Author name: Tejas

ನಾಳೆ : ಪುನ್ಚತ್ತಾರು ಕರಿಮಜಲು ವಿಷ್ಣು‌ನಗರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಪೂರ್ವಬಾವಿ ಸಭೆ

ಪುನ್ಚತ್ತಾರು ಕರಿಮಜಲು ವಿಷ್ಣು‌ನಗರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏಪ್ರಿಲ್ 2,3,4 ರಂದು ನಡೆಯಲಿದ್ದು ಇದರ ಪೂರ್ವಬಾವಿ ಸಭೆ ನಾಳೆ( ಫೆ22 ) ರಂದು ಶ್ರೀ ದೈವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಎಲ್ಲಾ ಭಕ್ತರು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು ಹಾಗೂ ಆಡಳಿತ ಮೊಕ್ತೇಸರಾದ ವೆಂಕಟ್ರಮಣ ಆಚಾರ್ಯ ವಿಷ್ಣುಪುರ ವಿನಂತಿಸಿಕೊಂಡಿದ್ದಾರೆ.

ನಾಳೆ : ಪುನ್ಚತ್ತಾರು ಕರಿಮಜಲು ವಿಷ್ಣು‌ನಗರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಪೂರ್ವಬಾವಿ ಸಭೆ Read More »

25 ಕೋಟಿ ಅನುದಾನ ಅಧಿಕೃತ ಪ್ರಕಟಣೆ ಅಲ್ಲ- ಸುಳ್ಯ ಶಾಸಕ ಕಚೇರಿ ಪ್ರಕಟಣೆ

ಸುಳ್ಯ:ಮುಖ್ಯಮಂತ್ರಿ ವಿಶೇಷ ಅನುದಾನ 25 ಕೋಟಿ ಎಂಬ ವಿಷಯದಲ್ಲಿ ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ವಿವರ ಶಾಸಕರ ಅಧಿಕೃತ ಪ್ರಕಟಣೆ ಅಲ್ಲ. ಮುಖ್ಯಮಂತ್ರಿ ಮೂಲ ಸೌಕರ್ಯ ನಿಧಿ 25ಕೋಟಿ ಅನುದಾನ ಹಂಚಿಕೆಯ ವಿವರಗಳು ಪ್ರಕಟವಾಗಿದ್ದು ಇದು ಶಾಸಕರ ಕಛೇರಿಯಿಂದ ಅಧಿಕೃತವಾಗಿ ಕೊಟ್ಟಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕೃತವಾಗಿ ಶಾಸಕರ ಕಚೇರಿ ಪ್ರಕಟಣೆ ಹೊರಡಿಸಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

25 ಕೋಟಿ ಅನುದಾನ ಅಧಿಕೃತ ಪ್ರಕಟಣೆ ಅಲ್ಲ- ಸುಳ್ಯ ಶಾಸಕ ಕಚೇರಿ ಪ್ರಕಟಣೆ Read More »

ನಾಳೆ (ಫೆ.21) ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಅರಂತೋಡು-ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿತಾರೀಕು 21-02-2026ನೇ ಶನಿವಾರದಿಂದ ತಾರೀಕು 23-02-2026ನೇ ಸೋಮವಾರದ ತನಕ ವರ್ಷಂಪ್ರತಿ ನಡೆಯುವಕಾಲಾವಧಿಯ ಹಾಗೂ ಹರಕೆಯ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.ಆ ಪ್ರಯುಕ್ತ ನಡೆಯುವ ಶ್ರೀ ದೈವತಾಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿಯೂ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತನು-ಮನ-ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ದೈವಸ್ಥಾನದ ಆಡಳಿ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.ದಿನಾಂಕ 21-02-2026ನೇ ಶನಿವಾರ ಅಪರಾಹ್ನ ಗಂಟೆ 3-00ಕ್ಕೆ ಗುಳಿಗನ ಕೋಲ ಮತ್ತು ಪ್ರಸಾದ ವಿತರಣೆ.ರಾತ್ರಿ ಗಂಟೆ 8-30ರಿಂದ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ

ನಾಳೆ (ಫೆ.21) ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ Read More »

ಫೆ. 23 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಡೈಮಂಡ್ ಖರೀದಿ ಹಬ್ಬ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ ಡೈಮಂಡ್ ಖರೀದಿ ಹಬ್ಬ ಫೆಬ್ರವರಿ 23 ರವರೆಗೆ ನಡೆಯಲಿದೆ. ಸ್ವರ್ಣಂ ಜ್ಯುವೆಲ್ಸ್ ಮಳಿಗೆಯ ಗ್ರಾಹಕರಿಗೆ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ ಫೆ ಡೈಮಂಡ್ ಖರೀದಿ ಹಬ್ಬ ಫೆ.23 ತರವರೆಗೆ ಆಯೋಜಿಸಿದ್ದು ಪ್ರತೀ ಡೈಮಂಡ್ ಆಭರಣಗಳಿಗೆ ಪ್ರತೀ ಕ್ಯಾರೆಟ್ ಮೇಲೆ ರೂ. 15000 ಕಡಿತ ಹಾಗೂ ಚಿನ್ನಾಭರಣ ಖರೀದಿಗೆ ಪ್ರತೀ ಗ್ರಾಂ ಗೆ ರೂ 250

ಫೆ. 23 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಡೈಮಂಡ್ ಖರೀದಿ ಹಬ್ಬ Read More »

ಸಂಪಾಜೆ ಗ್ರಾಮ ಪಂಚಾಯತ್ ನಿಯೋಗದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ನಿಯೋಗದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ರವರನ್ನು ಬೇಟಿ ಮಾಡಲಾಯಿತು ಕರ್ನಾಟಕ ಸರಕಾರದ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿ ಅಧ್ಯಕ್ಷ ರಾದ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಮಾಜಿ ಅಧ್ಯಕ್ಷರು ಸೊಸೈಟಿ ನಿರ್ದೇಶಕರಾದ ಜಿ ಕೆ ಹಮೀದ್ ಗೂನಡ್ಕ, ಶ್ರೀಮತಿ ಸುಂದರಿ ಮುಂಡಡ್ಕ. ಮಾಜಿ ಉಪಾಧ್ಯಕ್ಷರು ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸೊಸೈಟಿ ನಿರ್ದೇಶಕರಾದ ಎಸ್ ಕೆ . ಹನೀಫ್ ಸಂಪಾಜೆ.

ಸಂಪಾಜೆ ಗ್ರಾಮ ಪಂಚಾಯತ್ ನಿಯೋಗದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ Read More »

ಹಳದಿ ರೋಗ ಹಾಗೂ ಎಲೆಚುಕ್ಕಿ ಬಾಧೆಗೆ ವಿಶೇಷ ವ್ಯಾಕೇಜ್ ಘೋಷಿಸಲು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ಸುಪ್ರಿತ್ ಮೋಂಟಡ್ಕ

ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಯವರನ್ನು ಸುಪ್ರೀತ್ ಮೋoಟಡ್ಕ ರವರು ಸಚಿವರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಹಳದಿ ರೋಗ ಹಾಗೂ ಚುಕ್ಕಿರೋಗ ಬಾಧೆ ಕುರಿತು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ವಿನಂತಿ ಮಾಡಿ ಮನವಿ ಸಲ್ಲಿಸಿದರು.ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.ಸುಳ್ಯ ಕ್ಷೇತ್ರದಲ್ಲಿ ಅಡಿಕೆ ಬೆಳೆಗೆ ತೀವ್ರವಾಗಿ ಹಳದಿ ರೋಗ ಹಾಗೂ ಎಲೆ ಚುಕ್ಕಿರೋಗ (ಎಲೆ ಚಿಕ್ಕಿ ರೋಗ) ವ್ಯಾಪಕವಾಗಿ ಹರಡಿಕೊಂಡಿದ್ದು

ಹಳದಿ ರೋಗ ಹಾಗೂ ಎಲೆಚುಕ್ಕಿ ಬಾಧೆಗೆ ವಿಶೇಷ ವ್ಯಾಕೇಜ್ ಘೋಷಿಸಲು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ಸುಪ್ರಿತ್ ಮೋಂಟಡ್ಕ Read More »

ನಾಳೆ KSRTC ನೌಕರರ ಪ್ರತಿಭಟನೆ! ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ನಾಳೆ ರಾಜ್ಯದ KSRTC ನೌಕರರ ‘ಬೆಂಗಳೂರು ಚಲೋ’ ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ವೇತನ ಪರಿಷ್ಕರಣೆ ಹಾಗೂ ಬಾಕಿ ಇರುವ ಹಣದ ಪಾವತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಈ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕರ್ತವ್ಯಕ್ಕೆ ಗೈರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಮತ್ತು ವೇತನ ಕಡಿತಗೊಳಿಸುವುದಾಗಿ KSRTC ವ್ಯವಸ್ಥಾಪಕ ನಿರ್ದೇಶಕರು (MD) ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ನಾಳೆ KSRTC ನೌಕರರ ಪ್ರತಿಭಟನೆ! ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ Read More »

ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡಕ್ಕೆ 17 ರನ್ ಗಳ ಅಂತರದ ಭರ್ಜರಿ ಗೆಲುವು

ಅಹ್ಮದಾಬಾದ್‌ನಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 194 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ 176 ರನ್ ಗಳಿಸಿ ಸೋಲು ಕಂಡಿದೆ. ಈ ಮೂಲಕ ಟೀಂ ಇಂಡಿಯಾ 17 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡಕ್ಕೆ 17 ರನ್ ಗಳ ಅಂತರದ ಭರ್ಜರಿ ಗೆಲುವು Read More »

ಸಂಪಾಜೆ : ಕೊಡಗು ದ.ಕ ಗಡಿಭಾಗದಲ್ಲಿ ಭಾರೀ ಮಳೆ

ಅರಂತೋಡು : ಫೆ.18ರಂದು ದ.ಕ ಕೊಡಗು ಗಡಿಭಾಗವಾದ ಸಂಪಾಜೆ ಚೆಕ್ ಪೋಸ್ಟ್ ವಠಾರದಲ್ಲಿ ಸಾಧಾರಣ ಮಳೆ ಸುರಿದ ಘಟನೆ ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿನ ವಾತಾವರಣ ಇದ್ದು, ಇಂದು ಸುಮಾರು 11 ಗಂಟೆಯ ವೇಳೆಗೆ ಮೋಡ ಕವಿದ ವಾತಾವರಣವಿತ್ತು. ಸಂಜೆ ೪.೩೦ರ ವೇಳೆಗೆ ಧಾರಾಕಾರ ಮಳೆ ಸುರಿಯಿತು. ಸುಮಾರು ೧೦ ನಿಮಿಷಗಳ ಕಾಲಮಳೆ ಸುರಿದು ಇಳೆ ತಂಪಾಯಿತು.ಅರೆಕಲ್ಲು,ಕೊಯನಾಡು,ಜೋಡುಪಾಲ,ಮದೆನಾಡು,ದೇವರಕೊಲ್ಲಿ ಇತರೆಡೆ ಮಳೆ ಸುರಿದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಸುಳ್ಯ ನಗರ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಕಳೆದ ಮೂರು ದಿವಸಗಳಿಂದ

ಸಂಪಾಜೆ : ಕೊಡಗು ದ.ಕ ಗಡಿಭಾಗದಲ್ಲಿ ಭಾರೀ ಮಳೆ Read More »

ಕೇರಳ ಕ್ಯಾಲೀಕಟ್ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಎಂ ಕೆ ರಾಘವನ್ ರವರಿಗೆ ಕಾಂಗ್ರೆಸ್ ಮುಖಂಡರಿಂದ ಪೈಚಾರ್ ನಲ್ಲಿ ಸ್ವಾಗತ

ಕೇರಳದ ಕ್ಯಾಲಿಕಟ್ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಎಂ ಕೆ ರಾಘವನ್ ರವರು ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುವ ಸಂದರ್ಭದಲ್ಲಿ ಪೈಚಾರ್ ಜಂಕ್ಷನ್ ನಲ್ಲಿ ಸುಳ್ಯದ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್, ಪ್ರಮುಖರಾದ ಕೆ ಗೋಕುಲ್ ದಾಸ್ ಸುಳ್ಯ, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ನಂದರಾಜ್ ಸಂಕೇಶ್, ಮೋಹಿತ್ ಹರ್ಲಡ್ಕ, ಸುರೇಶ್ ಕಂದಡ್ಕ, ಭೋಜಪ್ಪ

ಕೇರಳ ಕ್ಯಾಲೀಕಟ್ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಎಂ ಕೆ ರಾಘವನ್ ರವರಿಗೆ ಕಾಂಗ್ರೆಸ್ ಮುಖಂಡರಿಂದ ಪೈಚಾರ್ ನಲ್ಲಿ ಸ್ವಾಗತ Read More »

error: Content is protected !!
Scroll to Top