Author name: Tejas

ಅಫ್ಘಾನಿಸ್ತಾನ ಪಾಕಿಸ್ತಾನದ ಸೈನಿಕ ನೆಲೆಗಳ ಮೇಲೆ ಭಾರೀ ದಾಳಿ

, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಪಾಕಿಸ್ತಾನದ ಸೈನಿಕ ನೆಲೆಗಳ ಮೇಲೆ ಭಾರೀ ದಾಳಿಯನ್ನು ಆರಂಭಿಸಿರುವುದಾಗಿ ತಿಳಿಸಿದೆ.ಇದರಿಂದ ಅಫ್ಘಾನಿಸ್ತಾನ ಹಾಗೂ ಪಾಕಿಸ್ರಾನ ನಡುವಿನ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ.ಕಳೆದ ವಾರ ಪಾಕಿಸ್ತಾನ ನಡೆಸಿದ ವಾಯು ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆದಿರುವುದಾಗಿ ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ.ತಾಲಿಬಾನ್ ಸರ್ಕಾರದ ವಕ್ತಾರ ಜೂಬಿಹುಲಾಲ್ ಮುಜಾಹಿದ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಪಾಕಿಸ್ತಾನ ಸೇನೆಯ ಪ್ರಚೋದನೆಗಳು ಹಾಗೂ ಗಡಿ ಉಲ್ಲಂಘನೆಗಳಿಗೆ ಪ್ರತಿಯಾಗಿ ದೊಡ್ಡ ಮಟ್ಟದ ಸೈನಿಕ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಗಡಿಯಾದ್ಯಂತ […]

ಅಫ್ಘಾನಿಸ್ತಾನ ಪಾಕಿಸ್ತಾನದ ಸೈನಿಕ ನೆಲೆಗಳ ಮೇಲೆ ಭಾರೀ ದಾಳಿ Read More »

ಅಡ್ತಲೆ : ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಬಗ್ಗೆ ಮಾಹಿತಿ ಕಾರ್ಯಾಗಾರ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕರ್ನಾಟಕ ಹಾಲು ಒಕ್ಕೂಟದ ಸಹಯೋಗದಲ್ಲಿ ಅಡ್ತಲೆಯಲ್ಲಿ ನೂತನ ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಕುರಿತು ಮಾಹಿತಿ ಕಾರ್ಯಾಗಾರವು ಸಂಘದ ಅಧ್ಯಕ್ಷರಾದ ಮೋಹನ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಮನಮೋಹನ ಮೇಲಡ್ತಲೆ ಇವರ ಮನೆಯಲ್ಲಿ ನಡೆಯಿತು.ಅರಂತೋಡು ಹಾಲು ಉತ್ಪಾದಕರ ಸಂಘದ ನೇತೃತ್ವದಲ್ಲಿ ನೂತನ ಹಾಲು ಸಂಗ್ರಹಣಾ ಕೇಂದ್ರವನ್ನು ಅಡ್ತಲೆಯಲ್ಲಿ ಮಾರ್ಚ್ 1 ರಿಂದ ಆರಂಭಿಸಲಾಗುವುದೆಂದು ಅಧ್ಯಕ್ಷರು ತಿಳಿಸಿದರು.ಕರ್ನಾಟಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಸತೀಶ್

ಅಡ್ತಲೆ : ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಬಗ್ಗೆ ಮಾಹಿತಿ ಕಾರ್ಯಾಗಾರ Read More »

ಫೆ.28ರ ತನಕ ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ

ಕೇರಳದ ಗಡಿಯಲ್ಲಿ ತಲುಪಿರುವ ಸೈಕ್ಲೋನಿಕ್ ಸುಳಿಯು ನಗರದೆ ಮಂದಿಗೂ ಎಚ್ಚರಿಕೆಯ ಗಂಟೆಯಾಗಿದೆ. ಫೆಬ್ರವರಿ 28ರವರೆಗೆ ಕರಾವಳಿಯ ಆಕಾಶದಲ್ಲಿ ಮೋಡಗಳು ಕಣ್ಣಮುಚ್ಚಾಲೆ ಆಡಲಿವೆ. ಮಂಗಳೂರು, ಉಳ್ಳಾಲ, ಬಂಟ್ವಾಳ ಸೇರಿದಂತೆ ದ.ಕ ಜಿಲ್ಲೆಯ ಸುತ್ತಮುತ್ತಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದ ಅಂಚಿನಲ್ಲಿ ಗಾಳಿಯ ವೇಗ ಗಂಟೆಗೆ 60 ಕಿಲೋಮೀಟರ್ ಮುಟ್ಟಬಹುದು. ಸಮುದ್ರ ರಾಜ ಅಂದುಕೊಂಡಷ್ಟು ಶಾಂತವಾಗಿಲ್ಲ. ಮಂಗಳೂರಿನ ಸುತ್ತಮುತ್ತ ಮಿಂಚಿನ ಅಬ್ಬರ ಜೋರಾಗಿರಲಿದೆ. ಮಳೆಗಿಂತಲೂ ಅಪಾಯಕಾರಿಯಾಗಿ ಸಿಡಿಲಿನ ಹೊಡೆತ ಜೋರಾಗುವ ಸಾಧ್ಯತೆಯಿದೆ. ಸಮುದ್ರದಂಚಿನಲ್ಲಿ ಗಾಳಿಯ

ಫೆ.28ರ ತನಕ ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ Read More »

ಭಾರತಕ್ಕೆ ಜಿಂಬಾಬೈ ವಿರುದ್ಧ ಭಾರೀ ಅಂತರದ ಗೆಲುವು

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬೈ ವಿರುದ್ಧ ಭಾರತ ತಂಡ ಬ್ಯಾಟಿಂಗ್‌ನಲ್ಲಿ 257 ರನ್‌ಗಳ ಬೃಹತ್ ಮೊತ್ತ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಜಿಂಬಾಬೈ ತಂಡ 20 ಓವರ್‌ಗೆ 184 ರನ್ ಗಳಿಸಿ ಸೋಲು ಕಂಡಿದೆ. ಭಾರತದ ಪರ ಅಭಿಷೇಕ್ ಶರ್ಮಾ (55), ಹಾರ್ದಿಕ್ ಪಾಂಡ್ಯ (50), ತಿಲಕ್ ವರ್ಮಾ (44) ಮತ್ತು ಇಶಾನ್ ಕಿಶನ್ (38) ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತಕ್ಕೆ ಜಿಂಬಾಬೈ ವಿರುದ್ಧ ಭಾರೀ ಅಂತರದ ಗೆಲುವು Read More »

ಸುಳ್ಯ ತಾಲೂಕು ಜನಜಾಗ್ರತಿ ವೇದಿಕೆ ಪದಾಧಿಕಾರಿಗಳ ಸಭೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಸುಳ್ಯ ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯು ಸುಳ್ಯ ಯೋಜನ ಕಚೇರಿ ಸಭಾಂಗಣದಲ್ಲಿತಾಲೂಕು ಅಧ್ಯಕ್ಷರಾದ ಶ್ರೀ ಲೋಕನಾಥ್ ಅಮೆಚೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಸುಳ್ಯ ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ ವಾರ್ಷಿಕ

ಸುಳ್ಯ ತಾಲೂಕು ಜನಜಾಗ್ರತಿ ವೇದಿಕೆ ಪದಾಧಿಕಾರಿಗಳ ಸಭೆ Read More »

ಸಂಪಾಜೆ : ಗಾಳಿ ಮಳೆಗೆ ಮನೆ ಧ್ವಂಸ,ಸ್ಥಳಕ್ಕೆ ಭೇಟಿ ನೀಡದ ಮೇಲಾಧಿಕಾರಿಗಳು

ಫೆ.25ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಪೆಲ್ತಡ್ಕ ವಿಧವೆ ಮಹಿಳೆ ಚಂದ್ರಾವತಿ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಹೊರತು ಪಡಿಸಿ, ಮೇಲಾಧಿಕಾರಿಗಳು ಭೇಟಿ ಕೊಡದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮನೆ ಸಂಪೂರ್ಣ ಹಾನಿಯಾಗಿದ್ದು ಅವರಿಗೆ ಬದಲಿ ವ್ಯವಸ್ಥೆ ಅಗಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಕೈ ಜೋಡಿಸಬೇಕು. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ತಕ್ಷಣ ಭೇಟಿ ನೀಡಿ ಅವರಿಗೆ ಮನೆ ನಿರ್ಮಾಣಕ್ಕೆ ಸಹಾಯ

ಸಂಪಾಜೆ : ಗಾಳಿ ಮಳೆಗೆ ಮನೆ ಧ್ವಂಸ,ಸ್ಥಳಕ್ಕೆ ಭೇಟಿ ನೀಡದ ಮೇಲಾಧಿಕಾರಿಗಳು Read More »

ಅರಂತೋಡು : ಕಾಡು ಕೋಣ ತಿವಿದು ಮಹಿಳೆ ಗಂಭೀರ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕರಿಂಬಿ ಮನೆಯ ಶೇಷಮ್ಮ ರವರಿಗೆ ಕಾಡು ಕೋಣ ತಿವಿದು ಗಂಭೀರ ಗಾಯಗೊಂಡು ಅಸ್ಪತ್ರೆಯಲ್ಲಿ ದಾಖಲಗಿದ್ದಾರೆ.ಅವರು ತೋಟದಲ್ಲಿ ಕೊಕ್ಕೋ ಕೊಯ್ಯುವ ವೇಳೆ ಕಾಡುಕೋಣ ದಾಳಿ ಮಾಡಿ ಗಂಭೀರ ಗಾಯಗೊಂಡಿರು .ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.ಕೋಣದ ದಾಳಿಯಿಂದ ಮಹಿಳೆಯ ತೊಡೆಯ ಭಾಗ ಹಾಗೂ ಇತರೆಡೆಗೆ ಗಂಭೀರ ಗಾಯವಾಗಿವೆ.

ಅರಂತೋಡು : ಕಾಡು ಕೋಣ ತಿವಿದು ಮಹಿಳೆ ಗಂಭೀರ Read More »

ನಾಳೆ ಪವರ್ ಕಟ್

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ ಫೆ. 26 ಗುರುವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ 1- ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಟಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ ಪವರ್ ಕಟ್ Read More »

ಜಗಳ ಬಿಡಿಸಲು ಹೋದ ವಿದ್ಯಾರ್ಥಿಯ ಭೀಕರ ಕೊಲೆ

ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ಜಗಳ ಬಿಡಿಸಲು ಹೋಗಿದ್ದ 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ನನ್ನು 9ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬರುತ್ತಿದ್ದಾಗ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅದನ್ನು ತಪ್ಪಿಸಲು ಹೋದ ಸಂಕೇತ್‌ಗೆ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.

ಜಗಳ ಬಿಡಿಸಲು ಹೋದ ವಿದ್ಯಾರ್ಥಿಯ ಭೀಕರ ಕೊಲೆ Read More »

ದ.ಕ ಜಿಲ್ಲೆಯ ಬಾಳೆ ಎಲೆಗೆ ಕೇರಳದಲ್ಲಿ ಭಾರೀ ಬೇಡಿಕೆ

ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೆಳೆಯುವ ಕದಳಿ ಬಾಳೆ ಎಲೆಗಳಿಗೆ ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ವಿಶೇಷವಾಗಿ ಹಬ್ಬ -ಜಾತ್ರೆ, ಮದುವೆ ಸಮಾರಂಭ ಮತ್ತು ದೇವಸ್ಥಾನಗಳ ಅನ್ನಸಂತರ್ಪಣೆ ಕಾರ್ಯಕ್ರಮ ಗಳ ಸಂದರ್ಭಗಳಲ್ಲಿ ಈ ಬಾಳೆ ಎಲೆಗಳಿಗೆ ಭಾರೀ ಬೇಡಿಕೆ ಇರುತ್ತದೆ.ಕೇರಳದಲ್ಲಿ ನಡೆಯುವ ವಿಷು ಸಹಿತ ವಿವಿಧ ಹಬ್ಬಗಳು ಹಾಗೂ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಬಾಳೆ ಎಲೆಗಳ ಆವಶ್ಯಕತೆ ಇರುತ್ತದೆ. ಕೇರಳದಲ್ಲಿ ಸಾಂಪ್ರದಾಯಿಕ ಶೈಲಿಯ ಊಟಕ್ಕೆ ಪ್ರಾಧಾನ್ಯತೆ ನೀಡಲಾಗುವ ಕಾರಣ ವ್ಯಾಪಾರಿಗಳು ದ.ಕ. ಹಾಗೂ

ದ.ಕ ಜಿಲ್ಲೆಯ ಬಾಳೆ ಎಲೆಗೆ ಕೇರಳದಲ್ಲಿ ಭಾರೀ ಬೇಡಿಕೆ Read More »

error: Content is protected !!
Scroll to Top