Author name: Tejas

ನಾಳೆಯಿಂದ(ಡಿ.16) ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನು ಪೂಜೆ ಆರಂಭ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ.16ರಿಂದ ಧನು ಪೂಜೆ ಆರಂಭಗೊಳ್ಳಲಿದೆ.ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈಸಿದ್ದು, ಕಳೆದ 2017ರ ಮಾರ್ಚ್ 1ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿದೆ. ಶ್ರೀ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ದೇವಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೆಲವೊಂದು ಪೂಜಾ ವಿಧಿವಿಧಾನಗಳು ನಿಂತಿರುವ ಬಗ್ಗೆ ತಿಳಿದುಕೊಂಡು ಅವುಗಳ ಪೈಕಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದ ‘ಧನುಪೂಜೆ”ಯನ್ನು ಕಳೆದ ಹದಿಮೂರು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.ಶ್ರೀ ಮಲ್ಲಿಕಾರ್ಜುನ ದೇವರ […]

ನಾಳೆಯಿಂದ(ಡಿ.16) ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನು ಪೂಜೆ ಆರಂಭ Read More »

ಹಮಿಧಾಬಿ ಕಾವಿನಮೂಲೆ ನಿಧನ

ಬೆಳ್ಳಾರೆ ಗ್ರಾಮದ ಕಾವಿನ ಮೂಲೆ ದಿ! ಅಬ್ದುಲ್ ಲತೀಫ್ ಸಾಹೇಬ್ ರ ಧರ್ಮಪತ್ನಿ ಹಮಿದಾಭಿ ಕಾವಿನ ಮೂಲೆ ರವರು ಹೃದಯಾಘಾತ ದಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. 10 ರಂದು ನಿಧನರಾದರು.ಅವರಿಗೆ 72 ವರ್ಷ ಪ್ರಾಯವಾಗಿತ್ತು.ಮೃತರು ಮೂರು ಮಂದಿ ಪುತ್ರರು ಮೂರು ಮಂದಿ ಪುತ್ರಿಯರನ್ನು ಸೇರಿದಂತೆ ಕುಟುಂಬಸ್ಥರನ್ನು ಆಗಲಿದ್ದಾರೆ.

ಹಮಿಧಾಬಿ ಕಾವಿನಮೂಲೆ ನಿಧನ Read More »

ಪೆರಾಜೆ ಗ್ರಾಮದಲ್ಲಿ ಸಾಕು ನಾಯಿ ಬೇಟೆಗಾರನ ಗುಂಡೇಟಿಗೆ ಬಲಿ !

ಪೆರಾಜೆ ಗ್ರಾಮದಲ್ಲಿ ಬೇಟೆಗಾರರೊಬ್ಬರು ಕಾಡು ಪ್ರಾಣಿ ಎಂದು ತಿಳಿದು ಸಾಕು ನಾಯಿಯೊಂದಕ್ಕೆಕೋವಿಯಿಂದ ಗುಂಡು ಹಾರಿಸಿ ಸಾಕು ನಾಯಿ ಗುಂಡೇಟಿಗೆ ಬಲಿಯಾದ ಘಟನೆ ಶನಿವಾರ ವರದಿಯಾಗಿದೆ.ರಾತ್ರಿ ಕಾಪುಮಲೆ ಕುಂದಲ್ಪಾಡಿ ದಯಾಕರ ಅವರ ಮನೆಯ ಬಳಿ ಬೇಟೆಗೆ ಬಂದ ವ್ಯಕ್ತಿ ಅವದ ಸಾಕು ನಾಯಿಗೆ ರಾತ್ರಿ 11 30 ಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದಾರೆ.ಸಾಕು ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ಇದರಿಂದ ಮನೆಯವರು ಆಕ್ರೋಶಗೊಂಡಿದ್ದಾರೆ.

ಪೆರಾಜೆ ಗ್ರಾಮದಲ್ಲಿ ಸಾಕು ನಾಯಿ ಬೇಟೆಗಾರನ ಗುಂಡೇಟಿಗೆ ಬಲಿ ! Read More »

ಡಿ.25 ಮತ್ತು 26ಕ್ಕೆ ಸುಳ್ಯ ಹಬ್ಬ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಸುಳ್ಯದ ಭವ್ಯ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ ಕಾರ್ಯಕ್ರಮ25 ಮತ್ತು 26 ರಂದು ನಡೆಯಲಿದೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಹಾಗೂ ಇತರ ಪದಾಧಿಕಾರಿಗಳು ತಿಳಿಸಿದ್ದಾರೆ‌. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆವಿಜಿ ಕಾನೂನು ಮಹಾ ವಿದ್ಯಾಲಯದ ವಠಾರದಲ್ಲಿ ನಡೆಯುವ ಎರಡು ದಿನಗಳ ಕಾರ್ಯಕ್ರಮದ ಅಂಗವಾಗಿಡಿ.25ರಂದು ಪೂ.9ರಿಂದ

ಡಿ.25 ಮತ್ತು 26ಕ್ಕೆ ಸುಳ್ಯ ಹಬ್ಬ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ Read More »

ಅನ್ಯರ ಸಂತೋಷದಲ್ಲಿ ತನ್ನ ಸಂತೋಷ ಕಾಣುವವಳು‌ ತ್ಯಾಗಮಯಿ ಹೆಣ್ಣು ಮಾತ್ರ

ಹೆಣ್ಣು ಸಹನಾಮೂರ್ತಿ ಆದರೆ ಬೇರೆಯವರನ್ನು ಸಮಾಧಾನ ಮಾಡುವಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದಕ್ಕೆ ಸಹನೆ ಎಂದು ಕರೆದರೇನೋ. ಯಾಕೆಂದರೆ ಆಕೆಗಾಗಿ ಬದುಕಲು ಸಮಯ ಇಲ್ಲ ಇನ್ನೊಬ್ಬರಿಗಾಗಿಯೇ ಬದುಕಿ ಯಾರನ್ನೋ ತೃಪ್ತಿಪಡಿಸುವುದರಲ್ಲೇ ತಲ್ಲೀನರಾಗಿರುತ್ತಾಳೆ. ಹಾಗಾದರೆ ಆಕೆಯ ಸಂತೋಷ ಇರುವುದು ಬೇರೆಯವರ ಖುಷಿಯಲ್ಲಿ ಎನ್ನುವುದೇ ಸತ್ಯ. ಆಕೆಗಾಗಿ ಬದುಕಬೇಕಾದ ಮಾನಸಿಕ ಪರಿಸ್ಥಿತಿ ಎದುರಾದರೂ ಕೂಡ ಇನ್ನೊಬ್ಬರು ಏನೋ ಹೇಳುವರೇನೋ ಎಂಬ ಭಯದಲ್ಲೆ ತನ್ನ ಸಂತೋಷಕ್ಕೆ ವಿದಾಯ ಹೇಳಿ ನಿರ್ಜೀವ ಬದುಕನ್ನು ಆಯ್ಕೆ ಮಾಡಿಕೊಂಡ ಹೆಚ್ಚಿನವರು ಮಹಿಳೆಯರೆ.ಆಧುನಿಕ ಯುಗದಲ್ಲಿ ಹೆಣ್ಣೋಬ್ಬಳು ತನ್ನೆಲ್ಲ ಸಮಯದಲ್ಲಿ

ಅನ್ಯರ ಸಂತೋಷದಲ್ಲಿ ತನ್ನ ಸಂತೋಷ ಕಾಣುವವಳು‌ ತ್ಯಾಗಮಯಿ ಹೆಣ್ಣು ಮಾತ್ರ Read More »

ಕಲ್ಚೆರ್ಪೆ : ಗುಳಿಗ ದೈವ ಹಾಗೂ ಪರಿವಾರ ದೈವಗಳ ಕೋಲ

ಸುಳ್ಯ ತಾಲೂಕಿನ‌ ಆಲೆಟ್ಟಿ ಗ್ರಾಮದ ಕಲ್ಟಿರ್ಪೆ ಪೆರಾಜೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಗುಳಿಗ ದೈವದ ಕೋಲ ನಡೆಯಿತು.ರಾತ್ರಿ ಸಾನಿಧ್ಯದಲ್ಲಿ ಶ್ರೀ ಗುಳಿಗ ದೈವದ ಕೋಲ ನಡೆದು ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ದೈವದ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ನೂರಾರು ಸಂಖ್ಯೆಯಲ್ಲಿ ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಆಗಮಿಸಿದ್ದರು. ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು

ಕಲ್ಚೆರ್ಪೆ : ಗುಳಿಗ ದೈವ ಹಾಗೂ ಪರಿವಾರ ದೈವಗಳ ಕೋಲ Read More »

ಸುಳ್ಯದಲ್ಲಿ ಭೀಕರ ಕಾರು ಅಪಘಾತ ಇಲ್ಲಿದೆ ವಿಡಿಯೋ‌ ಸಮೇತ ವರದಿ

ಸುಳ್ಯ ಆಲೆಟ್ಟಿ ಸಂಪರ್ಕಿಸುವ ರಸ್ತೆಯ ಗುರುಂಪು ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಳಭಾಗದ ಮನೆಯ ಹಿಂಬದಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ವರದಿಯಾಗಿದೆ.ನಿದ್ರೆ ಮಂಪರಿನಲ್ಲಿದ್ದ ಚಾಲಕ ಎದುರಿನ ತಡೆಗೋಡೆಯೊಂದಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.ಬಳಿಕ ಹಿಂದಕ್ಕೆ ಸರಿದ ಕಾರು ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕಾರು ಆಲೆಟ್ಟಿ ರಸ್ತೆಯ ಮೂಲಕ ಕೇರಳದ ಕಣ್ಣೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಸುಳ್ಯದಲ್ಲಿ ಭೀಕರ ಕಾರು ಅಪಘಾತ ಇಲ್ಲಿದೆ ವಿಡಿಯೋ‌ ಸಮೇತ ವರದಿ Read More »

ನಟ ದರ್ಶನ್ ಗೆ ಜಾಮೀನು ಮಂಜೂರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ಜಾಮೀನು ನೀಡಿ ಹೈಕೋರ್ಟ್‌ ಪೀಠ ಆದೇಶಿಸಿದೆ.ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶುಕ್ರವಾರ (ಡಿ.13) ಈ ಆದೇಶ ಹೊರಡಿಸಿದೆ.ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ‌, ನಾಗರಾಜ್‌, ಅನುಕುಮಾರ್‌, ಲಕ್ಷ್ಮಣ್‌, ಜಗದೀಶ್‌, ಪ್ರದೋಷ್ ಗೆ ಇದೀಗ ಜಾಮೀನು ನೀಡಲಾಗಿದೆ.

ನಟ ದರ್ಶನ್ ಗೆ ಜಾಮೀನು ಮಂಜೂರು Read More »

ಮಹಿಳೆ ಅಸೌಖ್ಯದಿಂದ ನಿಧನ

ಸುಳ್ಯ ತಾಲೂಕಿನ ಬೆಳ್ಳಾರೆ ಶ್ರೀ ದುರ್ಗಾ ಜ್ಯುವೆಲ್ಲರಿ ಮಾಲಕ, ಕಲ್ಮಡ್ಕ ಗ್ರಾಮದ ಮಾಳಿಗೆ ನಾರಾಯಣ ಆಚಾರ್ಯ ರವರ ಪತ್ನಿ ಹರಿಣಾಕ್ಷಿ (44)ಅವರು ಅಸೌಖ್ಯದಿಂದ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಹಿಳೆ ಅಸೌಖ್ಯದಿಂದ ನಿಧನ Read More »

ಪಾಲದಿಂದ ಅಯತಪ್ಪಿ ಬಿದ್ದು ವ್ಯಕ್ತಿ ಸಾವು

ಪಾಲದಿಂದ ಆಕಸ್ಮೀಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ವ್ಯಾಪಾರೆಯಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.ವ್ಯಾಪಾರೆಯ ಕುಸುಮಾಧರ(40 )ಎಂಬವರು ರಾತ್ರಿ ಮನೆಗೆ ಬರುತ್ತಿದ್ದ ವೇಳೆ ತೋಟದಲ್ಲಿದ್ದ ಪಾಲದಿಂದ ಕೆಳಗೆ ಬಿದ್ದರು.ಅವರ ತಲೆ ಸೇತುವೆಯ ಕೆಳಭಾಗದಲ್ಲಿದ್ದ ಕಲ್ಲಿಗೆ ಬಡಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಪಾಲದಿಂದ ಅಯತಪ್ಪಿ ಬಿದ್ದು ವ್ಯಕ್ತಿ ಸಾವು Read More »

error: Content is protected !!
Scroll to Top