Author name: Tejas

ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋoಟಡ್ಕರವರನ್ನು ಆಯ್ಕೆ‌ಮಾಡಲಾಗಿದೆ. ಮೇ 14ರಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್ ಇವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾಧ್ಯಮ ಸಂಯೋಜಕರ ಆಯ್ಕೆ ಮಾಡಲಾಗಿದೆ.ಸುಪ್ರೀತ್ ಮೋಂಟಡ್ಕ ಅವರು ಚಿತ್ರರಂಗ,ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ Read More »

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು : ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು,ಹಿಂದು ಧರ್ಮ ಅತ್ಯಂತ ಶ್ರೇಷ್ಠ ಅದನ್ನು ಆಚರಣೆ ಮಾಡಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದುಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು ಹೇಳಿದರು.ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸುಮಾರು74 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಾತಾ ಸಭಾಭವನದ ಲೋಕಾರ್ಪಣೆ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಾಚನ ಮಾಡಿದರು.ಈ ಸಂದರ್ಭದಲ್ಲಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಕು.ಭಾಗೀರಥಿ ಮುರುಳ್ಯ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾ‌ರ್ ಪಂಜ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರಿ ಉಮಾದೇವಿ

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು : ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು Read More »

ಮೇನಾಲ : ರಾಜಕೀಯ ಧುರೀಣ ನವೀನ್ ರೈ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ

ರಾಜಕೀಯ ಧುರೀಣ, ಪಕ್ಷದ ಕಾರ್ಯಕರ್ತ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ.ನವೀನ್ ರೈ ಮೇನಾಲ ಅವರ ಸ್ಮರಣಾರ್ಥ ಅವರ ಅಭಿಮಾನಿಗಳು ನಿರ್ಮಿಸಿದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಮೇ 14ರಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಸುಳ್ಯ ಭಾಜಪಾ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಹಿರಿಯರು,ಪ್ರಮುಖ ಕಾರ್ಯಕರ್ತರು,ನವೀನ್ ರೈ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

ಮೇನಾಲ : ರಾಜಕೀಯ ಧುರೀಣ ನವೀನ್ ರೈ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ Read More »

ಮೇ 15ಕ್ಕೆ ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನದಲ್ಲಿ ವೈದಿಕ ಕಾರ್ಯಕ್ರಮಗಳು

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನ ದಲ್ಲಿ ಕಳೆದ ತಿಂಗಳು ನಡೆದ ಸ್ವರ್ಣ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ದಿನಾಂಕ 15-5-26 ಶುಕ್ರವಾರ ಬೆಳಗ್ಗೆ 8.30ಕ್ಕೆ ದೇಗುಲದ ಎದುರು ಇರುವ ಚಾವಡಿಯಿಂದ ಶ್ರೀ ಉಳ್ಳಾಕ್ಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳ ಭoಡಾರಗಳನ್ನು ಗರಡಿ ಬೈಲ್ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆಗೊಂಡು ಹೋಗಿ ಅಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಸ್ವಸ್ತಿ

ಮೇ 15ಕ್ಕೆ ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನದಲ್ಲಿ ವೈದಿಕ ಕಾರ್ಯಕ್ರಮಗಳು Read More »

ಅಜ್ಜಾವರ ಮಹಿಷಮರ್ದಿನಿ ದೇವಳಕ್ಕೆ ಪಾದಾರ್ಪಣೆ ಮಾಡಿದ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ವಿಧುಶೇಖರಭಾರತೀ ಶ್ರೀಗಳು

ಅಜ್ಜಾವರದ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀ ಮಾತಾ ಸಭಾಭವನದ ಉದ್ಘಾಟನೆಗೊಳ್ಳಲಿದ್ದು ಇಂದು(ಮೇ 13ರಂದು) ಶೃಂಗೇರಿ ಮಠದ ವಿಧುಶೇಖರಭಾರತೀ ಶ್ರೀಗಳು ಅಜ್ಜಾವರ ಮಹಿಷಮರ್ದಿನಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.ಅವರನ್ನು ದೇವಸ್ಥಾನದ ವತಿಯಿಂದ ಭವ್ಯ ಸ್ವಾಗತ ಕೋರಿ ಬರಮಾಡಿ ಕೊಳ್ಳಲಾಯಿತು.ಗ್ರಾಮ ಪಂಚಾಯತ್‌ ಕಚೇರಿಯ ಬಳಿಯಲ್ಲಿ ಸ್ವಾಮೀಜಿಯವರಿಗೆ ಸ್ವಾಗತ ಕೋರಲಾಯಿತು.ಪೂರ್ಣಕುಂಭದೊಂದಿಗೆ ವಾದ್ಯಾ ಬ್ಯಾಂಡ್ ಸೆಟ್ ನೊಂದಿಗೆ ಅದ್ದೂರಿ ಸ್ವಾಗತ ನೀಡಿಲಾಯಿತು.ಬಳಿಕ ಧೂಳೀ ಪಾದಪೂಜೆ, ರಾತ್ರಿ ದೇವರನಾಮಗಳು, ರಾತ್ರಿ ಶ್ರೀ ಮಜ್ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ, ಅನ್ನಸಂತರ್ಪಣೆ ನಡೆಯಿತು. ಮೇ 14ರಂದುಬೆಳಿಗ್ಗೆ 7

ಅಜ್ಜಾವರ ಮಹಿಷಮರ್ದಿನಿ ದೇವಳಕ್ಕೆ ಪಾದಾರ್ಪಣೆ ಮಾಡಿದ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ವಿಧುಶೇಖರಭಾರತೀ ಶ್ರೀಗಳು Read More »

ಸುಳ್ಯ ತಾಲೂಕಿನ ನೂತನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ವೆಂಕಪ್ಪ ಗೌಡ ಆಯ್ಕೆ

ಸುಳ್ಯ ತಾಲೂಕಿನ ನೂತನ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ವಕೀಲರಾದ ವೆಂಕಪ್ಪ ಗೌಡ ಯವರು ಸರ್ವಾನುಮತ ದಿಂದ ಆಯ್ಕೆಯಾಗಿರುತ್ತಾರೆ.

ಸುಳ್ಯ ತಾಲೂಕಿನ ನೂತನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ವೆಂಕಪ್ಪ ಗೌಡ ಆಯ್ಕೆ Read More »

ಮೇ 17ಕ್ಕೆ ಅರಮನೆಗಯ ಬಲ್ನಾಡ್ ಹೊಳೆಗೆ ನಿರ್ಮಾಣವಾದ ನೂತನ ಸೇತುವೆ ಶಾಸಕರಿಂದ ಉದ್ಘಾಟನೆ

ಬಹು ವರ್ಷಗಳ ಬೇಡಿಕೆಯಾದ ಅರಂತೋಡು ಸಮೀಪದಅರಮನೆಗಯ ಬಲ್ನಾಡ್ ಹೊಳೆಗೆ ಶಾಸಕರ ಅನುಮೋದನೆಯಿಂದ ರಾಜ್ಯ ಸರ್ಕಾರದ ವಿಪತ್ತು ಸಂಚಯನ ನಿಧಿಯಿಂದ (SDMF) ಅನುದಾನದಿಂದ ನಿರ್ಮಾಣವಾದ ನೂತನ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಮೇ.17ರಂದು ನಡೆಯಲಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷ ದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮೇ 17ಕ್ಕೆ ಅರಮನೆಗಯ ಬಲ್ನಾಡ್ ಹೊಳೆಗೆ ನಿರ್ಮಾಣವಾದ ನೂತನ ಸೇತುವೆ ಶಾಸಕರಿಂದ ಉದ್ಘಾಟನೆ Read More »

ಗೌಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಹೆಸರು ನೋಂದಾವಣೆಗೆ ಅವಕಾಶ

ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ ಇದರ ವಾರ್ಷಿಕ ಕಾರ್ಯಕ್ರಮ ಹಾಗೂ ವಧು-ವರರ ಗೃಹ ಪ್ರವೇಶದ ಶುಭಸಮಾರಂಭವು 2026ರ ಮೇ ತಿಂಗಳ 23 ರಂದು ಹಮ್ಮಿಕೊಂಡಿದ್ದು, ಸುಳ್ಯ ತಾಲೂಕು ಮತ್ತು ಕೊಡಗು ಜಿಲ್ಲೆಯ ಚೆಂಬು, ಪೆರಾಜೆ, ಕೊಡಗು ಸಂಪಾಜೆ, ಕೇರಳ ರಾಜ್ಯದ ದೇಲಂಪಾಡಿ, ಬಂದಡ್ಕ, ಕಲ್ಲಪಳ್ಳಿ ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಗೌಡ ಸಮಾಜದ ವಿದ್ಯಾರ್ಥಿಗಳಿಗೆ ಸಂಘದಿಂದ

ಗೌಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಹೆಸರು ನೋಂದಾವಣೆಗೆ ಅವಕಾಶ Read More »

ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮೇ 15ಕ್ಕೆ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 15-05-2026 ರ ವೃಷಭ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ:7022077809

ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮೇ 15ಕ್ಕೆ ಅಗೇಲು ಸೇವೆ Read More »

ಅಜ್ಜಾವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾಸ್ತು ರಾಕ್ಷೋಘ್ನ ಹೋಮ

ಶ್ರೀಮತಾ ಸಭಾಭವನ ಲೋಕಾರ್ಪಣಾ ಅಂಗವಾಗಿ ಮೇ.12ರಂದು ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ವಾಸ್ತು ರಾಕ್ಷೋಘ್ನ ಹೋಮ ನಡೆಯಿತು.ಶ್ರೀ ಮಹಿಷಮರ್ದಿನೀ ಸೇವಾ ಟ್ರಸ್ಟ್ ಅಜ್ಜಾವರ ಇದರ ಅಧ್ಯಕ್ಷರಾದ ಶ್ರೀ ಶಿವರಾವ್ ಬಯoಬು, ಕಾರ್ಯದರ್ಶಿ ಶ್ರೀ ಭಾಸ್ಕರ್ ರಾವ್ ಬಯoಬು , ಉಪಾಧ್ಯಕ್ಷರಾದ ಸವೇರಾ ರೈ, ಉತ್ಸವ ಸಮಿತಿ ಅಧ್ಯಕ್ಷರಾದ ಬೆಳ್ಯಪ್ಪ ಮುಡೂರು, ಶ್ರೀಮತಾ ಸಭಾಭವನ ಲೋಕಾರ್ಪಣಾ ಸಮಿತಿಯ ಪ್ರದಾನ ಸಂಚಾಲಕರಾದ ಸುಭೋದ್ ಶೆಟ್ಟಿ ಮೇನಾಲ, ಸಂಚಾಲಕರಾದ ರವೀಶ್ ರಾವ್ ಬಯoಬು , ಶ್ರೀ ರಾಜೇಶ್ ರಾವ್ ಬಯಂಬು,ಶ್ರೀ ಕೃಷ್ಣ

ಅಜ್ಜಾವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾಸ್ತು ರಾಕ್ಷೋಘ್ನ ಹೋಮ Read More »

error: Content is protected !!
Scroll to Top