ಪಂಜ : ಶ್ರೀ ಪಂಚಲಿಂಗೇಶ್ಬರ ದೇವರ ಜಾತ್ರೋತ್ಸವಕ್ಕೆ ಧ್ವಜಾರೋಹಣ

ಪಂಜ : ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವಕ್ಕೆ ಧ್ವಜಾರೋಹಣ ಫೆ.1ರಂದು ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯ ಕ್ರಮಗಳು ನಡೆದು ಧ್ವಜಾರೋಹಣ ನಡೆಯಿತು.
ದೇವಳಕ್ಕೆ ಆಗಮಿಸಿದ ತಂತ್ರಿ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಧ್ವಜಾರೋಹಣ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು ದೇವಳದ ಆಡಳಿತಾಧಿಕಾರಿ, ತಹಶೀಲ್ದಾರ್ ಜಿ.ಮಂಜುನಾಥ, ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್, ಉಪತಹಶೀಲ್ದಾ‌ರ್ ಚಂದ್ರಕಾಂತ್ ಎಂ ಆರ್, ದೇವಳದ ವ್ಯವಸ್ಥಾಪನಾ ಮಾಜಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉತ್ಸವ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ರಜಿತ್ ಭಟ್ ಪಂಜಬೀಡು, ಬಾಲಕೃಷ್ಣ ಗೌಡ ಕುದ್ವ, ಸಂತೋಷ್ ರೈ ಪಲ್ಲತ್ತಡ್ಕ, ಕೇಶವ ಕುದ್ವ, ಸತ್ಯನಾರಾಯಣ ಭಟ್ ಕಾಯಂಬಾಡಿ, ತಿಮ್ಮಪ್ಪ ಗೌಡ ಪುತ್ಯ ಧರ್ಮಪಾಲ ಗೌಡ ಮರಕಡ ಕಾಚಿಲ, ತಿಮ್ಮಪ್ಪ ಗೌಡ ಪುತ್ಯ ಮಾಯಿಲಪ್ಪ ಗೌಡ ಎಣ್ಣೂರು, ಶರತ್‌ ಕುದ್ವ, ಮಹಾಲಿಂಗ ಸಂಪ, ಜಗದೀಶ್ ಮಠ, ಕುಮಾರ ಕಕ್ಯಾನ, ಶ್ರೀಮತಿ ಪವಿತ್ರ ಕುದ್ದ ಮಲ್ಲೆಟಿ, ಧರ್ಮಣ್ಣ ನಾಯ್ಕ ಗರಡಿ, ಪವನ ಪಲ್ಲತ್ತಡ್ಕ, ಕುಶಾಲಪ್ಪ ಗೌಡ ದೊಡ್ಡಮನೆ, ವಿವಿಧ ಸಮಿತಿಗಳ ಸಂಚಾಲಕರು,ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು, ಸದಸ್ಯರು. ಸಲಹಾ ಸಮಿತಿ ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ, ಗ್ರಾಮ ಪಂಚಾಯತ್ ಸದಸ್ಯರು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ನಿರ್ದೇಶಕರು, ತಾಲೂಕ ಪಂಚಾಯತ್‌ ಮಾಜಿ ಅಧ್ಯಕ್ಷೆ ಸುವರ್ಣಿನಿ ಎನ್ ಎಸ್,ಮೊದಲಾದವರು ಉಪಸ್ಥಿತರಿದ್ದರು.



































































































ದೇವಳದಲ್ಲಿ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ ಮಿತ್ರರು ಪಂಜ ಇದರ ಆಶ್ರಯದಲ್ಲಿ ಸಸಿ ಹಿತ್ತು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ತು ಮಂಗಳೂರು ಇವರಿಂದ ಯಕ್ಷಗಾನ ಬಯಲಾಟ ನಡೆಯಿತು.

Leave a Comment

Your email address will not be published. Required fields are marked *

error: Content is protected !!
Scroll to Top