Author name: Tejas

ತೊಡಿಕಾನ ದೇವಳದಲ್ಲಿ ನಾಳೆ ಆಶ್ಲೇಷ ಬಲಿ ಪೂಜೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ‌ ಡಿ .9ರಂದು ಸಂಜೆ ಆಶ್ಲೇಷ ಬಲಿ ಪೂಜೆ ನಡೆಯಲಿದೆ.ಪೂಜೆ ಮಾಡಿಸುವ ಭಕ್ತಾಧಿಗಳು ಸಾಯಂಕಾಲ ಗಂಟೆ 5.30ರ ಒಳಗಾಗಿ ಶ್ರೀ ದೇವಳದ ಕಛೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತೊಡಿಕಾನ ದೇವಳದಲ್ಲಿ ನಾಳೆ ಆಶ್ಲೇಷ ಬಲಿ ಪೂಜೆ Read More »

ಬೆಳ್ಳಾರೆ : ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಶುಭಾರಂಭ

ಬೆಳ್ಳಾರೆಯ ಬೀಡು ಎಂಬಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಡಿ.08 ರಂದು ಶುಭಾರಂಭಗೊಂಡಿತು.ಬೆಳಿಗ್ಗೆ ಗಣಹೋಮ ನಡೆಯಿತು.ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿದ್ದರು. ಮಾಲಕರಾದ ಪದ್ಮನಾಭ ಬೀಡು ಮತ್ತು ಸುಧೀರ್ ರವರು ಅತಿಥಿಗಳನ್ನು ಸ್ವಾಗತಿಸಿದರು.ಇಲ್ಲಿ ಎಲ್ಲಾ ತರದ ಹೂವಿನ ಗಿಡಗಳು,ಹಣ್ಣಿನ ಗಿಡಗಳು,ಮನೆ ಅಲಂಕಾರಿಕ ಗಿಡಗಳು,ವಿವಿಧ ಜಾತಿಯ ಅಡಿಕೆ ಗಿಡಗಳು,ತೆಂಗಿನ ಗಿಡಗಳು, ಕಾಫಿ ಗಿಡಗಳು,ಕಾಳುಮೆಣಸು ಬಳ್ಳಿಗಳು ಹಾಗೂ ಇನ್ನಿತರ ಗಿಡಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.ಎಂದು ಮಾಲಕರು ತಿಳಿಸಿದ್ದಾರೆ.

ಬೆಳ್ಳಾರೆ : ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಶುಭಾರಂಭ Read More »

ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ಕೋಡಿನಲ್ಲಿರುವ ಕಟ್ಟಡವೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ವರದಿಯಾಗಿದೆ.ಶವವನ್ನು‌ ಶೇಖಪಟ್ಟಿ ನಿವಾಸಿ ದಿ. ಕೃಷ್ಣ ಬೆಳ್ಳಪ್ಪಾಡ ರವರ ಪುತ್ರ ರಾಜೇಶ್ ಶೇಖಪಟ್ಟಿಯವರದು ಎಂದು ಗುರುತಿಸಲಾಗಿದೆ.ಕೆಲ ವರ್ಷದ ಹಿಂದೆ ಮಂಗಳ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಾರ್ ಬಂದ್ ಆದ ನಂತರ ಅದೇ ಕಟ್ಟಡದಲ್ಲಿ ವಾಸವಾಗಿದ್ದು ಕಳೆದ ತಡ ರಾತ್ರಿ ರೂಮಿನಲ್ಲಿ ಬಟ್ಟೆಯನ್ನು ಕುತ್ತಿಗೆಗೆ ಬಿಗಿದು ಪಕ್ಕಾಸಿಗೆ ಹಾಕಿಕೊಂಡು ಆತ್ಮ ಹತ್ಯೆ

ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಟಿ.ಎಂ ಶಹೀದ್ ಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಟಿ. ಎಂ ಶಾಹೀದ್ ತೆಕ್ಕಿಲ್ ಅಧ್ಯಕ್ಷರು ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಅವರು ಇಂದು ಪುತ್ತೂರಿನ ಪುರಭವನದಲ್ಲಿ ಕರ್ನಾಟಕ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿ ( ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ) ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡೆಮಿಯ ಚಮ್ಮನ (ಗೌರವ ಪುರಸ್ಕಾರ ) ಸ್ವೀಕರಿಸಿದರು ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ

ಟಿ.ಎಂ ಶಹೀದ್ ಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ Read More »

ಕರ್ನಾಟಕ ತ್ರೋಬಾಲ್ ತಂಡವನ್ನು ಪ್ರತಿನಿಧಿಸಿದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಿಂತನ

ಮಹಾರಾಷ್ಟ್ರ ದ ಬಾದಲ್ ನಲ್ಲಿ ನಡೆದ 35ನೇ ರಾಷ್ಟ್ರೀಯ ಬಾಲಕಿಯರ ಜೂನಿಯರ್ ಥ್ರೋಬಾಲ್ ಪಂದ್ಯಾಟ ದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಕಾಲೇಜಿನ ದ್ವಿತೀಯ ಪಿ ಯು ಸಿ ವಿದ್ಯಾರ್ಥಿನಿ ಚಿಂತನ ಪಿ ಭಾಗವಹಿಸಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದು ಕೊಂಡಿರುತ್ತದೆ.

ಕರ್ನಾಟಕ ತ್ರೋಬಾಲ್ ತಂಡವನ್ನು ಪ್ರತಿನಿಧಿಸಿದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಿಂತನ Read More »

ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮರಾಟಿ ಧಾರ್ಮಿಕ ಚಿಂತನಾ ಸಮಿತಿ ಇದರ ವತಿಯಿಂದ ರಚನೆಗೊಂಡ ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ವಾರ್ಷಿಕೋತ್ಸವ ಡಿ.7ರಂದು ಅಂಬೆಟಡ್ಕದ ಗಿರಿದರ್ಶನಿ ಸಭಾಭವನದಲ್ಲಿ ನಡೆಯಿತು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ್ ಸಮಾರಂಭವನ್ನು ಉದ್ಘಾಟಿಸಿಮಾತನಾಡಿ’ಮರಾಟಿ ಸಮುದಾಯದ ಆಚಾರ ವಿಚಾರ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಳ್ಳುವುದರ ಜೊತೆಗೆ ಆಚಾರ, ವಿಚಾರ‌‌ ಸಂಪ್ರದಾಯಗಳ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ ಆಚರಣೆಯ ವಿಧಿ ವಿಧಾನಗಳು ಇತರ ಪ್ರಮುಖ ಆಚರಣೆಗಳು ಎಂಬ ಪುಸ್ತಕ ಬಿಡುಗಡೆ Read More »

ಅಮರ ಸಂಘಟನಾ ಸಮಿತಿ ವತಿಯಿಂದ ಎಲಿಮಲೆ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಳ್ಯ. ಡಿಸೆಂಬರ್ 07 ರಂದು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ವತಿಯಿಂದ ಎಲಿಮಲೆ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇತನ್ ಎಲಿಮಲೆ, ಕಾರ್ಯದರ್ಶಿ ಅಮರ ಸಂಘಟನಾ ಸಮಿತಿ ಸುಳ್ಯ ಇವರು ವಹಿಸಿದ್ದರುಕೃಷ್ಣಯ್ಯ ಮೂಲೆತೋಟ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಡಿ ಟಿ ದಯಾನಂದ ಕಂದಾಯ ಇಲಾಖೆ ಪುತ್ತೂರು, ಹರಿಪ್ರಸಾದ್ ಎಲಿಮಲೆ ಪಿಡಬ್ಲ್ಯೂಡಿ ಕಾಂಟ್ರಾಕ್ಟ್ ರ್ , ಪ್ರೇಮಾ ಕೇರ ಸದಸ್ಯರು ಗ್ರಾಮ ಪಂಚಾಯತ್ ದೇವಚಳ್ಳ

ಅಮರ ಸಂಘಟನಾ ಸಮಿತಿ ವತಿಯಿಂದ ಎಲಿಮಲೆ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ Read More »

ಕಡೆಪಾಲ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಡಿ.15 ಕ್ಕೆ ಹರಕೆಯ ಕೋಲ ಮತ್ತು ಸಾರ್ವಜನಿಕ ಅಗೆಲು ಸೇವೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ (ರಿ) ಕಡೆಪಾಲ ಇಲ್ಲಿ ಡಿಸೆಂಬರ್ 15ರ ಸಂಕ್ರಮಣದಂದು ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ಮತ್ತು ಸಾರ್ವಜನಿಕ ಅಗೆಲು ಸೇವೆ ನಡೆಯಲಿದೆ. ಸಂಕ್ರಮಣ ದಿನದಂದು ಬೆಳಿಗ್ಗೆ ಗಂಟೆ 11ಕ್ಕೆ ಗಂಟೆಗೆ ಗುಳಿಗ ದೈವಕ್ಕೆ ಪಣಿವಾರ ಸೇವೆ, ಬೆಳಿಗ್ಗೆ ಗಂಟೆ 11.30ಕ್ಕೆ ಮೊಗೇರ್ಕಳ ದೈವಕ್ಕೆ ಮಂಜ ಸೇವೆ ನಡೆಯಲಿದೆ. ಬಳಿಕ ಸಂಜೆ ಗಂಟೆ 4ಕ್ಕೆ ಸ್ವಾಮಿ ಕೊರಗಜ್ಜ ದೈವಕ್ಕೆ ಎಣ್ಣೆ ಬೂಲ್ಯ ಕೊಟ್ಟು, ಸರಿಯಾಗಿ ಸಂಜೆ ಗಂಟೆ

ಕಡೆಪಾಲ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಡಿ.15 ಕ್ಕೆ ಹರಕೆಯ ಕೋಲ ಮತ್ತು ಸಾರ್ವಜನಿಕ ಅಗೆಲು ಸೇವೆ Read More »

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನ 46 ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಕೆ.ಆರ್ ಗಂಗಾಧರ್ ಅವರಿಗೆ ಸನ್ಮಾನ ಸಮಾರಂಭ

ಅರಂತೋಡು:ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ 46ನೇ ವರ್ಷದ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಸಂಸ್ಥೆಯ ಐಶ್ವರ್ಯ ಮದುವೆ ಗದ್ದೆ ಸಭಾಭವನದಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಅಧ್ಯಕ್ಷರಾದ ಡಾ. ಚಿದಾನಂದ .ಕೆ.ವಿ. ಕಾರ್ಯಕ್ರಮ ಉದ್ಘಾಟಿಸಿ, ಕರ್ನಾಟಕ ಅರೆ ಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾದ ವಿಶ್ರಾಂತ ಪ್ರಾಂಶುಪಾಲರಾದಕೆ.ಆರ್.ಗಂಗಾಧರ್ ಅವರನ್ನು ಸನ್ಮಾನಿಸಿ, ಅಭಿನಂದನೆಯ ನುಡಿಗಳನ್ನು ಸಲ್ಲಿಸಿದರು.ಸರ್ಕಾರಿ ಪದವಿ ಕಾಲೇಜು , ಪುತ್ತೂರು ಪ್ರಾಂಶುಪಾಲರಾದ ಪ್ರೊಫೆಸರ್ ಸುಬ್ಬಪ್ಪ ಕೈಕಂಬ,ದಿಕ್ಸೂಚಿ ಭಾಷಣ ಮಾಡಿದರು .

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನ 46 ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಕೆ.ಆರ್ ಗಂಗಾಧರ್ ಅವರಿಗೆ ಸನ್ಮಾನ ಸಮಾರಂಭ Read More »

ಹಾಸ್ಟೆಲ್‌ನಲ್ಲಿ ಗುಂಡಿನ ದಾಳಿ 11 ಸಾವು, 14 ಗಾಯ

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಅಟ್ಟೆರಿವಿಲ್ಲೆಯ ಸೌಲ್‌ವಿಲ್ಲೆ ಹಾಸ್ಟೆಲ್‌ನಲ್ಲಿ ಇಂದು ಭೀಕರ ಗುಂಡಿನ ದಾಳಿ ನಡೆದಿದ್ದು, ಮೂವರು ಮಕ್ಕಳು ಸೇರಿ 11 ಜನರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪೊಲೀಸ್‌ ಸೇವೆ (SAPS) ಪ್ರಕಾರ, ಅಕ್ರಮ ಶೆಬೀನ್ ಒಳಗೆ ನಡೆದ ಈ ದುರಂತದಲ್ಲಿ 3, 12 ಮತ್ತು 16 ವರ್ಷದ ಮೂವರು ಮಕ್ಕಳೂ ಸೇರಿ ಹಲವರು ಬಲಿಯಾಗಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಜೀವನ್‌ರಕ್ಷಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ದೇಶದಲ್ಲಿ ಆತಂಕ ಮೂಡಿಸಿದೆ.

ಹಾಸ್ಟೆಲ್‌ನಲ್ಲಿ ಗುಂಡಿನ ದಾಳಿ 11 ಸಾವು, 14 ಗಾಯ Read More »

error: Content is protected !!
Scroll to Top