Author name: Tejas

ಅರಂತೋಡು : ಹಾಜಿ ಅಹಮ್ಮದ್ ಕುಂಞ ಪಟೇಲ್ ರವರು ನಿಧನ

ಅರಂತೋಡು : ಅರಂತೋಡು ನಿವಾಸಿ ಹಾಜಿ ಅಹಮ್ಮದ್ ಕುಂಞ ಪಟೇಲ್ ಶುಕ್ರವಾರ ಮುಂಜಾನೆ ಮನೆಯಲ್ಲಿ ನಿಧನರಾದರು.ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಮತ್ತು ಅರಂತೋಡು ನೆಹರು ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆಗೈದಿದ್ದರು. ಅರಂತೋಡು ನಿವಾಸಿಯಾಗಿರುವ ಬದ್ರುದ್ದೀನ್, ನಾಸೀರುದ್ದೀನ್, ಸೈಫುದ್ದೀನ್, ಹಬೀಬ್ ರಹಿಮಾನ್, ಸಲಾಹುದ್ದೀನ್, ಜಲಾಲುದ್ದೀನ್ ಮತ್ತು ಮರ್ಹೂಮ್ ಅಮೀನ್ , ಮರ್ಹೂಮ್ ಶಿಹಾಬ್ ರವರ ಸಹಿತ ನಾಲ್ಕು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.

ಅರಂತೋಡು : ಹಾಜಿ ಅಹಮ್ಮದ್ ಕುಂಞ ಪಟೇಲ್ ರವರು ನಿಧನ Read More »

ನೀರಿನಲ್ಲಿ ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಶ್ರದ್ಧಾ ಭಕ್ತಿಯೊಂದಿಗೆ ಸಂಪನ್ನ

ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊAಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿತ್ತು. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪ್ತಿಯಾಯಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ

ನೀರಿನಲ್ಲಿ ಬಂಡಿ ಉತ್ಸವದೊಂದಿಗೆ ಕುಕ್ಕೆ ಜಾತ್ರೆ ಶ್ರದ್ಧಾ ಭಕ್ತಿಯೊಂದಿಗೆ ಸಂಪನ್ನ Read More »

ನೆಲ್ಲೂರು ಕೇಮ್ರಾಜೆ : ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮಗಳ ಗ್ರಾಮಸ್ಥರ ಸಭೆ

ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದ ಕ ಕರ್ನಾಟಕ. ಇದರ ವತಿಯಿಂದ ಇಂದು ನೆಲ್ಲೂರು ಕೇಮ್ರಾಜೆ ಸೊಸೈಟಿ ಹಾಲ್ ನಲ್ಲಿ ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮಗಳ ಗ್ರಾಮಸ್ಥರ ಸಭೆ ನಡೆಯಿತು.ಕಸ್ತೂರಿ ರಂಗನ್ ವರದಿ ಜಾರಿಯನ್ನು ಎಲ್ಲಾ ಗ್ರಾಮಸ್ಥರು ಒಕ್ಕೊರಳಿನಿಂದ ವಿರೋದಿಸುವ ಕುರಿತು ಸಂಚಾಲಕರಾದ ಕಿಶೋರ್ ಶಿರಾಡಿ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ನಮ್ಮ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಬೂತ್

ನೆಲ್ಲೂರು ಕೇಮ್ರಾಜೆ : ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮಗಳ ಗ್ರಾಮಸ್ಥರ ಸಭೆ Read More »

ಸಿರಿಕುರಲ್ : ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ಜರುಗಿತು.ಬೆಳಗ್ಗೆ ಸ್ಥಳ ಶುದ್ಧಿಯಾಗಿ ಗಣಪತಿಹವನ,ವನದುರ್ಗಾ ಹೋಮ ಆಶ್ಲೇಷ ಬಲಿ ತಂಬಿಲ ಸೇವೆಯು ಅರ್ಚಕರಾದ ಜಯರಾಮ ಬಳ್ಳುಳ್ಳಾಯ, ಸುಬ್ರಹ್ಮಣ್ಯ ಪಾಂಗಣ್ಣಾಯ, ರಮೇಶ ಮೂಡಿತ್ತಾಯ, ಕ್ಷೇತ್ರ ಪುರೋಹಿತರಾದ ವೇ.ಮೂ.ಅಭಿರಾಮ ಭಟ್ ಸರಳಿಕುಂಜ ರವರ ನೇತೃತ್ವದಲ್ಲಿ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.ಈ ಸಂದರ್ಭದಲ್ಲಿ ಭಕ್ತರಿಂದ ಹರಕೆಯ

ಸಿರಿಕುರಲ್ : ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಅಟೋ ಚಾಲಕ ನಿಧನ

ಸುಳ್ಯ ಆಲೆಟ್ಟಿ ಗ್ರಾಮದ ನೆಡ್ಡಿಲು ನಿವಾಸಿ ದಿ.ಗೋಪಾಲ ನಾಯ್ಕ ಅವರ ಮಗ ಅಟೋ ಚಾಲಕ ವಿಜಯ ನೆಡ್ಡಿಲು ಅಸೌಖ್ಯದಿಂದ ಡಿ.11 ರಂದು ರಾತ್ರಿ ನೆಡ್ಡಿಲು ಮನೆಯಲ್ಲಿ ನಿಧನರಾದರು. ಅವರಿಗೆ 37 ವರ್ಷ ವಯಸ್ಸಾಗಿತ್ತು.ಮೃತರು ಅವಿವಾಹಿತ ರಾಗಿದ್ದಾರೆ.ಮೃತರುತಾಯಿ ಕಸ್ತೂರಿ, ಸಹೋದರ ರಾಮಚಂದ್ರ ಮತ್ತು ರವಿಚಂದ್ರ ನೆಡ್ಡಿಲು, ಸಹೋದರಿಯರಾದ ಸವಿತ ಮತ್ತು ಪುಷ್ಪಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಟೋ ಚಾಲಕ ನಿಧನ Read More »

ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ

ಅಯ್ಯಪ್ಪನ ಮಹಿಮೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.ಒಂದು ಶಬ್ದ ಮಾತನಾಡಲೂ ಬಾಯಿ ಬಾರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ, ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಮಾತನಾಡಲು ಆರಂಭಿಸಿದ್ದಾನೆ.ಪುತ್ತೂರಿನಸಾಮೆತ್ತಡ್ಕ ನಿವಾಸಿಯಾದ ಪ್ರಸನ್ನ ಎನ್ನುವವರು ಮಾತನಾಡುವ ಮೂಲಕ ಜನರ ಅಚ್ಚರಿಗೆ ಕಾರಣವಾಗಿದೆ.ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕಮಾತನಾಡಲು ಪ್ರಾರಂಭಿಸಿದ್ದಾರೆ.ಒಂದಕ್ಷರ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ

ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ Read More »

ಕೆ.ಟಿ.ವಿಶ್ವನಾಥ ದಂಪತಿ ಕಾರು ಅಪಘಾತ

ಸುಳ್ಯ ತಾಲೂಕಿನನ ಗೋಂಟಡ್ಕದಲ್ಲಿ ಕಾರು ಚರಂಡಿಗೆ ಬಿದ್ದು ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿ ಕೆ.ಟಿ.ವಿಶ್ವನಾಥ ದಂಪತಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಅವರು ಕಚೇರಿಗೆ ಬೆಳಿಗ್ಗೆ ಕತ್ಯವ್ಯಕ್ಕೆ ಬರುತ್ತಿದ್ದ ವೇಳೆ ಗೋಂಟಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ.ಪತ್ನಿ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಮಕ್ಕಳು ಮತ್ತು ವಿಶ್ವನಾಥರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಟಿ.ವಿಶ್ವನಾಥ ದಂಪತಿ ಕಾರು ಅಪಘಾತ Read More »

ಆಮ್ ಆದ್ಮಿ ಪಾರ್ಟಿ, ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅಶೋಕ ಎಡಮಲೆಯವರಿಗೆ ಭಾಗವಹಿಸಲು ಅವಕಾಶ

ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಮಿತಿ ಸಭೆ 2023-24, ಇದೇ ಡಿಸೆಂಬರ್ 21, 20 FCC24 ರಂದು ದೆಹಲಿಯಲ್ಲಿ ನಡೆಯಲ್ಲಿದ್ದು, ಕರ್ನಾಟಕದಿಂದ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಶೋಕ ಎಡಮಲೆ ಭಾಗವಹಿಸಲಿದ್ದಾರೆ.ಕರ್ನಾಟಕ ರಾಜ್ಯದಿಂದ ಒಟ್ಟು 8 ಮಂದಿ ಸಮಿತಿ ಸದಸ್ಯರಿದ್ದು ಈ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ.ಅಶೋಕ ಎಡಮಲೆ ಅವರು ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಸಂಚಾಕರಾಗಿ, ದಕ್ಷಿಣ ಕನ್ನಡ ಜಿಲ್ಲಾಧ್ಯರಾಗಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೀಕ್ಷಕರಾಗಿ ಮತ್ತು ರಾಜ್ಯ

ಆಮ್ ಆದ್ಮಿ ಪಾರ್ಟಿ, ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅಶೋಕ ಎಡಮಲೆಯವರಿಗೆ ಭಾಗವಹಿಸಲು ಅವಕಾಶ Read More »

ಕಟ್ಟದ ಮೇಲೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು

ಸುಳ್ಯ ಜ್ಯೋತಿ ಸರ್ಕಲ್ ಬಳಿ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.ಅಲ್ಲಿ ಸೇರಿದ್ದ ಸ್ಥಳೀಯರು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುಷ್ಟರಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ವ್ಯಕ್ತಿ ಕಲ್ಲಡ್ಕ ನಿವಾಸಿ ಪ್ರಮೋದ್ ಎಂದು ತಿಳಿದುಬಂದಿದೆ.

ಕಟ್ಟದ ಮೇಲೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು Read More »

ಸುಳ್ಯ ಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ

.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಕೆ.ವಿ.ಜಿ. ಸುಳ್ಯ ಹಬ್ಬವನ್ನು ದ.25 ಮತ್ತು ದ.26 ರಂದು ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಬುಧವಾರ ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು.ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ ರೈ ಮತ್ತು ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡರು ಶುಭಹಾರೈಸಿದರು. ಸಮಿತಿ ಅಧ್ಯಕ್ಷ ಡಾ.ಜ್ಞಾನೇಶ್ ಎನ್.ಎ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ರಾಜು

ಸುಳ್ಯ ಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top