Author name: Tejas

ಮಾಜಿ‌ ಶಾಸಕ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜು ನಿಧನ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆಆಗಮಿಸಿದ್ದ ಬೆಂಗಳೂರಿನ ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್ (67) ಅವರು ಸೋಮವಾರ ಮೈಸೂರಿನಲ್ಲಿ ಹ್ರದಯಘಾತದಿಂದ ನಿಧನರಾದರು.ಸೋಮವಾರ ಅವರು ಕುಟುಂಬ ಸದಸ್ಯರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ‌ ಶಾಸಕ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜು ನಿಧನ Read More »

ಶೀಘ್ರ ಇಂದಿರಾ ಫುಡ್ ಕಿಟ್ ವಿತರಣೆ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಹಾರ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಇಂದಿರಾ ಫುಡ್ ಕಿಟ್ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿದರು. ಪ್ರತಿ ತಿಂಗಳು 10ನೇ ತಾರೀಖಿನಂದು ಇಂದಿರಾ ಫುಡ್ ಕಿಟ್ ವಿತರಿಸುವಂತೆ ಸೂಚನೆ ನೀಡಿದರು. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಸಮಗ್ರ ಪೋಷಣೆ ಮತ್ತು ಆಹಾರ ಪದ್ಧತಿ ಉಪಕ್ರಮದ ಅಡಿ ಇಂದಿರಾ ಕಿಟ್ ವಿತರಿಸಲು ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಶೀಘ್ರ ಇಂದಿರಾ ಫುಡ್ ಕಿಟ್ ವಿತರಣೆ: ಸಿಎಂ ಸಿದ್ದರಾಮಯ್ಯ Read More »

ಕಾಣೆಯಾದ ಮಗುವನ್ನು‌ ಪತ್ತೆ ಹಚ್ಚಿದ ಶ್ವಾನ

ಕಾಫಿ ಕೊಯ್ಯಲು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ದಂಪತಿಯ ತೋಟದಲ್ಲಿ ಆಟವಾಡುತ್ತಿದ್ದ 2 ವರ್ಷದ ಸುಕನ್ಯಾ ಹೆಸರಿನ ಮಗು ಸಂಜೆ ವೇಳೆ ಕಣ್ಮರೆಯಾಗಿ ಮಗುವನ್ನು‌ ಶ್ವಾನ ಪತ್ತೆ ಹಚ್ಚಿದ ಘಟನೆ ಕೊಡಗು ಜಿಲ್ಲೆಯಿಂದ ವರದಿಯಾಗಿದೆ.ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ವಾಸವಿರುವ ಸುನಿಲ್-ನಾಗಿಣಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಜೊತೆಗೂಡಿಸಿಕೊಂಡು ತೋಟಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಹೊರಡುವಾಗ ಸುಕನ್ಯಾ ಕಾಣೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಅವರು ತೋಟದ ಇಂಚಿಂಚೂ ಶೋಧಿಸಿದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ

ಕಾಣೆಯಾದ ಮಗುವನ್ನು‌ ಪತ್ತೆ ಹಚ್ಚಿದ ಶ್ವಾನ Read More »

ರೈತರಿಗೆ ಬೆಳೆ ವಿಮೆ ಶೀಘ್ರ ಪಾವತಿಗೆ ಸಂಸದ ಕ್ಯಾ. ಚೌಟ ಒತ್ತಾಯ; ಇಲಾಖಾಧಿಕಾರಿಗಳಿಗೆ ತುರ್ತು ಸಭೆ

ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ(ಆರ್‌ಡಬ್ಲ್ಯುಬಿಸಿಐಎಸ್‌)ಯಡಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಮಂದಿ ಅರ್ಹ ರೈತರಿಗೆ ಈ ಬಾರಿ ವಿಮಾ ಹಣ ಪಾವತಿ ವಿಳಂಬವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ನಡೆಸಿ, ತತಕ್ಷಣವೇ ಬೆಳೆ ವಿಮಾ ಮೊತ್ತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಿಮಾ ಕಂಪೆನಿಗಳು ಅರ್ಹ ರೈತರಿಗೆ ಆರ್‌ಡಬ್ಲ್ಯುಬಿಸಿಐಎಸ್‌ ಯೋಜನೆಯಡಿ ವಿಮಾ ಮೊತ್ತ ಪಾವತಿಸುವುದಕ್ಕೆ ಸಾಕಷ್ಟು ವಿಳಂಬವಾಗಿರುವುದನ್ನು ಗಂಭೀರವಾಗಿ

ರೈತರಿಗೆ ಬೆಳೆ ವಿಮೆ ಶೀಘ್ರ ಪಾವತಿಗೆ ಸಂಸದ ಕ್ಯಾ. ಚೌಟ ಒತ್ತಾಯ; ಇಲಾಖಾಧಿಕಾರಿಗಳಿಗೆ ತುರ್ತು ಸಭೆ Read More »

ಸುಳ್ಯ : ನಗರ ಕಾಂಗ್ರೆಸ್ ಸಭೆ

ಸುಳ್ಯ ನಗರ ಕಾಂಗ್ರೆಸ್ ನ ವಾರ್ಡ್ ಸಮಿತಿಗಳ ಪುನರ್ ರಚನೆ ಮತ್ತು ವಾರ್ಡ್ ಉಸ್ತುವಾರಿಗಳ ನೇಮಕಾತಿ ಕುರಿತು ನಗರ ಕಾಂಗ್ರೆಸ್ ಸಮಿತಿ ಸೆ ಭಾನುವಾರ ಸಂಜೆ ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಸುಳ್ಯ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಶಶಿಧರ ಎಂ ಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ವಾರ್ಡ್ ಸಂಘಟನೆಗಳ ಬಲವರ್ಧನೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುವ ಕುರಿತಾಗಿ ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಮುಂದೆ ಬರಲಿರುವ ನಗರ ಪಂಚಾಯತ್

ಸುಳ್ಯ : ನಗರ ಕಾಂಗ್ರೆಸ್ ಸಭೆ Read More »

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು : ಸಿಎಂ

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ ಇದ್ದು ಇದನ್ನು ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ‘2024ನೇ ಸಾಲಿನ ಆರ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಜಂಬರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾಗಮಂಡಲದಲ್ಲಿ ನಾಡಗೌಡ ಸಮುದಾಯ ಭವನಕ್ಕೆ ಹಿಂದೆ 1 ಕೋ.ರೂ.

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು : ಸಿಎಂ Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗೋಲ್ಡ್ ಎಕ್ಸ್ ಚೇಂಜ್ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ

ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಗೋಲ್ಡ್ ಎಕ್ಸ್ ಚೇಂಜ್ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಚಿನ್ನ ಎಕ್ಸ್ ಚೇಂಜ್ ಗ್ರಾಹಕರು ಮುಗಿಬಿದ್ದ ಕ್ಷಣ ಕಂಡುಬಂದಿತು.ಸುಳ್ಯದ ಗ್ರಾಹಕರಿಗೋಸ್ಕರ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ 24 ಡಿಸೆಂಬರ್ 4 ರ ವರೆಗೆ ಗೋಲ್ಡನ್ ಎಕ್ಸ್ ಚೇಂಜ್ ಮೇಳ ನಡೆಯುತ್ತಿದ್ದು , ಮೊದಲ ದಿನವೇ ಸುಳ್ಯ ಸೇರಿದಂತೆ ವಿವಿಧ ತಾಲೂಕಿನ ಗ್ರಾಹಕರು ಜ್ಯುವೆಲ್ಸ್

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗೋಲ್ಡ್ ಎಕ್ಸ್ ಚೇಂಜ್ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ Read More »

ನಿಶಾಂತ್ ಭಾರತೀಯ ಸೇನೆಗೆ ಆಯ್ಕೆ

ಸುಳ್ಯ ಜಟ್ಟಿಪಳ್ಳ ನಿವಾಸಿ ನಿಶಾಂತ್ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಕಳೆದ ಆರು ತಿಂಗಳು ಕಾಲ ಮಹಾರಾಷ್ಟ್ರದಲ್ಲಿ ತರಬೇತಿಯನ್ನು ಮುಗಿಸಿ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಲು ದೆಹಲಿಯ ICBPOB ಗೆ ತೆರಳಿದ್ದಾರೆ.ಸುಳ್ಯ ಜಟ್ಟಿಪಳ್ಳದ ಕೃಷ್ಣ ಜೆ. ಮತ್ತು ಉಮಾವತಿ ದಂಪತಿಗಳ ಪುತ್ರರಾದ ನಿಶಾಂತ್ ಪತ್ನಿ ಧನುಶ್ರೀ ಹಾಗೂ ಮಗ ಧಿಯಾಂಶ್ ರ ಜೊತೆ ಜಟ್ಟಿಪಳ್ಳದಲ್ಲಿ ನೆಲೆಸಿದ್ದಾರೆ.ಇವರು ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲೆ, ಪ್ರೌಢ ವಿದ್ಯಾಭ್ಯಾಸವನ್ನು ದುಗಲಡ್ಕ ಹೈಸ್ಕೂಲ್ ನಲ್ಲಿ, ಪಿ.ಯು.ಸಿ.ಯನ್ನು ಸುಳ್ಯ ಜೂನಿಯ‌ರ್ ಕಾಲೇಜ್ ನಲ್ಲಿ,

ನಿಶಾಂತ್ ಭಾರತೀಯ ಸೇನೆಗೆ ಆಯ್ಕೆ Read More »

ಭೀಕರ ಅಪಘಾತ: ಇಬ್ಬರ ದುರ್ಮರಣ, 12 ಮಂದಿ ಗಂಭೀರ!

ಬೀದ‌ರ್ ಹೆದ್ದಾರಿ-65ರ ಬಸವಕಲ್ಯಾಣ ತಾಲೂಕಿನ ಮುಡಬಿ ಕ್ರಾಸ್ ಬಳಿ ಟಾಟಾ ಮ್ಯಾಜಿಕ್ ವಾಹನ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕ ಸಚಿನ್‌ (25) ಮತ್ತು ಮಹಾರಾಷ್ಟ್ರದ ವಿಲಾಸ ಪಾಂಚಾಳ (55) ಮೃತಪಟ್ಟಿದ್ದಾರೆ. ರಾಜೇಶ್ವರದಿಂದ ಬಸವಕಲ್ಯಾಣದ ದರ್ಗಾಕ್ಕೆ ತೆರಳುತ್ತಿದ್ದ ಸಂಬಂಧಿಕರಿದ್ದ ಟಾಟಾ ಮ್ಯಾಜಿಕ್ ವಾಹನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಭೀಕರ ಅಪಘಾತ: ಇಬ್ಬರ ದುರ್ಮರಣ, 12 ಮಂದಿ ಗಂಭೀರ! Read More »

ಭಗವದ್ಗೀತೆ ನಮ್ಮ ಜೀವನದ ಮೌಲ್ಯವನ್ನು ತಿಳಿಸುತ್ತದೆ : ಡಾ.ಹರ್ಷವರ್ಧನ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ‌ನ.30ರಂದು ಗೀತಾಜಯಂತಿ ಆಚರಣೆ ಮತ್ತು ಆಶ್ರಮದ ಸ್ವಾಮಿ‌ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 231 ಕೃತಿ ಮಾಲೆ ಮಾತಸ್ತು ಸಕಲ ಜಗತ: ಬಿಡುಗಡೆ ಕಾರ್ಯಕ್ರಮ ನಡೆಯಿತು.ಆಶ್ರಮದ ಟ್ರಸ್ಟಿ ಪ್ರಣವಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಹರ್ಷವರ್ಧನ ಪುಸ್ತಕ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು ಭಗವದ್ಗೀತೆ ನಮ್ಮ ಜೀವನದ ಮೌಲ್ಯವನ್ನು ತಿಳಿಸುತ್ತದೆ.ಇದರಲ್ಲಿ ಜೀವನ ನಡೆಸಲು ಬೇಕಾದ ಉಪದೇಶಗಳು ಇವೆ.ಇದನ್ನು‌ ನಾವೇಲ್ಲರೂ ಜೀವನದಲ್ಲಿ‌ ರೂಡಿಸಿಕೊಂಡು ಜೀವನ

ಭಗವದ್ಗೀತೆ ನಮ್ಮ ಜೀವನದ ಮೌಲ್ಯವನ್ನು ತಿಳಿಸುತ್ತದೆ : ಡಾ.ಹರ್ಷವರ್ಧನ Read More »

error: Content is protected !!
Scroll to Top