Author name: Tejas

ಸುಳ್ಯ : ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಗೆ ಒಲಂಪಿಯಾಡ್ ಸಹಕಾರಿಯಾಗಲಿದೆ : ಬಾಬು ನಾಯ್ಕ

ಸುಳ್ಯ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಗೆ ಒಲಂಪಿಯಾಡ್ ಸಹಕಾರಿಯಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ದಕ್ಷಿಣ ಕನ್ನಡ 2 ಜಿಲ್ಲೆಯ ಬಾಬು ನಾಯ್ಕ ರವರು ಅಭಿಪ್ರಾಯಪಟ್ಟರು.ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಒಲಂಪಿಯಾಡ್ 6.0 ಪರೀಕ್ಷೆ ಬರೆದು ಉತ್ತೀರ್ಣರಾದ ಒಟ್ಟು 335 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಯಾವುದೇ ಹುದ್ದೆಯನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾಗಿದ್ದು ಸಾಮಾನ್ಯವಾಗಿದೆ. ಸ್ಪರ್ಧಾತ್ಮಕ […]

ಸುಳ್ಯ : ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಗೆ ಒಲಂಪಿಯಾಡ್ ಸಹಕಾರಿಯಾಗಲಿದೆ : ಬಾಬು ನಾಯ್ಕ Read More »

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಿನಲ್ಲಿ ಡಿ.ಕೆ.ಶಿವಕುಮಾ‌ರ್ ಪ್ರಮಾಣ ವಚನ ಸ್ವೀಕಾರ

ಡಿ.ಕೆ.ಶಿವಕುಮಾ‌ರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು‌.ಬುಧವಾರ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಿನಲ್ಲಿ ಡಿ.ಕೆ.ಶಿವಕುಮಾ‌ರ್ ಪ್ರಮಾಣ ವಚನ ಸ್ವೀಕಾರ Read More »

ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ 14 ಸಚಿವರ ಫೈನಲ್ ಲಿಸ್ಟ್ ?

ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ 14 ಸಚಿವರ ಫೈನಲ್ ಲಿಸ್ಟ್ ಲಭ್ಯರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಅಧಿಕಾರ ಸ್ವೀಕರಿಸಲಿದ್ದು, ಅವರ ಸಂಪುಟ ಸೇರಲಿರುವ 14 ಸಂಭಾವ್ಯ ಸಚಿವರ ಅಂತಿಮ ಪಟ್ಟಿ ಲಭ್ಯವಾಗಿದೆ. ಈ ಪಟ್ಟಿಯಲ್ಲಿ ಡಾ. ಜಿ. ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದ‌ರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಎನ್. ಚಲುವರಾಯಸ್ವಾಮಿ ಹಾಗೂ

ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ 14 ಸಚಿವರ ಫೈನಲ್ ಲಿಸ್ಟ್ ? Read More »

ಮೊಬೈಲ್ ಬಳಸದಂತೆ ಮಗನಿಗೆ ಬುದ್ದಿ ಮಾತು ಹೇಳಿದ ತಾಯಿ,ಮಗ ನಿಗೂಡವಾಗಿ ನಾಪತ್ತೆ

ಮೊಬೈಲ್ ಬಳಸದಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತು 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿಂದ ವರದಿಯಾಗಿದೆ.ನಾಪತ್ತೆಯಾದ ಬಾಲಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪೋಷಕರೊಂದಿಗೆ ವಾಸವಿದ್ದ ಸೈಯದ್ ಆಲಿ ಸೈಯದ್ ಗೌಸ (16) ಎಂದು ಗುರುತಿಸಲಾಗಿದೆ.ಬಾಲಕನ ತಾಯಿ ಸಲ್ಮಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಲ್ಮಾ ಅವರು ತಮ್ಮ ಪತಿ ಹಾಗೂ ಮಗ ಸೈಯದ್

ಮೊಬೈಲ್ ಬಳಸದಂತೆ ಮಗನಿಗೆ ಬುದ್ದಿ ಮಾತು ಹೇಳಿದ ತಾಯಿ,ಮಗ ನಿಗೂಡವಾಗಿ ನಾಪತ್ತೆ Read More »

ಸಿದ್ದರಾಮಯ್ಯಗೆ ಕಾಂಗ್ರೆಸ್ ನಲ್ಲಿ CWC ಸದಸ್ಯ ಹುದ್ದೆ

ಕಾಂಗ್ರೆಸ್ ಹೈಕಮಾಂಡ್ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹತ್ವದ CWC ಹುದ್ದೆ ನೀಡಿದೆ.ರಾಜ್ಯಸಭೆ ಅಥವಾ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ನೀಡಿದ್ದ ಆಫರ್ ತಿರಸ್ಕರಿಸಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಯ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (AICC) ಯಿಂದ ಈ ನೇಮಕಾತಿ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷರು ತಕ್ಷಣದ ಪರಿಣಾಮಕ್ಕೆ ಈ ನೇಮಕ ಮಾಡಿರುವುದಾಗಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹಿ ಮಾಡಿರುವ ಆದೇಶದಲ್ಲಿ

ಸಿದ್ದರಾಮಯ್ಯಗೆ ಕಾಂಗ್ರೆಸ್ ನಲ್ಲಿ CWC ಸದಸ್ಯ ಹುದ್ದೆ Read More »

ಇಂದು ಡಿಕೆ ಶಿವಕುಮಾ‌ರ್ ಪ್ರಮಾಣವಚನ: ಅರ್ಧ ದಿನ ರಜೆ ಘೋಷಣೆ

ಜೂನ್ 3ರಂದು ಸಂಜೆ 4.05ಕ್ಕೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾ‌ರ್ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇಂದು ಮಧ್ಯಾಹ್ನದ ನಂತರ ಬೆಂಗಳೂರಿನ ಕೆಲವು ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಮೂರು ಪ್ರಮುಖ ಆಡಳಿತಾತ್ಮಕ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಜೆ ನೀಡುವುದು ಅನಿವಾರ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ರಜೆ ಸಚಿವಾಲಯದ ಸಿಬ್ಬಂದಿಗೆ ಮಾತ್ರವಲ್ಲದೆ, ಆಯಾ ಕಟ್ಟಡಗಳಲ್ಲಿ ನಿಯೋಜನೆಗೊಂಡಿರುವ ಎಲ್ಲಾ ಹಂತದ ನೌಕರರಿಗೂ ಅನ್ವಯಿಸಲಿದೆ.

ಇಂದು ಡಿಕೆ ಶಿವಕುಮಾ‌ರ್ ಪ್ರಮಾಣವಚನ: ಅರ್ಧ ದಿನ ರಜೆ ಘೋಷಣೆ Read More »

ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ

ಹಾಸನದಲ್ಲಿ ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣವೊಂದು ವರದಿಯಾಗಿದೆ‌. ಪದವಿ ಓದುತ್ತಿರುವ ಆರೋಪಿ, ಬಾಲಕಿಗೆ ಡ್ರಾಪ್‌ ಕೊಡುವುದಾಗಿ ಕರೆದೊಯ್ದು, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಬೈಕ್‌ನಿಂದ ಜಿಗಿದಿದ್ದು, ಗಂಭೀರ ಗಾಯಗೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಇಬ್ಬರು ಸ್ನೇಹಿತರನ್ನೂ ಹುಡುಕುತ್ತಿದ್ದಾರೆ. ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ Read More »

ಅರಂತೋಡು : ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಬೆಚ್ಚಗೆ ಮಲಗಿದ್ದ ಹಾವು !

ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಹಾವೊಂದು ಮಲಗಿಕೊಂಡಿರುವುದು ಪತ್ತೆಯಾಗಿ ಅರಿಲ್ಲದೆ ಬೈಕ್ ಸವಾರ ಅದಕ್ಕೆ ಕೈ ಹಾಕಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಅರಂತೋಡಿನ ಸೋಮಶೇಖರ ಪೈಕ ಅವರ ಮನೆಯನ್ನು ಪವರ್ ಮ್ಯಾನ್ ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದಾರೆ‌.ಜೂ.1ರಂದು ರಾತ್ರಿ ಪವರ್ ಮ್ಯಾನ್ ಮಹಂತೇಶ್ ಬೈಕ್ ಅಂಗಳದಲ್ಲಿ ನಿಲ್ಲಿಸಿ ಮಲಗಿದ್ದರು.ಬೆಳಿಗ್ಗೆ ಎದ್ದು ಬೈಕ್ ಹತ್ತಿರ ಹೋಗಿ ಹೆಲ್ಮೆಟ್ ನೋಡಿ ಕೈ ಹಾಕಿದ್ದಾಗ ಅದರಲ್ಲಿ ಹಾ ವೊಂದು ಮಲಗಿಕೊಂಡಿತು‌.ಆದರೆ ಯಾವುದೇ ಅಪಾಯವಾಗದೆ ಮಹಂತೇಶ್ ಪಾರಾಗಿದ್ದಾರೆ.

ಅರಂತೋಡು : ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಬೆಚ್ಚಗೆ ಮಲಗಿದ್ದ ಹಾವು ! Read More »

ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಸಂಜೆ ವೇಳೆ ದಿಢೀರನೆ ಆರಂಭವಾದ ಭಾರೀ ಮಳೆಗೆ ಇಡೀ ನಗರವೇ ಕಂಗೆಟ್ಟಿದೆ. ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿದ್ದು, ಕಚೇರಿಗಳಿಂದ ಮನೆಗೆ ಮರಳುತ್ತಿದ್ದ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಯಿತು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಳೆಯ ಅಬ್ಬರಕ್ಕೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ Read More »

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಜಾಕೆ ಸದಾನಂದ-ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆ

ಸುಳ್ಯ: ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ಜಾಕೆ ಸದಾನಂದ, ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆಯಾದರು.ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಅಧ್ಯಕ್ಷ ಜಾಕೆ ಸದಾನಂದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.ಖಜಾಂಜಿಯಾಗಿ ಶ್ರೀನಿವಾಸ ಭಟ್ ಡಿ., ಉಪಾಧ್ಯಕ್ಷರಾಗಿ ರಾಮಚಂದ್ರ ಬುಡ್ಲೆಗುತ್ತು, ಜತೆಕಾರ್ಯದರ್ಶಿಯಾಗಿ ಜಯರಾಮ ರೈ ಕೆ., ನಿರ್ದೇಶಕರುಗಳಾಗಿ ಎ.ದೇರಣ್ಣ ಗೌಡ, ರಾಮಚಂದ್ರ ಎಂ., ಶ್ಯಾಂಕುಮಾರ್ ಎಂ.ಎಸ್., ಮೋನಪ್ಪ ಕೆ.ಎಂ., ವಸಂತ ಕೆ.ಎಸ್., ಜನಾರ್ದನ ಗೌಡ ಬರೆಮೇಲು,

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಜಾಕೆ ಸದಾನಂದ-ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆ Read More »

error: Content is protected !!
Scroll to Top