Author name: Tejas

(ಕವನ) ಮನ ಬಯಸಿದೆ…..?!!

ಮನ ಬಯಸುತ್ತಿದೆ ಮತ್ತದೇ ಮಗುವಾಗಲುಎಲ್ಲ ನೋವುಗಳ ಮೀರಿ ಮನಬಿಚ್ಚಿ ನಗಲುಮತ್ತೊಮ್ಮೆ ನಾ ತೊದಲು ನುಡಿಯಲುಮಗದೊಮ್ಮೆ ನಾ ಬಿದ್ದು ಎದ್ದು ನಡೆಯಲು ಮನ ಬಯಸಿದೆ ಮತ್ತದೇ ಮಡಿಲನಿಂದುಸಂಬಂಧ ಸುಳಿಗಳಿಂದ ದೂರ ಸರಿದುತನ್ನದೇ ಲೋಕದಲ್ಲಿ ಮುಳುಗಿ ಬಂದುನಗುವಿನ ಮೋಹಕತೆಯ ಮೇಲೆ ಮಿಂದೇಳಲು ಮನ ಸಾರಿ ಸಾರಿ ಹೇಳುತ್ತಿದೆ ಕಂದಮ್ಮನಾಗಲುನೋವು ನಲಿವಿನ ವ್ಯತ್ಯಾಸ ತಿಳಿಯದೆಹಾವ-ಭಾವಗಳ ನಡುವೆ ವಿಚಲಿತನಾಗದೆಮೂಕ ಜೀವಿಗಳ ಹಾಗೆ ಮುಗ್ಧತೆಯಲಿ ಮುಳುಗಲು ಮತ್ತೆ ಮನ ಬಯಸಿದೆ ಪುಟಾಣಿಯಾಗಲುಸ್ನೇಹ ಭಾವಗಳ ಅರಿವಿಲ್ಲದೆ ಬದುಕಲುಯಾವುದರ ಚಿಂತೆಯಿಲ್ಲದೆ ಸುಖವಾಗಿರಲುತೊಟ್ಟಿಲಿನ ನಡುವಲ್ಲಿ ಅಮ್ಮನ ಕಂಗಳ ನೋಡುತ […]

(ಕವನ) ಮನ ಬಯಸಿದೆ…..?!! Read More »

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅಪಘಾತದಲ್ಲಿ ಸಾವು

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ರವರು ಮಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಅವರಿಗೆ 49 ವರ್ಷ ಪ್ರಾಯವಾಗಿತ್ತು. ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿಯಾಗಿರುವ ಭಾಸ್ಕ‌ರ್ ಅವರು ಗುರುವಾರ ಮಂಗಳೂರಿನಲ್ಲಿ ಬೈಕ್ ಚಲಾಯಿಸುತ್ತಿದ್ದ ಸಂದರ್ಭದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ತೀವ್ರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಶುಕ್ರವಾರ ಬೆಳಗ್ಗೆ ನಿಧನರಾದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅಪಘಾತದಲ್ಲಿ ಸಾವು Read More »

ಪಂಜ ಉಪವಲಯಾರಣ್ಯಾಧಿಕಾರಿಯಿಂದ ಹಿಂದು ಯುವತಿಯರ ಅವಹೇಳನ : ಪ್ರಕರಣ ದಾಖಲು

ಹಿಂದೂ ಯುವತಿಯರ ಬಗ್ಗೆ ಅವಹೇಳನ ಮಾಡಿರುವುದಾಗಿ ಪಂಜ ಉಪವಲಯಾರಣ್ಯಾಧಿಕಾರಿ ವಿರುದ್ದ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ. ಪಂಜ ಅರಣ್ಯ ಇಲಾಖೆ ಉಪವಲಯಾರಣ್ಯಾಧಿಕಾರಿ ಸಂಜೀವ ಪೂಜಾರಿಯವರು ಹಿಂದೂ ಯುವತಿಯರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವುದಾಗಿ ಸಚಿನ್ ವಳಲಂಬೆ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿರುವುದಾಗಿ ಮಾಹಿತಿ ದೊರೆತ್ತಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪಂಜ ಉಪವಲಯಾರಣ್ಯಾಧಿಕಾರಿಯಿಂದ ಹಿಂದು ಯುವತಿಯರ ಅವಹೇಳನ : ಪ್ರಕರಣ ದಾಖಲು Read More »

ಶಬರಿಮಲೆ ಅಯ್ಯಪ್ಪ ದೇವಳಕ್ಕೆ ನೂತನ ಅರ್ಚಕರ ನೇಮಕ

ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಾಲಯದ ನೂತನ ಮುಖ್ಯ ಅರ್ಚಕರಾಗಿ (ಮೇಲ್‌ಶಾಂತಿ) ಅರುಣ್ ಕುಮಾರ್ ನಂಬೂತಿರಿ ಆಯ್ಕೆಯಾಗಿದ್ದಾರೆ. ಇವರು ಕೊಲ್ಲಂನ ಶಕ್ತಿಕುಳಂಜರ ಮೂಲದವರು. ಕೋಝಿಕ್ಕೋಡ್ ತಿರುಮಂಗಲಂ ಇಲ್ಲಂ ವಾಸುದೇವನ್ ನಂಬೂತಿರಿ ಅವರು ಮಾಳಿಕಪ್ಪುರಂ ದೇವಸ್ಥಾನದ ಮುಖ್ಯ ಅರ್ಚಕರಾಗಿ ಆಯ್ಕೆಯಾದರು. ಶಬರಿಮಲೆ ಸನ್ನಿಧಾನದಲ್ಲಿ ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚೀಟಿ ಎತ್ತುವ ಮೂಲಕ ನೂತನ ಮುಖ್ಯ ಅರ್ಚಕ ಆಯ್ಕೆ ನಡೆಯಿತು

ಶಬರಿಮಲೆ ಅಯ್ಯಪ್ಪ ದೇವಳಕ್ಕೆ ನೂತನ ಅರ್ಚಕರ ನೇಮಕ Read More »

ಅರಂತೋಡು : ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗಡೆ ಬಿದ್ದು ಮೂವರಿಗೆ ಗಾಯ

ಅರಂತೋಡು : ಅರಂತೋಡು ಸಮೀಪದ ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಬಿದ್ದು ಮೂವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯ ತೇಜಕುಮಾರ್ ಅವರ ಮನೆಗೆ ಬರುತ್ತಿದ್ದಾಗ ತೂಗು ಸೇತುವೆಯವ ರೋಪ್ ತುಂಡಾಗಿ ಕುಸುಮಾಧರ ಉಳುವಾರು,ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಅರಮನೆಗಯ ಅವರು ಸೇತುವೆಯಿಂದ ಕೆಳಗಡೆ ಬಿದ್ದರು. ಪರಿಣಾಮವಾಗಿ ಕುಸುಮಾಧರ ಉಳುವಾರು ಅವರ ಕೈಗೆ ಗಂಭೀರ ಏಟು ತಗುಲಿದೆ.ತೇಜಕುಮಾರ ಅವರು ರೋಪ್ ನಲ್ಲಿ ನೇತಾಡಿಕೊಂಡು ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ.ಚಂದ್ರಶೇಖರ ಅವರು ಗಾಯಗೊಂಡಿದ್ದಾರೆ.ಮೂವರು

ಅರಂತೋಡು : ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗಡೆ ಬಿದ್ದು ಮೂವರಿಗೆ ಗಾಯ Read More »

ಸುಳ್ಯ ದಸರಾ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಜರುಗುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ 2024 ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ

ಸುಳ್ಯ ದಸರಾ ಶೋಭಾಯಾತ್ರೆಗೆ ಅದ್ದೂರಿ ಚಾಲನೆ Read More »

ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳ ಮೇಲಿನ ಆರೋಪ ಸಾಬಿತು

ಕೊಡಗು ಸಂಪಾಜೆಯ ಬಿಜೆಪಿ ನಾಯಕರಾಗಿದ್ದ ಕಳಗಿ ಬಾಲಚಂದ್ರರ ಹತ್ಯೆ ಪ್ರಕರಣದ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯ ತಿಳಿಸಿದೆ. ತಪ್ಪಿತಸ್ಥರಿಗೆ ಅ.19 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ಕೊಡಗಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಘೋಷಿಸಿದ್ದಾರೆ.ಸಂಪಾಜೆ ಗ್ರಾ.ಪಂ. ನ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಅವರನ್ನು ೨೦೧೯ ಮಾರ್ಚ್ ೧೯ ರಂದು ಓಮ್ಮಿ ಕಾರಿಗೆ ಲಾರಿಯಲ್ಲಿ ಗುದ್ದಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು

ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳ ಮೇಲಿನ ಆರೋಪ ಸಾಬಿತು Read More »

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಟ,ಬಜರಂಗದಳದಿಂದ ತಡೆ

ಪುತ್ತೂರು :ಇಲ್ಲಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಬೈಪಾಸ್‌ ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.ಅಕ್ರಮವಾಗಿ ಗೋವನ್ನು ಪುತ್ತೂರು ಬೈಪಾಸ್ ರಸ್ತೆಯ ಮೂಲಕ ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಸಾಗಿಸುತ್ತಿರುವುದರ ಕುರಿತು ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಆಟೋ ರಿಕ್ಷಾದಲ್ಲಿ ಮಹಿಳೆಯರು ಕೂಡ

ಆಟೋ ರಿಕ್ಷಾದಲ್ಲಿ ಅಕ್ರಮ ಗೋಸಾಗಟ,ಬಜರಂಗದಳದಿಂದ ತಡೆ Read More »

ವಯನಾಡು ಉಪಚುನಾವಣೆ- ಪ್ರಿಯಾಂಕಾ ಗಾಂಧಿ ಸ್ಪರ್ಧೆ

ವಯನಾಡ್ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಘೋಷಿಸಿದೆ.ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿಯಲಿದ್ದಾರೆಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ರಾಜೀನಾಮೆಯೊಂದಿಗೆ ವಯನಾಡ್ ಸಂಸದೀಯ ಸ್ಥಾನಕ್ಕೆ ಉಪಚುನಾವಣೆ ಅನಿವಾರ್ಯವಾಯಿತು. ಎರಡು ಸ್ಥಾನ ಗೆದ್ದ ನಂತರ ರಾಹುಲ್ ರಾಜೀನಾಮೆ ನೀಡಿದ್ದು ಗೊತ್ತೇ ಇದೆ. ಇದೀಗ ಆ ಸ್ಥಾನದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ.

ವಯನಾಡು ಉಪಚುನಾವಣೆ- ಪ್ರಿಯಾಂಕಾ ಗಾಂಧಿ ಸ್ಪರ್ಧೆ Read More »

ಸುಳ್ಯ ತಾಲೂಕಿನಲ್ಲಿ ಮೂರನೇ ದಿನವೂ ಹೃದಯಾಘಾತದಿಂದ ಮತ್ತೋರ್ವ ಸಾವು

ಪೋಟೋ ಗ್ರಾಪರ್ ಹರಿಹರ ಪಲ್ಲತ್ತಡ್ಕದಲ್ಲಿ ಸ್ಟುಡಿಯೋ ಹೊಂದಿದ್ದ ಹಾಗೂ ಗ್ರಾ.ಪಂ.ಸದಸ್ಯರಾಗಿದ್ದ ದಿವಾಕರ ಮುಂಡಾಜೆ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನಪತ್ರಿಕೆಗಳ ವಿತರಕರಾಗಿದ್ದ ಅವರು ಮಂಜಾನೆ ಅಂಗಡಿಗೆ ಕಾರಿನಲ್ಲಿ ಬರುತ್ತಿರುವ ವೇಳೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸುಳ್ಯ ತಾಲೂಕಿನಲ್ಲಿ ಮೂರನೇ ದಿನವೂ ಹೃದಯಾಘಾತದಿಂದ ಮತ್ತೋರ್ವ ಸಾವು Read More »

error: Content is protected !!
Scroll to Top