಲಸು, ಮಾವು, ಗೇರು ಉತ್ಪನ್ನಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಭಾಗವಹಿಸುವ ಮಹಿಳೆಯರು ಜೂ. 11ರ ಸಂಜೆಯೊಳಗೆ ತಮ್ಮ ಹೆಸರನ್ನು ಸುಳ್ಯ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಹರೀಶ್ ಕೊಡಿಯಾಲರವರಲ್ಲಿ ( ಮೊ : 9740507219) ನೀಡಬೇಕಾಗಿ ಸಂಘಟಕರು ತಿಳಿಸಿದ್ದಾರೆ.

ಮಹಿಳೆಯರಿಗೆ ಹಲಸು,ಮಾವು,ಗೇರು ಉತ್ಪನ್ನಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ Read More »

ಅಡ್ತಲೆ ಪರಮೇಶ್ವರ ಗೌಡ ನಿಧನ

ಅಡ್ತಲೆ ಕುಟುಂಬದ ಹಿರಿಯರು,ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಅಡ್ತಲೆ ಪರಮೇಶ್ವರ ಗೌಡ(70 ವರ್ಷ) ಜೂ.9ರಂದು ಬೆಳಗ್ಗೆ 7.30 ಸುಮಾರಿಗೆ ಅಸೌಖ್ಯದಿಂದ ನಿಧನರಾದರು‌.ಮ್ರತರು ಪತ್ನಿ ಒಂದು ಗಂಡು,ಒಂದು ಹೆಣ್ಣು ಮಕ್ಕಳನ್ನು ಕುಟುಂಬಸ್ಥರನ್ನು,ಬಂಧು,ಬಳಗವನ್ನು,ಅಗಲಿದ್ದಾರೆ‌.

ಅಡ್ತಲೆ ಪರಮೇಶ್ವರ ಗೌಡ ನಿಧನ Read More »

ಅರಂತೋಡು : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿ!

ಅರಂತೋಡು ಗ್ರಾಮದ ಬಿಳಿಯಾರು ಮಾಣಿ ಮೈಸೂರು ರಸ್ತೆಯಲ್ಲಿ ಜೂ.9ರಂದು ಬೆಳಿಗ್ಗೆ ಬೈಕೊಂದಕ್ಕೆ ಕಾರು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ವರದಿಯಾಗಿದೆ.ವೇಗವಾಗಿ ಬಂದ ಇನೋವಾ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಢಿಕ್ಕಿಯ ಪರಿಣಾಮ ಬೈಕ್‌ ಸವಾರ ರಸ್ತೆಗಪ್ಪಳಿಸಿ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡು : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿ! Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ವತಿಯಿಂದ ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ ವನಮಹೋತ್ಸವ

ಸ್ವರ್ಣಂ ಜ್ಯುವೆಲ್ಸ್ ಸುಳ್ಯ ವತಿಯಿಂದ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಮತ್ತು ಕರ್ನಾಟಕ ಜರ್ನರ್ಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡ ವಿತರಣೆ, ಸ್ಥಳದಲ್ಲೇ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಜೂ.8 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರ್ಣಂ ಜ್ಯುವೆಲ್ಸ್ ಪಾಲುದಾರ ಪ್ರವೀಣ್ ಬಿ. ಗೌಡ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಸದಾನಂದ ಮಾವಜಿ,ಉಪ ವಲಯ ಅರಣ್ಯಾಧಿಕಾರಿ ರಂಜಿತಾ ಪಿ., ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ವತಿಯಿಂದ ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ ವನಮಹೋತ್ಸವ Read More »

ಮುಂದಿನ ಆರು ದಿನ‌ ರಾಜ್ಯದಲ್ಲಿ ಭಾರೀ ಮಳೆ !

ಜೂನ್ 08ರಿಂದ ಜೂ.13ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗೇ ಜೂನ್ 10 ಮತ್ತು 11 ರಂದು ಕೂಡ ಭಾರೀ ಮಳೆ ಮುಂದುವರಿಯಲಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಜಾಗರೂಕರಾಗಿರಲು ತಿಳಿಸಲಾಗಿದೆ.ಉತ್ತರ ಒಳನಾಡಿನ ಬೆಳಗಾವಿ,

ಮುಂದಿನ ಆರು ದಿನ‌ ರಾಜ್ಯದಲ್ಲಿ ಭಾರೀ ಮಳೆ ! Read More »

ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ

ಅರಂತೋಡು : ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ. ಮೊಹಮ್ಮದ್ ಫೈಝಲ್ ಅವರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದಾರೆ.ಮೂಲತಃ ಉಳ್ಳಾಲ ಕೋಟೆಪುರದವರಾದ ಡಾ.ಫೈಝಲ್ ಅವರು ಏನಪೋಯ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ (MBBS) ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ Read More »

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪದ ಬ್ರಹತ್ ಗಾತ್ರದ ಅಪಾಯಕಾರಿ ಮರ ತೆರವು

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪ ಜಾಲ್ಸೂರು–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದ ಬೃಹತ್ ಗಾತ್ರದ ಅಪಾಯಕಾರಿ ಮರವನ್ನು ಅಧಿಕಾರಿಗಳ ಅನುಮತಿಯೊಂದಿಗೆ ತೆರವುಗೊಳಿಸಲಾಗಿದೆ.ಈ ಕುರಿತು ಕಳೆದ ಎರಡು ವರ್ಷಗಳಿಂದ ಸತ್ಯಶಾಂತಿತ್ಯಾಗಮೂರ್ತಿ ಸೋಣಂಗೇರಿಯವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪತ್ರವ್ಯವಹಾರ ನಡೆಸಿ. ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡುತ್ತಿದ್ದರು. ಮನವಿಗೆ ಕೂಡಲೇ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮರವನ್ನು ಅಪಾಯಕಾರಿ ಎಂದು ಗುರುತಿಸಿ ಅದನ್ನು ತೆರವುಗೊಳಿಸಲು ಅಧಿಕೃತ ಆದೇಶ ನೀಡಿದ್ದರು.ಮರದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪದ ಬ್ರಹತ್ ಗಾತ್ರದ ಅಪಾಯಕಾರಿ ಮರ ತೆರವು Read More »

ಗೀಸರ್ ನ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವು

ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಜೂ 7ರಂದು ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರು ಮೂಲದ ಮಹಿಳೆ ಮೃತಪಟ್ಟ ಘಟನೆ ವರದಿಯಾಗಿದೆ. ಕೊಡಗಿಗೆ ಪ್ರವಾಸ ಬಂದಿದ್ದ ಈಕೆ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೆ ಅಲ್ಲಿ ಉಳಿದುಕೊಂಡಿದ್ದರು.ಬೆಳಿಗ್ಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ.ಬಾತ್ ರೂಮಿನಲ್ಲಿ ಕಿಟಕಿ ಇರಲಿಲ್ಲವೆಂದು ಹೇಳಲಾಗಿದೆ.ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಗೀಸರ್ ನ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವು Read More »

ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ 3ನೇ ವರ್ಷದ ವಾರ್ಷಿಕ ಮಹಾಸಭೆಯು ಜೂ. 7 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ಧನ ದೋಳ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು 2023ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2025- 26ನೇ ಸಾಲಿನಲ್ಲಿ ಸದಸ್ಯರ ಸಹಕಾರದೊಂದಿಗೆ ಒಟ್ಟು ರೂ. 44.02 ಕೋಟಿ ವ್ಯವಹಾರ ನಡೆಸಿ ರೂ. 7.06 ಲಕ್ಷ ನಿವ್ವಳ ಲಾಭ

ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ Read More »

error: Content is protected !!
Scroll to Top